ಫೆ.8ರಂದು ದೆಹಲಿ ವಿಧಾನಸಭಾ ಚುನಾವಣೆ, ಫೆ.11ರಂದು ಫಲಿತಾಂಶ

ನವದೆಹಲಿ, ಜ 6        ದೆಹಲಿ ವಿಧಾನಸಭೆಗೆ ಫೆಬ್ರವರಿ 8ರಂದು ಚುನಾವಣೆ ನಡೆಯಲಿದೆ. 70 ವಿಧಾನಸಭಾ ಕ್ಷೇತ್ರಗಳ ಚುನಾವಣೆ ಫಲಿತಾಂಶ ಫೆ.11ರಂದು ಪ್ರಕಟಗೊಳ್ಳಲಿದೆ.  

ಒಂದು ಹಂತದಲ್ಲಿ ನಡೆಯಲಿರುವ ಈ ಚುನಾವಣೆಗಾಗಿ 13,750 ಮತಗಟ್ಟೆಗಳು, 90 ಸಾವಿರ ಸಿಬ್ಬಂದಿ ನಿಯೋಜಿಸಲಾಗಿದೆ. ಈ ಸಂಬಂಧ ಜ. 14ರಂದು ಅಧಿಸೂಚನೆ ಹೊರಬೀಳಲಿದ್ದು, ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ಚುನಾವಣಾ ಆಯೋಗದ ಆಯುಕ್ತ ಸುನೀಲ್ ಅರೋರ ಮತ್ತು ಚುನಾವಣಾಧಿಕಾರಿ ಅಶೋಕ್ ಲಾವಸೋ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.