ಡೆಲ್ ಪೊಟ್ರೊ ಮರಳುವಿಕೆ ಮುಂದೂಡಿದ ವೈದ್ಯರು

ಬ್ಯೂನಸ್ ಐರಿಸ್, ಅ 11:     ಗಾಯಾಳು ಜ್ಯೂನ್ ಮಾರ್ಟ್ನ್ ಡೆಲ್ ಪೊಟ್ರೊ ಅವರು ವೈದ್ಯರ ಸಲಹೆಯ ಮೇರಗೆ ಸ್ಪರ್ಧಾತ್ಮಕ ಟೆನಿಸ್ ವೃತ್ತಿ ಜೀವನಕ್ಕೆ ಮರಳುವ ಅವಧಿಯನ್ನು ಮುಂದೂಡಿದ್ದಾರೆ ಎಂದು ಅರ್ಜೆಂಟೀನಾ ವ್ಯವಸ್ಥಾಪಕ ತಂಡ ತಿಳಿಸಿದೆ.  ಕಳೆದ ಜೂನ್ ತಿಂಗಳಿನಿಂದ ಪೊಟ್ರೊ ಆಡುತ್ತಿಲ್ಲ. ಒಂಬತ್ತು ತಿಂಗಳ ಬಳಿಕ ಅಂಗಳಕ್ಕೆ ಮರಳಿದ್ದ ಅವರು ಲಂಡನ್ನಲ್ಲಿ  ನಡೆದಿದ್ದ ಎಟಿಪಿ ಟೂರ್ನಿಯ ವೇಳೆ ಎರಡನೇ ಬಾರಿ ಬಲ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದರು.  31ರ ಪ್ರಾಯದ ಡೆಲ್ ಪೊಟ್ರೊ ಅವರ ವೈದ್ಯರ ಹೇಳಿಕೆ ಪ್ರಕಾರ, ಇನ್ನೂ ಗಾಯದಿಂದ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ಆರಂಭವಾಗುವ ವಿಯನ್ನಾ ಹಾಗೂ  ಸ್ಟಾಕ್ಹೋಮ್ ಎಟಿಪಿ ಟೂರ್ನಿಗಳನ್ನು ವಿಥ್ ಮಾಡಿಕೊಳ್ಳುವಂತೆ ಅವರಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಆದ್ದರಿಂದ, ಜ್ಯೂನ್ ಮಾರ್ಟ್ನ್ ಡೆಲ್ ಪೊಟ್ರೊ ಅವರು ಮತ್ತೇ ವಿಶ್ರಾಂತಿಗೆ ಮೊರೆ ಹೋಗಲಿದ್ದಾರೆ. ಮುಂದಿನ ನವೆಂಬರ್ನಲ್ಲಿ ಆರಂಭವಾಗುವ ಬ್ಯೂನಸ್ ಐರಿಸ್ನಲ್ಲಿ ರೋಜರ್ ಫೆಡರರ್ ವಿರುದ್ಧ ಪಂದ್ಯಕ್ಕೆ ಮರಳಲಿದ್ದಾರೆ ಎಂಬ ಭಾವಿಸಲಾಗಿದೆ.