ನವದೆಹಲಿ 24: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸಕರ್ಾರ ಅಧಿಕಾರಕ್ಕೆ(2014ರಿಂದ 2017) ಬಂದ ನಂತರ ಸ್ವಿಸ್ ನ್ಯಾಶನಲ್ ಬ್ಯಾಂಕ್ ನಲ್ಲಿ ಭಾರತೀಯರು ಠೇವಣಿ ಇಡುವ ಹಣದ ಪ್ರಮಾಣ ಶೇ.80ರಷ್ಟು ಕಡಿಮೆಯಾಗಿದೆ ಎಂದು ವಿತ್ತ ಸಚಿವ ಪಿಯೂಶ್ ಗೋಯಲ್ ಮಂಗಳವಾರ ತಿಳಿಸಿದ್ದಾರೆ.
ಸ್ವಿಸ್ ಬ್ಯಾಂಕ್ ನಲ್ಲಿ ಎಷ್ಟು ಹಣ ಇದೆ ಎಂಬ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಉತ್ತರಿಸಿದ ಅವರು, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ ಭಾರತೀಯರ(ವೈಯಕ್ತಿಕ) ಸಾಲ ಮತ್ತು ಠೇವಣಿಯಲ್ಲಿ ಶೇ.34.5ರಷ್ಟು ಕಡಿಮೆಯಾಗಿದೆ ಎಂದು ಹೇಳಿದರು.
ಆದರೆ ಸ್ವಿಸ್ ಬ್ಯಾಂಕ್ ಸಂಬಂಧಿಸಿದ ಮಾಹಿತಿ ಮಾಧ್ಯಮಗಳಲ್ಲಿ ತಪ್ಪಾಗಿ ಅಥರ್ೆಸಲಾಗಿದೆ ಎಂದ ಗೋಯಲ್, ಬ್ಯಾಂಕ್ ಆಫ್ ಇಂಟರ್ ನ್ಯಾಶನಲ್ ಸೆಟ್ಲ್ ಮೆಂಟ್ ಡಾಟಾದ ಪ್ರಕಾರ 2017ರ ಸ್ವಿಟ್ಜ್ ರ್ ಲ್ಯಾಂಡ್ ನ ಭಾರತೀಯ ನಿವಾಸಿಗಳ ಆಸ್ತಿಯಲ್ಲಿ ಶೇ.34.5ರಷ್ಟು ಕುಸಿತ ಕಂಡಿದೆ.
ಇದು 2016ಕ್ಕೆ ಹೋಲಿಸಿದಲ್ಲಿ ಈ ಬಾರಿಗಿಂತ ಕಡಿಮೆಯಾಗಿದೆ. ಭಾರತೀಯರ ಆದಾಯ(2016ರ) ಶೇ.50ರಷ್ಟು ಹೆಚ್ಚಳವಾಗಿದೆ ಎಂಬ ಮೊದಲಿನ ಡಾಟಾದ ಮಾಹಿತಿಯನ್ನು ತಪ್ಪಾಗಿ ಗ್ರಹಿಸಲಾಗಿದೆ ಎಂದು ವಿವರಿಸಿದ್ದಾರೆ.