ಬಾಗಲಕೋಟೆ 30 : ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಎಚ್.ಐ.ವಿ ಸೋಂಕಿತರ ಪ್ರಮಾಣದಲ್ಲಿ ಇಳಿಮುಖವಾಗಿರುವುದು ಕಂಡುಬಂದಿದೆ. ಕಳೆದ ಸಾಲಿನಿಂದ ಪ್ರಸಕ್ತ ಸಾಲಿಗೆ ಸಾಮಾನ್ಯರಲ್ಲಿ ಶೇ.2.7 ರಿಂದ ಶೇ.2.6ಕ್ಕೆ ಇಳಿಮುಖವಾದರೆ, ಗಭರ್ಿಣಿಯರಲ್ಲಿ ಶೇ.0.16 ರಿಂದ ಶೇ.0.09ಕ್ಕೆ ಇಳಿಮುಖವಾಗಿರುವುದು ಕಂಡುಬಂದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎ.ಎನ್.ದೇಸಾಯಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 12 ಐಸಿಟಿಸಿ ಕೇಂದ್ರಗಳು, 4 ಏ.ಆರ್.ಟಿ ಕೇಂದ್ರಗಳು ಮತ್ತು 9 ಲಿಂಕ್ ಏ.ಆರ್.ಟಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಈ ಕೇಂದ್ರಗಳ ಅಡಿಯಲ್ಲಿ ಪ್ರಾರಂಭದಿಂದ ಅಕ್ಟೋಬರ 2018ರ ಅಂತ್ಯದ ವರೆಗೆ 31312 ಸೋಂಕಿತರನ್ನು ನೋಂದಣಿ ಮಾಡಿಕೊಳ್ಳಲಾಗಿದ್ದು, ಇದರಲ್ಲಿ 15793 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಂಕಿತರ ಪ್ರಮಾಣದಲ್ಲಿ ಕಳೆದ ಸಾಲಿನಿಂದ ಅಕ್ಟೋಬರ ಅಂತ್ಯಕ್ಕೆ ಬಾಗಲಕೋಟ ತಾಲೂಕಿನಲ್ಲಿ ಸಾಮಾನ್ಯರಲ್ಲಿ ಶೇ.3.1 ರಿಂದ 2.48 ಮತ್ತು ಗಭರ್ಿಣಿ ಸ್ತ್ರೀಯರಲ್ಲಿ ಶೇ.0.13 ರಿಂದ 0.07 ಇಳಿಮುಖವಾಗಿರುವುದು ಕಂಡುಬಂದರೆ, ಜಮಖಂಡಿ ತಾಲೂಕಿನಲ್ಲಿ ಸಾಮಾನ್ಯ ಜನರಲ್ಲಿ ಶೇ.3.73 ರಿಂದ ಶೇ.3.35 ಹಾಗೂ ಗಭರ್ಿಣಿಯರಲ್ಲಿ ಶೇ.0.16 ರಿಂದ ಶೇ.0.11, ಮುಧೋಳ ತಾಲೂಕಿನಲ್ಲಿ ಸಾಮಾನ್ಯರಲ್ಲಿ ಶೇ.4.2 ರಿಂದ ಶೇ.4.14, ಗಭರ್ಿಣಿಯರಲ್ಲಿ ಶೇ.0.16 ರಿಂದ ಶೇ.0.08 ಇಳಿಮುಖವಾಗಿದೆ.
ಬಾದಾಮಿ ತಾಲೂಕಿನಲ್ಲಿ ಸಾಮಾನ್ಯ ಜನರಲ್ಲಿ ಶೇ.1.13 ರಿಂದ ಶೇ.1.46 ಎರಿಕೆ ಕಂಡುಬಂದರೆ ಗಭರ್ಿಣಿಯರಲ್ಲಿ ಶೇ.0.11 ರಿಂದ ಶೇ.0.06 ಇಳಿಮುಖವಾಗಿದೆ. ಹುನಗುಂದ ತಾಲೂಕಿನಲ್ಲಿ ಸಾಮಾನ್ಯರಲ್ಲಿ ಶೇ.1.15 ರಿಂದ ಶೇ.0.98 ಮತ್ತು ಗಭರ್ಿಣಿಯರಲ್ಲಿ ಶೇ.0.09 ರಿಂದ ಶೇ.0.04 ಇಳಿಮುಖವಾಗಿದ್ದು ಕಂಡುಬಂದರೆ, ಬೀಳಗಿ ತಾಲೂಕಿನಲ್ಲಿ ಸಾಮಾನ್ಯರಲ್ಲಿ ಶೇ.1.78 ರಿಂದ ಶೇ.2.02ಕ್ಕೆ ಏರಿದರೆ ಗಭರ್ಿಣಿಯರಲ್ಲಿ ಶೇ.0.13 ರಿಂದ ಶೇ.0.3ಕ್ಕೆ ಇಳಿದಿದ್ದು, ಒಟ್ಟಾರೆಯಾಗಿ ಜಿಲ್ಲಾವಾರು ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ.
ಜಿಲ್ಲೆಯಲ್ಲಿರುವ ಒಟ್ಟು 3 ಲೈಂಗಿಕ ರೋಗ ಪತ್ತೆ ಕೇಂದ್ರಗಳಿದ್ದು (ಸುರಕ್ಷಾ ಕ್ಲಿನಿಕ್) ಇವುಗಳ ಅಡಿಯಲ್ಲಿ ಏಪ್ರೀಲ್ ರಿಂದ ಅಕ್ಟೋಬರ-2018 ವರೆಗೆ ಒಟ್ಟು 7207 ಗುರಿಗೆ 7054 ಪರೀಕ್ಷೆ ಮಾಡಲಾಗಿ ಶೇ.97 ರಷ್ಟು ಪ್ರಗತಿ ಸಾಧಿಸಲಾಗಿದೆ. ಅಲ್ಲದೇ ಜಿಲ್ಲೆಯಲ್ಲಿ 7 ರಕ್ತನಿಧಿ ಕೇಂದ್ರಗಳಿದ್ದು, ಅದರಲ್ಲಿ 3 ನ್ಯಾಕೋ ಅನುದಾನಿತ ಕೇಂದ್ರಗಳಿದ್ದು, ಒಂದು ಸರಕಾರಿ ರಕ್ತನಿಧಿ ಕೇಂದ್ರವಿದೆ. ಉಳಿದ ನಾಲ್ಕು ಖಾಸಗಿ ರಕ್ತನಿಧಿ ಕೇಂದ್ರಗಳಾಗಿವೆ. 2018-19ನೇ ಸಾಲಿನ ಏಪ್ರೀಲ್ ನಿಂದ ಅಕ್ಟೋಬರ ವರೆಗೆ 11988 ರಕ್ತದ ಯುನಿಟ್ಗಳನ್ನು ಸಂಗ್ರಹಿಸಲಾಗಿದೆ.
ಜಿಲ್ಲೆಯಲ್ಲಿ ಎಚ್ಐವಿ ನಿಯಂತ್ರಣಕ್ಕಾಗಿ ವಿವಿಧ ಜಾನಪದ ಕಲಾತಂಡಗಳ ಮೂಲಕ ಜನಜಾಗೃತಿ ಕಾರ್ಯಕ್ರಮ, ಗೋಡೆ ಬರಹ, ವಿವಿಧ ಕಾಲೇಜುಗಳಲ್ಲಿ ಮಾಹಿತಿ ಕಾಯರ್ಾಗಾರ, ಪ್ರೌಢಶಾಲಾ ಹಂತದಲ್ಲಿ ಹದಿಹರೆಯದ ಕಾರ್ಯಕ್ರಮ ಹಾಗೂ ರಕ್ತದಾನ ಕುರಿತು ಜಾಗೃತಿ ಜಾಥಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಾದ್ಯಂತ ರೆಡ್ರಿಬ್ಬನ್ ಕ್ಲಬ್ ಮುಖಾಂತರ 60 ಪದವಿ ಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮ, ವಿವಿಧ ಇಲಾಖೆಯ ಸಿಬ್ಬಂದಿಗಳಿಗೆ ತರಬೇತಿ ಹಾಗೂ ಸಮಗ್ರ ಮಾಹಿತಿ ಕಾರ್ಯಕ್ರಮಗಳಡಿಯಲ್ಲಿ 60 ಗೋಡೆ ಬರಹ, 15 ಆಟೋ ಟಾಪ್ ಬ್ಯಾನರ್, ಪ್ರತಿ ತಾಲೂಕಿನಲ್ಲಿ ಧ್ವನಿ ವರ್ಧಕದ ಮೂಲಕ ಜಾಗೃತಿ, ಲೋಕಲ್ ಟಿವಿ ಕೇಬಲ್ ಮೂಲಕ ಸಂದೇಶ ರವಾನೆ, ಪ್ರತಿ ತಾಲೂಕಿನಲ್ಲಿ ಎರಡರಂತೆ ಬೀದಿನಾಟಕ ಪ್ರದರ್ಶನ, ಸ್ಥಳೀಯ ಪತ್ರಿಕೆಯಲ್ಲಿ ಜಾಗೃತಿ ಮಾಹಿತಿ ಪ್ರಕಟಿಸುವುದು ಮತ್ತು ಪತ್ರಿಕಾಗೋಷ್ಠಿ ಏರ್ಪಡಿಸಲಾಗುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆಯು 1988 ರಿಂದ ಡಿಸೆಂಬರ 1ನ್ನು ವಿಶ್ವ ಏಡ್ಸ್ ದಿನವನ್ನಾಗಿ ಆಯೋಜಿಸುತ್ತಾ ಬಂದಿದ್ದು, 2011 ರಿಂದ ಎಚ್ಐವಿ/ಏಡ್ಸ್ ಸೋಂಕನ್ನು ಸೋನ್ನೆಗೆ ತರಲು ಎಚ್ಐವಿ/ಏಡ್ಸ್ನಿಂದ ಉಂಟಾಗುತ್ತಿರುವ ಸಾವನ್ನು ಸೊನ್ನೆಗೆ ತರಲು ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಈ ವರ್ಷ ನಿಮ್ಮ ಎಚ್.ಐ.ವಿ ಸ್ಥಿತಿಯನ್ನು ತಿಳಿಯಿರಿ ಘೋಷಣೆಯಡಿ ಏಡ್ಸ್ ದಿನ ಆಚರಿಸಲಾಗುತ್ತಿದೆ. ಎಚ್ಐವಿ ಸೋಂಕಿತರ ಜೀವನದಲ್ಲಿ, ಸಮಾಜದಲ್ಲಿ ಹಾಗೂ ವಿಶ್ವದಲ್ಲಿ ಇತರೆಡೆ ಆಗುತ್ತಿರುವ ಆಗು ಹೋಗುಗಳ ಬಗ್ಗೆ ನಾವೆಲ್ಲಾ ತಿಳಿಯುವ ಒಂದು ಅವಕಾಶ ವಿಶ್ವ ಏಡ್ಸ್ ದಿನವಾಗಿದೆ.
ಪ್ರತಿ ವರ್ಷ ಈ ದಿನವನ್ನು ಒಂದೊಂದು ಘೋಷವಾಕ್ಯದೊಂದಿಗೆ ಪ್ರಾರಂಭಿಸಲಾಗುತ್ತದೆ. ಈ ವರ್ಷ ಎಚ್.ಐ.ವಿ / ಏಡ್ಸ್ ಸೋಂಕಿತರಿಗೆ ಅಗತ್ಯವಾದ ಸೇವೆಗಳು ಹಾಗೂ ಸೌಲಭ್ಯಗಳನ್ನು ಸೂಕ್ತವಾಗಿ ಒದಗಿಸುವ ಸೋಂಕಿತರಿಗೆ ಕಳಂಕ ಹಾಗೂ ತಾರತಮ್ಯದ ವಿರುದ್ದ ರಕ್ಷಣೆಕೊಡಬಹುದಾದ ಮಾನವ ಹಕ್ಕುಗಳ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸುವ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.