ಕೌಶಲ್ಯ ತರಬೇತಿ ಹಾಗೂ ಹಿರಿಯರ ಆರೈಕೆ ಕೇಂದ್ರ ತೆರೆಯಲು ನಿರ್ಧಾರ : ಮಾರ್ಗರೆಟ್ ಆಳ್ವಾ
ಕಾರವಾರ 07 : ಕರುಣಾ ಸಮಾಜ ಸೇವಾ ಮತ್ತು ಕೌಶಲ್ಯ ತರಬೇತಿ ಸಂಸ್ಥೆಗೆ ಮರು ಜೀವ ನೀಡಲಾಗುತ್ತಿದೆ ಎಂದು ಕೇಂದ್ರದ ಮಾಜಿ ಸಚಿವೆ ಮಾರ್ಗರೆಟ್ ಆಳ್ವಾ ಹೇಳಿದರು .ಕಾರವಾರ ಅರಣ್ಯ ಇಲಾಖೆಯ ಅತಿಥಿಗೃಹದಲ್ಲಿ ಭೇಟಿಯಾದ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಕರುಣಾ ಸಂಸ್ಥೆ ಕೋವಿಡ್ ಸಮಯದ ಸಂಕಷ್ಟ ದಿಂದಾಗಿ ಸಂಸ್ಥೆಯ ಕಾರ್ಯಚಟುವಟಿಕೆ ಮಾಡಲಾಗಿರಲಿಲ್ಲ. ಈಗ ಕರುಣಾ ಸಂಸ್ಥೆಗೆ ಸರ್ಕಾರ ಕಟ್ಟಡ ನಿರ್ಮಾಣಕ್ಕೆ ಭೂಮಿ ಕೊಟ್ಟಿದ್ದು, ಕರುಣಾ ಕಾರ್ಯ ಚಟುವಟಿಕೆಗಳಿಗೆ ನೂತನ ಕಟ್ಟಡವನ್ನು ನಿರ್ಮಿಸಲಾಗುವುದು. ಕಟ್ಟಡದ ಕಾಂಪೌಂಡ್ ನಿರ್ಮಾಣಕ್ಕೆ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್5 ಲಕ್ಷ ರೂ. ಕೊಟ್ಟಿದ್ದಾರೆ. ಈ ಅನುದಾನವನ್ನು ಸಂಸ್ಥೆಗೆ ಶುಕ್ರವಾರ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ನೀಡಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ದೇಣಿಗೆ ಪಡೆದು ಕಟ್ಟಡ ನಿರ್ಮಿಸಲಾಗುವುದು ಎಂದರು. 2025 ಮಾರ್ಚ ವೇಳೆಗೆ 1.25 ಕೋಟಿ ರೂ.ವೆಚ್ಚದ ಕಟ್ಟಡ ಆರಂಭವಾಗಿಸುವ ಉದ್ದೇಶ ಇದೆ ಎಂದರು .ಕರುಣಾ ಸಂಸ್ಥೆಯಿಂದಕೌಶಲ್ಯ ತರಬೇತಿ ಕೇಂದ್ರ ಹಾಗೂ ಹಿರಿಯರ ಆರೈಕೆ ಕೇಂದ್ರ ತೆರೆಯಲು ನಿರ್ಧಾರ ಮಾಡಲಾಗಿದೆ ಎಂದು ಕೇಂದ್ರೆ ಮಾಜಿ ಸಚಿವೆ ಮಾರ್ಗರೆಟ್ ಆಳ್ವಾ ಹೇಳಿದರು.1984 ರಲ್ಲಿ ರಾಜೀವ್ ಗಾಂಧಿ ಕರುಣಾ ಸಂಸ್ಥೆಗೆ ಚಾಲನೆ ನೀಡಿದ್ದರು . ಆರಂಭದಲ್ಲಿ 11 ರಾಜ್ಯಗಳಲ್ಲಿ ಕರುಣಾ ಸಂಸ್ಥೆ ಕೆಲಸ ಮಾಡಿದೆ. ಕಾರವಾರದಲ್ಲಿ ಕರುಣಾ ಬ್ರಾಂಚ್ ಇತ್ತು.ಸಿದ್ದಿ ಕೇಂದ್ರ ಯಲ್ಲಾಪುರದಲ್ಲಿ ಕೌಶಲ್ಯ ತರಬೇತಿಯನ್ನು ಸಿದ್ದಿ ಮಹಿಳೆಯರಿಗೆ ನೀಡಿ, ಬಿದಿರು ಆಧರಿತ ಉದ್ಯಮ ನಡೆಸಿದ್ದೆವು. ಈಗ ಅವರು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ ಎಂದು ಆಳ್ವಾ ವಿವರಿಸಿದರು. ಕರುಣಾದ ಹೊಸ ಯೋಜನೆಗಳಿಗೆಪ್ರೊಜೆಕ್ಟ್ ಕಮಿಟಿ ಮಾಡಿದ್ದೇವೆ.ಸತೀಶ್ ನಾಯ್ಕ ಯೋಜನಾ ಸಮಿತಿ ಅಧ್ಯಕ್ಷರಾಗಿ ಸಲಹೆ ನೀಡಲಿದ್ದಾರೆ. ರವೀನಾ ನಾಯ್ಕ ಕಾರ್ಯದರ್ಶಿ ಯಾಗಿ, ಕಾರವಾರ ಕರುಣಾಕ್ಕೆ ಲೂರ್ನಾ ವೇಗಸ್ ಅಧ್ಯಕ್ಷೆಯಾಗಿ ಕೆಲಸ ಮಾಡಲಿದ್ದಾರೆ ಎಂದು ಮಾರ್ಗರೆಟ್ ಆಳ್ವಾ ಹೇಳಿದರು ಕರುಣಾ ಸಂಸ್ಥೆ ಸೀನಿಯರ್ ಸೀಜನ್ ಕೇರ್ ಸೆಂಟರ್,ವಕಿಂರ್ಗ್ ವುಮನ್ಸ ಮಕ್ಕಳಿಗಾಗಿ ಸಣ್ಣಮಕ್ಕಳ ಕೇರ್ ಸೆಂಟರ್ ,ಹಾಸ್ಪಿಟಾಲಿಟಿ ಅಂಡ್ ಹೌಸ್ ಕೀಪಿಂಗ್ ತರಬೇತಿ ,ಪಂಚಾಯತಿ ಸದಸ್ಯರಿಗೆ ತರಬೇತಿ ಕೇಂದ್ರ ತೆರೆಯಲಿದೆ. ಪಂಚಾಯತಿ ಸದಸ್ಯರಿಗೆ ಮಾತುಗಾರಿಕೆ, ಕ್ರಿಯಾಯೋಜನೆ ತಯಾರಿಕೆ, ಆಡಳಿತ ತರಬೇತಿ ನೀಡಲಾಗುವುದು ಎಂದರು .ಹಿಂದೆ ನಮ್ಮ ಸಂಸ್ಥೆಸ್ವಯಂ ಉದ್ಯೋಗ ತರಬೇತಿ ಕೇಂದ್ರ ನಡೆಸಿತ್ತು.ಲಿಜ್ಜತ್ ಪಾಪಡ್ ಸಂಸ್ಥೆ ಕರೆತಂದು ತರಬೇತಿ ನೀಡಲಾಯಿತು .ಇವತ್ತು 300 ಜನ ಮಹಿಳೆಯರು ಸ್ವಯಂ ಉದ್ಯೋಗ ಮಾಡ್ತಿದಾರೆ. ಲಿಜ್ಜತನವರು ಹಪ್ಪಳ ಖರೀದೀ ಮಾಡ್ತಾರೆ.ಕುಮಟಾ ದಾಂಡೇಲಿ, ಯಲ್ಲಾಪುರ,ಕಾರವಾರದಲ್ಲಿ ಮಹಿಳೆಯರು ಸ್ವಾವಲಂಬಿ ಆಗಿದ್ದಾರೆ. ಈಗಜೇನು ಸಾಗಾಣಿಕೆ, ಜೇನು ಉತ್ಪಾದನೆ,ಕಾಗದದ ಬ್ಯಾಗ್ ತಯಾರಿಕೆ ,ಖೌದಿ ತಯಾರಿಕೆ ತರಬೇತಿ ಕೊಡಲಿದ್ದೇವೆ. ಡಿಜೈನ್ ನಾವು ಕೊಟ್ಟು, ಸಿದ್ದಿ ಮಹಿಳೆಯರಿಂದ ಕೌದಿ ಉತ್ಪಾದನೆ ಮಾಡುತ್ತೇವೆ ಎಂದರು.ಚಿಲ್ಡ್ರನ್ಸ್ ಗಾಮೆಂರ್ಟ್ ಬಟ್ಟೆ ತಯಾರಿಕೆ ತರಬೇತಿ ನೀಡುವ ಉದ್ದೇಶ ಇದೆ. ಒಂದೊಂದೇ ಯೋಜನೆಗೆ ಚಾಲನೆ ನೀಡಿ, ಹಂತ ಹಂತವಾಗಿ ಎಲ್ಲಾ ಯೋಜನೆ ಜಾರಿ ಮಾಡುವೆವು.25 ಜನ ಹಿರಿಯರಿಗೆ ವಸತಿ ಆಶ್ರಯ ನೀಡುವ ಉದ್ದೇಶ ಇದೆ. ಸೀನಿಯರ್ಸ ಸೀಟಿಜನ್ ಕೇರ್ ಸೆಂಟರಗೆ ಭಾರೀ ಬೇಡಿಕೆ ಇದೆ. ವಿದೇಶದಲ್ಲಿ ನೆಲಸಿದ ಮಕ್ಕಳು ತಮ್ಮ ತಂದೆ ತಾಯಿಯರನ್ನು ನೋಡಿಕೊಳ್ಳಲು ಆಶ್ರಯ ಕೇಳುತ್ತಿದ್ದಾರೆ ಎಂದರು .ಕರುಣಾ ಸಂಸ್ಥೆಯ ಸದಸ್ಯರಾದಅಮೃತ ಗಡ್ಕರ್ ,ಪ್ರಿಯಾಂಕಾ, ಪೂರ್ಷಿಮಾ ನಾಯ್ಕ,ನಮ್ರತಾ ಪಾಟೀಲ್, ಸಂಧ್ಯಾ ಕಾಮತ,ಶಾಮಲಾ ವೈದ್ಯ. ಹನೇಹಳ್ಳಿ , ಕಾರ್ಯದರ್ಶಿ ರವಿನಾ ನಾಯ್ಕ ಉಪಸ್ಥಿತರಿದ್ದರು....