ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಲು ತೀರ್ಮಾನ, ಪೂರ್ವಭಾವಿ ಸಭೆ
ಬಳ್ಳಾರಿ 10: ಶಾಸಕ ನಾರಾ ಭರತ್ ರೆಡ್ಡಿಯವರ ನೇತೃತ್ವದಲ್ಲಿ ಹಾಗೂ ಬಳ್ಳಾರಿ ಜಿಲ್ಲಾಡಳಿತದ ವತಿಯಿಂದ ಏ.14ರಂದು ಏರಿ್ಡಸಲಾಗುತ್ತಿರುವ ಸಂವಿಧಾನ ಶಿಲ್ಪಿ ಡಾ.ಬಿ.ಅಂಬೇಡ್ಕರ್ ಅವರ ಜಯಂತಿಯನ್ನು ಯಶಸ್ವಿಯಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಪಾಲಿಕೆಯ ಸದಸ್ಯ ವಿ.ಶ್ರೀನಿವಾಸ್ (ಮಿಂಚು) ಅವರು ತಿಳಿಸಿದ್ದಾರೆ.ಗುರುವಾರ ಸಂಜೆ ನಗರದ ಖಾಸಗಿ ಹೊಟೇಲಿನಲ್ಲಿ 35ನೇ ವಾರ್ಡಿನ ಹಾಗೂ ನಗರದ ವಿವಿಧ ಭಾಗಗಳ ಮುಖಂಡರು ಸಭೆ ನಡೆಸಿದರು.ಪ್ರತಿ ವರ್ಷ ಜಿಲ್ಲಾಡಳಿತದ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ನಡೆಸಲಾಗುತ್ತಿದ್ದು, ಈ ವರ್ಷ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ನಾರಾ ಭರತ್ ರೆಡ್ಡಿಯವರ ನೇತೃತ್ವದಲ್ಲಿ ಅದ್ಧೂರಿಯಾಗಿ ಆಚರಿಸಲು ಈಗಾಗಲೇ ತೀರ್ಮಾನಿಸಲಾಗಿದೆ, ಶಾಸಕರ ಸೂಚನೆ ಮೇರೆಗೆ ಗುರುವಾರ ಸಭೆ ನಡೆಸಿ, ಜಯಂತಿಯನ್ನು ಯಶಸ್ವಿಗೊಳಿಸಲು ಬೇಕಾದ ಸಿದ್ಧತೆಗೆ ಸಂಬಂಧಿಸಿ ಚರ್ಚಿಸಲಾಯಿತು ಎಂದು ಹೇಳಿದರು.ಈ ಸಂಧರ್ಭದಲ್ಲಿ ಮುಖಂಡರಾದ ಎಲ್.ಮಾರೆಣ್ಣ, ಎರಕುಲಸ್ವಾಮಿ, ಸಿದ್ಧೇಶ್, ವೆಂಕಟೇಶ ಹೆಗಡೆ, ದಾನಪ್ಪ, ಶೇಖಣ್ಣ, ಪಿ.ಶ್ರೀನಿವಾಸ, ನಾಗಭೂಷಣ, ಹುಸೇನಪ್ಪ, ಹೊನ್ನೂರಸ್ವಾಮಿ, ಸಯ್ಯದ್ ಭಾಷಾ, ಮಹಮ್ಮದ್, ಗೌಸ್ ಯುವ ಮುಖಂಡರಾದ ರವಿ, ಕುಮಾರ್, ವೀರೇಶ್, ಓಬಳೇಶ್, ನರಸಿಂಹ, ರಂಗನಾಥ್, ರಘು, ಆಟೋ ಮಲ್ಲಿ ಸೇರಿದಂತೆ 35ನೇ ವಾರ್ಡಿನ ಹಲವಾರು ಜನ, ಕಾರ್ಯಕರ್ತರು, ಮುಖಂಡರು ಭಾಗಿಯಾಗಿ ಸಲಹೆ ನೀಡಿದರು.