ಕೊಡಗಿನಲ್ಲಿ ಭೂ ಪರಿವರ್ತನೆಗೆ ಅನುಮತಿ ನೀಡಲು ನಿರ್ಧಾರ : ಸಚಿವ ಆರ್.ಅಶೋಕ್

ಬೆಂಗಳೂರು,ಫೆ 10 :  ಕಳೆದ ಒಂದು ವರ್ಷದಿಂದ ಕೊಡಗಿನಲ್ಲಿ ಸ್ಥಗಿತಗೊಳಿಸಲಾಗಿದ್ದ ಭೂ ಪರಿವರ್ತನೆ ಪುನರಾರಂಭಿಸಲು ಕಂದಾಯ ಇಲಾಖೆ ನಿರ್ಧರಿಸಿದೆ.  

ಈ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಭೂ ಪರಿವರ್ತನೆ ಸ್ಥಗಿತಗೊಳಿ ಸಿದ್ದರ ವಿರುದ್ಧ ಕೊಡಗು ಜನರು ಹಾಗೂ ಶಾಸಕರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಇದೀಗ ಭೂ ಪರಿವರ್ತನೆಗೆ ಅನು ಮತಿ ನೀಡಲು ನಿರ್ಧರಿಸಲಾಗಿದೆ. ಕೆಲ ನಿಬಂಧನೆಗಳೊಂದಿಗೆ ಭೂ ಪರಿವರ್ತನೆಗೆ ಅನುಮತಿ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.  

ನದಿ, ಹಳ್ಳ, ಡ್ರೈನೇಜ್ ನಿಂದ 10 ಮೀಟರ್ ದೂರ ಬಫರ್ ಜೋನ್ ಸುತ್ತಮುತ್ತ ಭೂ ಪರಿವರ್ತನೆಗೆ ಅವಕಾಶ ಇಲ್ಲ.ವಾಣಿಜ್ಯ ಚಟುವಟಿಕೆ ಗಳಿಗೆ ಅವಕಾಶ ಇಲ್ಲ.‌ ಡಿಸಿ ಎನ್‌ಒಸಿ ಪಡೆದ ನಂತರ ಗ್ರಾಮ ಪಂಚಾಯತಿ ಅನುಮತಿ ಪಡೆಯಬೇಕು. ಇನ್ನು ಭೂ ಕುಸಿತವಾದ ಪ್ರದೇಶ ಗಳಲ್ಲಿ ನಿರ್ಬಂಧ ಮುಂದುವರಿಯಲಿದೆ ಎಂದು ತಿಳಿಸಿದರು.  

ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ ರೆಡ್ ಅಲರ್ಟ್ ಪ್ರದೇಶಗಳ ವರದಿ ನೀಡಲಿದ್ದು, ಅದರ ಆಧಾರದಲ್ಲಿ ಭೂ ಪರಿವರ್ತ ನೆಗೆ ಅವಕಾಶ ನೀಡಲಾಗುವುದು. ಮುಂದೆ ಕೊಡಗಿನಲ್ಲಿ ಭೂ ಕುಸಿತ ಆಗದ ರೀತಿಯಲ್ಲಿ ನಿರ್ಬಂಧಿತ ಭೂ ಪರಿವರ್ತನೆ ಮಾಡಲು ನಿರ್ಧರಿ ಸಲಾಗಿದೆ ಎಂದರು.  

ಇನ್ನು ಕೊಡಗಿನಲ್ಲಿ ಅನಧಿಕೃತವಾಗಿ ಮನೆ ಕಟ್ಟಿದವರಿಗೆ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಅನಧಿಕೃತವಾಗಿ ಮನೆ ಕಟ್ಟಿದವರಿಗೂ ಬಾಡಿಗೆ ಕೊಡಲು ಆದೇಶ ನೀಡಲಾಗಿದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.