ಲೋಕದರ್ಶನ ವರದಿ
ರಾಯಬಾಗ ಜುಲೈ 13: ಕೇಂದ್ರ ಸರಕಾರ ಕಿಸಾನ ಕ್ರೆಡಿಟ್ ಕಾರ್ಡಯೋಜನೆಯಡಿ ಮೊದಲ ಬಾರಿಗೆ ಹೈನೋದ್ಯಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹೈನುರಾಸುಗಳ ನಿರ್ವಹಣೆಗೆ ಕನಿಷ್ಠ ಬಡ್ಡಿದರದಲ್ಲಿ ಸಾಲ ನೀಡುತ್ತಿದ್ದು ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕೆಂದು ಕಾಪರ್ೋರೇಷನ್ ಬ್ಯಾಂಕ್ ಅಳಗವಾಡಿ ಶಾಖೆ ವ್ಯವಸ್ಥಾಪಕ ಪುಂಜು ಶ್ರೀರಂಗ ಕರೆ ನೀಡಿದರು.
ಸೋಮವಾರ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ಬಸ್ತವಾಡ ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘ ಹಾಗೂ ಕಾಪರ್ೋರೇಷನ್ ಬ್ಯಾಂಕ್ ಅಳಗವಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಸರಕಾರದ ಕಿಸಾನ ಕ್ರೆಡಿಟ್ಕಾರ್ಡ (ಹೈನೋದ್ಯಮ) ಯೋಜನೆಯಡಿ ಹೈನುರಾಸುಗಳ ನಿರ್ವಹಣೆಗೆ ಕನಿಷ್ಠ ಬಡ್ಡಿದರದಲ್ಲಿ ಸಾಲ ವಿತರಣೆ ಸಮಾರಂಭದಲ್ಲಿ ಹೈನುರಾಸುಗಳನ್ನು ಕೊಳ್ಳಲು ರೈತರಿಗೆ ಚೆಕ್ಗಳನ್ನು ವಿತರಿಸಿ ಮಾತನಾಡಿದ ಅವರು, ಹೈನುರಾಸುಗಳನ್ನು ಕೊಂಡುಕೊಳ್ಳಲು ನೀಡುತ್ತಿರುವ ಸಾಲವನ್ನು ಸಕಾಲದಲ್ಲಿ ತುಂಬಿದರೆ, ಮತ್ತೇ ಹೆಚ್ಚಿನ ಮೊತ್ತದ ಸಾಲ ನೀಡುವುದಾಗಿ ಹೇಳಿದರು. ಕ್ಯಾಶ್ಲೇಸ್ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡುವಂತೆ ತಿಳಿಸಿದರು.
ಬೆಳಗಾವಿ ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ.ಜೆ.ಆರ್.ಮನ್ನೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರ ಜಾರಿಗೆ ತರುವ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಕೆಎಮ್ಎಫ್ ಕೂಡ ಸರಕಾರದೊಂದಿಗೆ ಭಾಗಿಯಾಗಿದೆ. ಕಿಸಾನ ಕಾರ್ಡಗಳನ್ನು ಹೈನೋದ್ಯಮ ಮಾಡುವರೈತರು ಪಡೆದುಕೊಳ್ಳಲು ಸರಕಾರ ಅವಕಾಶ ಮಾಡಿಕೊಟ್ಟಿದ್ದು, ಇದರ ಲಾಭವನ್ನು ಹಾಲು ಮಾರುವರೈತರು ಪಡೆದುಕೊಳ್ಳಬೇಕೆಂದರು. ಹಾಲು ಉತ್ಪಾದಕ ಸಹಕಾರಿ ಸಂಘಗಳು ಕೆಎಮ್ಎಫ್ ಉತ್ಪನ್ನಗಳನ್ನು ಮಾರಾಟ ಮಾಡಿ ಲಾಭ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ವಿ.ಕೆ.ಜೋಶಿ, ಗ್ರಾಮೀಣ ಮಾರುಕಟ್ಟೆಅಧಿಕಾರಿ ಸಿ.ಎಮ್.ಮೂಲಿಮನಿ, ಕಾಪರ್ೋರೇಷನ್ ಬ್ಯಾಂಕ್ ಅಭಿವೃದ್ಧಿ ಅಧಿಕಾರಿ ರಾಕೇಶಕುಮಾರ, ಪಶುವೈದ್ಯ ಡಾ.ರಮೇಶ ಕಂಕಣವಾಡಿ, ಬಸಪ್ಪ ನೌಗೌಡ, ಬ.ಮ.ಹಾ.ಉ.ಸ.ಸಂಘದ ಅಧ್ಯಕ್ಷೆ ಗೌರವ್ವ ಹೊಳ್ಕರ, ಕಾರ್ಯದಶರ್ಿ ಸುಜಾತಾ ನಂದೇಶ್ವರ, ರಮೇಶ ಗಲಗಲಿ, ಸಂಜು ತಳವಾರ, ರಾಯಪ್ಪ ಶೇಡಬಾಳಕರ, ಚಿದಾನಂದಕಾನಡೆ, ಗಿರೀಶ ನಂದೇಶ್ವರ ಸೇರಿದಂತೆ ಬಸ್ತವಾಡ ಮ.ಹಾ.ಉ.ಸ. ಸಂಘದ ಕಾರ್ಯಕಾರಿ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. ಡಾ.ರಮೇಶಕಂಕಣವಾಡಿ ಸ್ವಾಗತಿಸಿ, ನಿರೂಪಿಸಿದರು.