ಬ್ರೆಜಿಲ್ ನಲ್ಲಿ ಒಂದೇ ದಿನ 1,124 ಸಾವು: ಮೃತರ ಸಂಖ್ಯೆ 27,878 ಕ್ಕೆ ಏರಿಕೆ

ರಿಯೊ ಡಿ ಜನೈರೋ, ಮೇ 30,ಬ್ರೆಜಿಲ್‌ನಲ್ಲಿ ಕೊರೊನಾ ವೈರಸ್‌ನಿಂದಾಗಿ ಕಳೆದ 24 ಗಂಟೆಗಳಲ್ಲಿ 1,124 ಜನರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 27,878 ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಈ ಅವಧಿಯಲ್ಲಿ 26,928 ಪ್ರಕರಣಗಳು ವರದಿಯಾಗಿದ್ದು, ಒಟ್ಟು ರೋಗಿಗಳ ಸಂಖ್ಯೆ 4,65,166 ಕ್ಕೆ ಏರಿದೆ. ಶುಕ್ರವಾರ ಬ್ರೆಜಿಲ್‌ನಲ್ಲಿ 26,417 ಪ್ರಕರಣಗಳು ಮತ್ತು 1,156 ಸಾವುಗಳು ವರದಿಯಾಗಿದ್ದವು.ಮಾರ್ಚ್ 11 ರಂದು ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ವೈರಸ್‌ ನ್ನು ಜಾಗತಿಕ ಸಾಂಕ್ರಾಮಿಕ ರೋಗವನ್ನು ಎಂದು ಘೋಷಿಸಿತ್ತು. ವಿಶ್ವದಲ್ಲಿ ಕೊರೊನಾ ಪೀಡಿತರ ಸಂಖ್ಯೆ 56 ಲಕ್ಷ ಇದ್ದು, 3.6 ಲಕ್ಷ ಜನ ಸಾವನ್ನಪ್ಪಿದ್ದಾರೆ.