ಕರೋನ ಹಾವಳಿ: ಅಮೆರಿಕದಲ್ಲಿ ಸಾವಿನ ಸಂಖ್ಯೆ ಲಕ್ಷದ ಗಡಿಗೆ...!!

ನ್ಯೂಯಾರ್ಕ್, ಮೇ, ಅಮೆರಿಕದಲ್ಲಿ ಕರೋನ ಸೋಂಕು ಪ್ರಕರಣಗಳ ಸಂಖ್ಯೆ  15 ಲಕ್ಷದ  ಧಾಟಿದ್ದು, ಈವರೆಗೆ ದೇಶದಲ್ಲಿ  ಮಾರಕ ಸೋಂಕಿಗೆ ಬಲಿಯಾದವರ  ಸಂಖ್ಯೆ 90,312 ಕ್ಕೆ ಏರಿದೆ ಎಂದು ಸಿಎಸ್ಎಸ್ಇ ಅಂಕಿ ಅಂಶಗಳು ಸೋಮವಾರ ತಿಳಿಸಿವೆ.ನ್ಯೂಯಾರ್ಕ್ ನಗರದಲ್ಲಿ 351,371 ಪ್ರಕರಣಗಳು ವರದಿಯಾಗಿದ್ದು, 28,ಸಾವಿರಕ್ಕೂ ಹೆಚ್ಚು ಸಾವು ನ  ಸಂಭವಿಸಿದ್ದು ಅಮೆರಿಕದಲ್ಲೇ  ಅತಿ ಹೆಚ್ಚನ ಕರೋನ ಸೋಂಕು ಮತ್ತು ಹಾನಿಗೆ ಒಳಗಾದ  ರಾಜ್ಯ ಎಂಬ ಅಪಕೀರ್ತಿಗೆ ಭಾಜನವಾಗಿದೆ. 50,000 ಕ್ಕೂ ಹೆಚ್ಚು ಪ್ರಕರಣಗಳನ್ನು ಹೊಂದಿರುವ ಇತರ ರಾಜ್ಯಗಳೆದೆಂರೆ  ನ್ಯೂಜೆರ್ಸಿ, ಇಲಿನಾಯ್ಸ್, ಮ್ಯಾಸಚೂಸೆಟ್ಸ್, ಕ್ಯಾಲಿಫೋರ್ನಿಯಾ, ಪೆನ್ಸಿಲ್ವೇನಿಯಾ ಮತ್ತು ಮಿಚಿಗನ್ ಸೇರಿವೆ ಎಂದು ಸಿಎಸ್‌ಎಸ್‌ಇ ಅಂಕಿ ಅಂಶಗಳು ಹೇಳಿವೆ. 40 ಕ್ಕೂ ಹೆಚ್ಚು ರಾಜ್ಯಗಳು ಆರ್ಥಿಕ ಚಟುವಟಿಕೆ ಯನ್ನು ಪುನರಾರಂಭಿಸಿವೆ ಆದರೂ ದೇಶದಲ್ಲಿ ಇನ್ನು ಕರೋನ  ಸೋಂಕಿನಲ್ಲಿ ಇಳಿಮುಖ ಪ್ರವೃತ್ತಿ  ಕಂಡು ಬಂದಿಲ್ಲ ಎಂದು ವರದಿ ಹೇಳಿದೆ.