ಅಪರಿಚಿತ ವೃದ್ಧೆ ಸಾವು; ವಾರಸುದಾರರ ಪತ್ತೆಗೆ ಮನವಿ

Death of unknown elderly woman; Petition for discovery of heirs

ಕಾರವಾರ, ಡಿ.24: ಅಂಕೋಲಾ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ, ಕಲಾವತಿ  ಎಂಬ ಅಂದಾಜು 70 ವರ್ಷದ ಅಪರಿಚಿತ ವೃದ್ಧೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರದ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದ್ದು, ಸದರಿ ವೃದ್ಧೆಯು ದಿನಾಂಕ 19-12-2024 ರಂದು ಬೆಳಗ್ಗೆ 11 ಗಂಟೆಗೆ ಮೃತರಾಗಿದ್ದಾರೆ. 

ಮೃತ ವೃದ್ಧೆಯು ಚಿಕಿತ್ಸೆಗಾಗಿ ದಾಖಲಾಗುವಾಗ ತನ್ನ ಹೆಸರು ಕಲಾವತಿ ನಾಗಪ್ಪ ಅಪ್ಟೆಕರ್ ಸಾ:ಮಲ್ಲಾಪುರ ಎಂದು ತಿಳಿಸಿದ್ದು, ಮೃತರ ವಿಳಾಸ ಅಥವಾ ವಾರಸುದಾರರು ಯಾರಾದರೂ ಇದ್ದಲ್ಲಿ ಅಂಕೋಲಾ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08382-220333 ನ್ನು ಸಂಪರ್ಕಿಸುವಂತೆ ಅಂಕೋಲಾ ಪೊಲೀಸ್ ಠಾಣೆಯ ಪೊಲೀಸ್ ಉಪನೀರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.