ಯಮುನಾ ನದಿಯಲ್ಲಿ ಮುಳುಗಿ ಇಬ್ಬರ ಸಾವು

ನವದೆಹಲಿ, ಸೆ 13    ಗಣೇಶ ಪೂಜೆಯ ನಂತರ ಯಮುನಾ ನದಿಯಲ್ಲಿ ಸ್ನಾನ ಮಾಡುವಾಗ ನೀರಿನಲ್ಲಿ ಮುಳುಗಿ ಇಬ್ಬರು ಮೃತಪಟ್ಟಿದ್ದು ಮತ್ತಿಬ್ಬರು ಕಾಣೆಯಾಗಿದ್ದಾರೆ. ಜನರು ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಈ ಘಟನೆ ಜರುಗಿದೆ ಎನ್ನಲಾಗಿದೆ. ಸ್ಥಳೀಯ ಮೂಲಗಳ ಪ್ರಕಾರ, ಕಡಿಮೆ ಬೆಳಕಿನಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಆದರೂ ರಕ್ಷಣಾ ತಂಡ ಇಬ್ಬರ ಶವಗಳನ್ನು ಪತ್ತೆ ಮಾಡಿದ್ದು, ಕಾಣೆಯಾಗಿರುವ ಇನ್ನಿಬ್ಬರಿಗಾಗಿ  ಶೋಧ ನಡೆಸುತ್ತಿದೆ.