ಚೆನ್ನೈ, ಎಪ್ರಿಲ್ 4, ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಪ್ರಕರಣಗಳ ಮಧ್ಯೆ ಇಂದು ರಾಜ್ಯದಲ್ಲಿ ಸೋಂಕಿನಿಂದ ಎರಡನೇ ಸಾವು ಸಂಭವಿಸಿದೆ. ರಾಜ್ಯದಲ್ಲಿ ಇದುವರೆಗೆ ಸೋಂಕಿತರ ಸಂಖ್ಯೆ 411 ತಲುಪಿದೆ.ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದ 53 ವರ್ಷ ಪ್ರಾಯದ ವ್ಯಕ್ತಿ ಇಂದು ಸಾವನ್ನಪ್ಪಿದ್ದಾರೆ. ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಊರಿಗೆ ಮರಳಿದ್ದ ಅವರಲ್ಲಿ ಕೋವಿಡ್ 19 ಪಾಸಿಟಿವ್ ಕಂಡುಬಂದಿತ್ತು. ಬಳಿಕ ಅವರನ್ನು ವಿಲ್ಲುಪ್ಪುರಂ ಜಿಲ್ಲೆಯ ಮುಂದಿಯಂಬಕ್ಕಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಅಲ್ಲಿ ಅವರು ನಿಧನರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ನಿಜಾಮುದ್ದೀನ್ ಧಾರ್ಮಿಕ ಸಭೆಗೆ ಸಂಬಂಧಿಸಿ ರಾಜ್ಯದಲ್ಲಿ ನಡೆಯುತ್ತಿರುವ ಮೊದಲ ಸಾವು ಇದಾಗಿದೆ.
ಮೃತರು ಜಿಲ್ಲೆಯ ಸಿಂಗರಥೋಪ್ಪುವಿನ ವಂಡಿಮೇಡು ಮೂಲದವರಾಗಿದ್ದು, ವಿ.ಪಗಂಡೈ ಕಿಟ್ಟಿ ರಸ್ತೆಯಲ್ಲಿರುವ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು, ಕೋವಿಡ್-19 ಸೋಂಕಿನ ಲಕ್ಷಣ ಕಂಡುಬಂದು ಆಸ್ಪತ್ರೆಗೆ ದಾಖಲಾಗಿದ್ದ 9 ಮಂದಿಯಲ್ಲಿ ಇವರು ಕೂಡ ಒಬ್ಬರಾಗಿದ್ದರು.ಮಾರ್ಚ್ 26 ರಂದು ಮಧುರೈನ ರಾಜಾಜೈ ಆಸ್ಪತ್ರೆಯಲ್ಲಿ 54 ವರ್ಷದ ವ್ಯಕ್ತಿಯ ಸಾವನ್ನು
ಕೊರೋನಾ ಸೋಂಕಿನಿಂದ ಉಂಟಾದ ಮೊದಲ ಸಾವು ಎಂದು ಸರ್ಕಾರದ ದಾಖಲೆಯಲ್ಲಿ ವರದಿಯಾಗಿದೆ. ರೋಗಿಯು ಸ್ಟೀರಾಯ್ಡ್ ಅವಲಂಬಿತ ದೀರ್ಘಕಾಲದ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು. ಪ್ರತಿರೋಧಕ ಶ್ವಾಸಕೋಶದ ಕಾಯಿಲೆ (ಸಿಒಪಿಡಿ), ಅನಿಯಂತ್ರಿತ ಮಧುಮೇಹ ಅಧಿಕ ರಕ್ತದೊತ್ತಡದಿಂದ ಅವರು ಸಾವನ್ನಪ್ಪಿದ್ದರು ಎಂದು ಆರೋಗ್ಯ ಸಚಿವ ಡಾ.ಸಿ.ವಿಜಯಬಾಸ್ಕರ್ ಹೇಳಿದ್ದಾರೆ.ಅವರ ಕುಟುಂಬ ಸದಸ್ಯರೊಬ್ಬರು ಸಹ ಪಾಸಿಟಿವ್ ವರದಿ ಬಂದಿದ್ದು ಅವರನ್ನು ಪ್ರತ್ಯೇಕ ತಡೆ ವ್ಯವಸ್ಥೆಯಲ್ಲಿ ಇಡಲಾಗಿದೆ.