ರಾಯಬಾಗ 26: ತಾಲೂಕಿನ ಭಿರಡಿ ಗ್ರಾಮದಲ್ಲಿರುವ ಯಕ್ಸಂಬಾ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ಧ ಸಹಕಾರಿ ಸಂಘ.ನಿ ಭಿರಡಿ ಶಾಖೆಯಿಂದ ಜ್ಯೋತಿ ಕೀರು ಸಾಲ ವಿಭಾಗದಲ್ಲಿ ಸಾಲ ಪಡೆದಿದ್ದ ರೇಖಾ ಅಶೋಕ ಕಾಮಗೋಳ ಹೃದಯಾಘಾತದಿಂದ ಅಕಾಲಿಕ ಮರಣ ಹೊಂದ್ದಿದು, ಮೃತ ಕುಟುಂಬ ಸದಸ್ಯರಿಗೆ ಸದಸ್ಯರ ಕಲ್ಯಾಣ ನಿಧಿಯಿಂದ 30 ಸಾವಿರ ರೂ. ಸಹಾಯ ಧನ ಚೆಕ್ಕನ್ನು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರ ಹುಟ್ಟು ಹಬ್ಬದ ನಿಮ್ಯಿತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.
ಅಶೋಕ ಕಾಮಗೋಳ, ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ಧ ಸಹಕಾರಿ ಸಂಘ ಯಕ್ಸಂಬಾ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಸಂತೋಷ ಪಾಟೀಲ ಹಾಗೂ ಶಾಖಾ ವ್ಯವಸ್ಥಾಪಕ ರಾಘವೇಂದ್ರ ಕಲಾಲ, ಭಿರಡಿ ಶಾಖೆ ಸಲಹಾ ಸಮಿತಿ ಸದಸ್ಯರಾದ ಮುರಘೇಂದ್ರ ನಿಶಾನದಾರ, ವಿರೂಪಾಕ್ಷಿ ಕುಡಚೆ, ಮಲ್ಲಿಕಾರ್ಜುನ ನಿಡವಣಿ, ಶ್ರೀಶೈಲ ಮಿರ್ಜೆ, ಶ್ರೀಕಾಂತ ಯಲಗುದ್ರೆ, ಪ್ರಕಾಶ ಭೆಂಡೆ, ವಿರೂಪಾಕ್ಷಿ ಕುಮಟೋಳ್ಳಿ ಇದ್ದರು.