ಮುಂಬೈ, ಜ 9 ಕೆಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಭೂಗತ ಪಾತಕಿ, ದಾವೂದ್ ಇಬ್ರಾಹಿಂ ಮತ್ತು ಗ್ಯಾಂಗ್ ಸ್ಟರ್ ಛೋಟಾ ರಾಜನ್ ಮಾಜಿ ಸಹಚರ ಎಜಾಜ್ ಲಕ್ಡಾವಾಲಾನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ .
ಕೊಲೆ ಯತ್ನ, ಸುಲಿಗೆ ಹಾಗೂ ಹಿಂಸಾಚಾರ ಸೇರಿದಂತೆ 25ಕ್ಕೂ ಹೆಚ್ಚು ಪ್ರಕರಣಗಳು ಎಜಾಜ್ ಪೊಲೀಸರಿಗೆ ಬೇಕಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಎಜಾಜ್ ಲಕ್ಡಾವಾಲಾನನ್ನು ಬಂಧಿಸಲು ನಾವು ಕಳೆದ ಆರು ತಿಂಗಳಿನಿಂದ ಪ್ರಯತ್ನ ಮಾಡುತ್ತಾ ಆತನ ಬಂಧನಕ್ಕೆ ಖಚಿತ ಮಾಹಿತಿಗಾಗಿ ಕಾಯಲಾಗುತ್ತಿತ್ತು ಈ ಹಿನ್ನೆಲೆಯಲ್ಲಿ ಬುಧವಾರ ಪಾಟ್ನಾದ ಮನೆಗೆ ಭೇಟಿ ನೀಡಿದ ಸಮಯದಲ್ಲಿ ಅವನನ್ನು ಬಂಧಿಸಲಾಯಿತು ಎಂದೂ ದು ವರದಿ ತಿಳಿಸಿದೆ.
ಎಜಾಜ್ ನನ್ನು ಮುಂಬೈಗೆ ಕರೆ ತರಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ರಸ್ತೋಗಿ ಬಳಿಕ ಸುದ್ದಿಗಾರರಿಗೆ ತಿಳಿಸಿದ್ದಾರೆ.