ಸಮಾಜದ ಅಂಕು ಡೊಂಕುಗಳನ್ನು ತಿದ್ದಿ, ಸಮ ಸಮಾಜಕ್ಕೆ ಶ್ರಮಿಸಿದ ವಚನಕಾರ ದಾಸಿಮಯ್ಯ
Dasimayya Jayanti celebration in Karwar:
ಕಾರವಾರದಲ್ಲಿ ದಾಸಿಮಯ್ಯ ಜಯಂತಿ ಆಚರಣೆ:
ಕಾರವಾರ 24: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಇವರ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾದ ದೇವರ ದಾಸಿಮಯ್ಯ ಜಯಂತಿಯನ್ನು ದೇವರ ದಾಸಿಮಯ್ಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಜಿಲ್ಲಾಧಿಕಾರಿ ಕಚೇರಿಯ ಚುನಾವಣೆ ಶಾಖೆಯ ಉಪ ತಹಶೀಲ್ದಾರ ಪ್ರಮೋದ ನಾಯ್ಕ ಉದ್ಘಾಟಿಸಿದರು.
ದೇವರ ದಾಸಿಮಯ್ಯ ಕುರಿತು ನಿವೃತ್ತ ಉಪನ್ಯಾಸಕ, ಶಿವಣ್ಣ ನಾಯ್ಕ ಮಾತನಾಡಿ ದೇವರ ದಾಸಿಮಯ್ಯ ಅವರು ಹನ್ನೆರಡನೇ ಶತಮಾನದ ಆದ್ಯ ವಚನಕಾರರಾಗಿದ್ದು, ಸಮಾಜದ ಅಂಕು ಡೊಂಕುಗಳನ್ನು ತಿದ್ದಿ, ಸಮ ಸಮಾಜನ್ನು ನಿರ್ಮಿಸಲು ತಮ್ಮ ವಚನಗಳ ಮೂಲಕ ಶ್ರಮಿಸಿದರು . ಜಾತಿವಾದವನ್ನು ಪ್ರಬಲವಾಗಿ ವಿರೋಧಿಸಿದರು ಎಂದರು.
ದಾಸಿಮಯ್ಯ ಅವರು ಯಾದಗಿರಿ ಜಿಲ್ಲೆಯ ಸೂರಪುರ ತಾಲೂಕಿನ ಮುದನೂರಿನಲ್ಲಿ ಜನಿಸಿ, ಸನ್ಯಾಸತ್ವ ಜೀವನವನ್ನು ಅಳವಡಿಸಿಕೊಂಡ ಶಿವನ ಭಕ್ತಿಯಲ್ಲಿ ತೊಡಗಿದರು. ಮೋಕ್ಷವನ್ನು ಪಡೆಯಲು ಸತ್ಕಾರ್ಯವನ್ನು ಹಾಗೂ ಪರೋಪಕಾರ ಮಾಡಬೇಕೆಂದು ಅರಿತು ತನ್ನ ಬದುಕಿಗಾಗಿ ಹಾಗೂ ಲೋಕದ ಒಳತಿಗಾಗಿ ಮೂಲ ವೃತ್ತಿಯಾದ ಬಟ್ಟೆ ನೇಯುವ ಕೆಲಸದಲ್ಲಿ ತನ್ನ ಕುಟುಂಬವನ್ನು ತೊಡಗಿಸಿಕೊಂಡು ಸಮಾಜಕ್ಕೆ ಅಗತ್ಯವಿರುವ ಹಾಗೂ ದೇವರಿಗೆ ವಸ್ತುಗಳನ್ನು ಆರ್ಿಸುವ ಮೂಲಕ ಜೀವನವನ್ನು ಸಾರ್ಥಕಗೊಳಿಸಿಕೊಂಡರು. ವಚನಗಳ ಮೂಲಕ ಜನರ ಮನಸ್ಸನ್ನು ಪರಿವರ್ತಿಸಿದರು. ಅವರ ಆದರ್ಶ, ವ್ಯಕ್ತಿತ್ವ ಗುಣಗಳನ್ನು ಹೊಂದಿರುವ ವಿಚಾರ ಧಾರೆಗಳನ್ನು ಪ್ರತಿಯೊಬ್ಬರು ಅರಿತುಕೊಂಡು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು.
ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಉಪನ್ಯಾಸಕ .ಡಿ.ಜಿ ಗಣನಾಥ ಮಾತನಾಡಿ, ವಿದ್ಯಾರ್ಥಿಗಳಿಗೆ ಪಾಠದ ಜೊತೆಯಲ್ಲಿ ಮಹನೀಯರ ಜಯಂತಿಗಳನ್ನು ಆಚರಣೆ ಮಾಡುವ ಮೂಲಕ ಅವರ ಜೀವನದ ಮೌಲ್ಯಗಳ ಮನವರಿಕೆ ಮಾಡಲಾಗುತ್ತದೆ. ಅವರ ನಡೆದ ಬಂದ ದಾರಿ, ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ಅಧಿಕಾರಿ ಮಂಗಳಾ ನಾಯ್ಕ ಸ್ವಾಗತಿಸಿದರು, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾದ್ಯಾಪಕಿ ಹೇಮಲತಾ.ಕೆ ನಿರೂಪಿಸಿ, ವಂದಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 