ಬಜೆಟ್ ಮಂಡನೆ ಮೋದಿಜಿ ಮಧ್ಯಮ ವರ್ಗದವರ ಹೃದಯದಲ್ಲಿದ್ದಾರೆ
ರಾಣೇಬೆನ್ನೂರು 01 ; ಮಧ್ಯಮ ವರ್ಗದ ಜನರು ಯಾವಾಗಲೂ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜಿಯವರ ಹೃದಯದಲ್ಲಿರುತ್ತಾರೆ140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಈಡೇರಿಸುವ ಬಿಜೆಪಿ ಸರ್ಕಾರದ ಬದ್ಧತೆಯನ್ನು ವಿಕಸಿತ ಭಾರತದ 2025 ರ ಬಜೆಟ್ ಪ್ರತಿಬಿಂಬಿಸುತ್ತದೆಮಧ್ಯಮ ವರ್ಗದ ಜನರಿಗೆ ಬಜೆಟ್ ಕೊಡುಗೆಯಾಗಿದ್ದು,12 ಲಕ್ಷದವರೆಗಿನ ಆದಾಯ ತೆರಿಗೆ ರಿಯಾಯಿತಿ ನೀಡಿದ್ದು ಅತ್ಯಂತ ಮಹತ್ವವಾದ ಕೊಡುಗೆಯಾಗಿದೆಮುಂದಿನ ಐದು ವರ್ಷಗಳಲ್ಲಿ 5 ಲಕ್ಷ ಎಸ್ ಸಿ ಮತ್ತು ಎಸ್ ಟಿ ಮಹಿಳಾ ಉದ್ಯಮಿಗಳಿಗೆ ಎರಡು ಕೋಟಿ ರೂಪಾಯಿಗಳವರೆಗೆ ಅವಧಿ ಸಾಲ ನೀಡುವ ಯೋಜನೆ ನೀಡಿದ್ದು ಮೆಚ್ಚುವಂತದ್ದು, ಭಾರತದ ಅಭಿವೃದ್ಧಿಯ ಪಯಣಕ್ಕೆ ಕೃಷಿಯೇ ಮೊದಲ ಇಂಜಿನ್ ಆಗಿದ್ದು, ಹತ್ತಿ ಉತ್ಪಾದಕತೆಗಾಗಿ 5 ವರ್ಷಗಳ ಮಿಷನ್ ಘೋಷಣೆ, ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಮಿತಿಯನ್ನು ಮೂರು ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡಿದ್ದು ಸ್ವಾಗತಾರ್ಹವಾಗಿದೆ.ಪ್ರತಿ ಜಿಲ್ಲೆಗೂ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ,ಹೊಸ ವೈದ್ಯಕೀಯ ಸೀಟುಗಳು, 6,000 ಹೊಸ ಐಐಟಿ ಸೀಟುಗಳು ಮತ್ತು ಮೂರು ವರ್ಷಗಳಲ್ಲಿ ಮೂರು ಹೊಸ ಎಐ ಸಂಸ್ಥೆಗಳು ಕ್ರಾಂತಿಗೆ ಮುನ್ನಡೆ ಬರೆಯಲಿದ್ದು, ಮಧ್ಯಮ ವರ್ಗಕ್ಕೆ ಇಷ್ಟವಾಗುವ ಬಜೆಟ್ ನೀಡಿದ ಕೇಂದ್ರ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತರಾಮನ್ * ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದಿಸಿದ್ಧಾರೆ.