ಕಲಾ ಕಲೋತ್ಸವ, ಶಾಲಾ ದಾನಿಗಳಿಗೆ ಸನ್ಮಾನ

Kala kalotsava, honor for school donors

ಕಲಾ ಕಲೋತ್ಸವ, ಶಾಲಾ ದಾನಿಗಳಿಗೆ ಸನ್ಮಾನ  

ಮುದ್ದೇಬಿಹಾಳ, 01: ಶಿಕ್ಷಕ ಹಾಗೂ ವಿದ್ಯಾರ್ಥಿಗಳ ಮನಸ್ಸು ಸಂಯೋಜನೆಯಾದಾಗ ಮಾತ್ರ ಗುಣಮಟ್ಟ ಶಿಕ್ಷಣ ಕಾಣಲು ಸಾಧ್ಯ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶಿಕ್ಷಕರು ನೀಡುವ ಪಾಠ, ಪಠ್ಯದ ಬಗ್ಗೆ ಮನಸ್ಸು ಕೇಂದ್ರಿಕರಿಸುವ ಮೂಲಕ ಶಿಕ್ಷಣ ಪಡೆದುಕೊಂಡರೆ ಜೀವನದಲ್ಲಿ ಖಂಡಿತವಾಗಿ ಸಾಧನೆಯ ಕನಸು ನನಸಾಗಿಸಲು ಸಾಧ್ಯ ಎಂದು ತಹಶಿಲ್ದಾರ  ಬಲರಾಮ ಕಟ್ಟಿಮನಿ  ಹೇಳಿದರು. 

ತಾಲೂಕಿನ ಚಿರಚನಕಲ್ಲ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಲಾ ಕಲೋತ್ಸವ ಹಾಗೂ ಶಾಲಾ ದಾನಿಗಳಿಗೆ ಸನ್ಮಾನ ಸಮಾರಂಭವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. 

ಇಂದು ವಿದ್ಯಾರ್ಥಿಗಳಿಗೆ ಕಲಿಕಾ ನಿಯಮಗಳು, ಸೌಲಭ್ಯಗಳು ಹೆಚ್ಚಿವೆ, ಜತೆಗೆ ಸರಕಾರವೂ ಕೂಡ ಮಕ್ಕಳ ಗುಣಮಟ್ಟ ಶಿಕ್ಷಣ ನೀಡುವ ಉದ್ದೇಶದಿಂದ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ, ಆದರೇ ಕಲಿಯೋ ಹಂಬಲ ಬರಬೇಕಷ್ಟೇ, ಆಧುನಿಕ ತಂತ್ರಜ್ಞಾನ ಮುಂದುವರೆದಿದೆ ಸ್ಪರ್ಧಾತ್ಮಕ ಮನೋಭಾವದೊಂದಿಗೆ ಮುನ್ನಡೆಯಲ್ಲಿ ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಇತ್ತಿಚಿಗೆ ಸರಕಾರಿ ಶಾಲೆಗೆ ಆಯ್ಕೆಗೊಂಡು ಶಿಕ್ಷಕರು ಸ್ಪರ್ಧಾತ್ಮಕ ಪರಿಕ್ಷೇಯಲ್ಲಿ ಉತ್ತಿರ್ಣಗೊಂಡು ಆಯ್ಕೆಯಾಗಿ ಬಂದಿರುತ್ತಾರೆ. ಹಾಗಾಗಿ ಮಕ್ಕಳಿಗೆ ಉತ್ಕೃಷ್ಟ ಶಿಕ್ಷಣ ನೀಡುವಲ್ಲಿ ಯಾವೂದೇ ಕೊರತೆಯಾಗಲಾರದು. ಈ ದಿಶೆಯಲ್ಲಿ ಪಾಲಕರು ಮಕ್ಕಳಿಗೆ ಖಾಸಗಿ ಶಾಲೆಗೆ ಕಳುಹಿಸುವ ಬದಲು ಸರಕಾರಿ ಶಾಲೆಗೆ ಕಳುಹಿಸಿದರೆ ಸರಕಾರದ ಸೌಲಭ್ಯಗಳ ಜತೆಗೆ ಸರಕಾರಿ ಶಾಲೆಗಳನ್ನು ಉಳಿಸಿ ಬೆಡಳಸಿದಂತಾಗುತ್ತದೆ. 

ಸಧ್ಯ ಚಿರಚನಕಲ್ಲ ಸರಕಾರಿ ಶಾಲೆ ಸುವ್ಯವಸ್ಥೆ ಶಾಲಾ ಕೋಠಡಿಗಳ ವರ್ಣರಂಜಿತ ಅಲಂಕಾರ, ಕಲೆಯ ಚಿತ್ರಾವಳಿಗಳು, ಆವರಣದೊಳಗೆ ಸೌಂದರ್ಯ ಕಾಣುವ ಗಿಡ ಮರಗಳನ್ನು ಬೆಳೆಸಿದ್ದು ಕಂಡು ಮನಸ್ಸಿಗೆ ತುಂಬಾ ಸಂತೋಷವೆಸಿತು ಹೀಗೋಂದು ತಾಲೂಕಿನಲ್ಲಿ ಇಂತಹ ಮಾದರಿಯಾ ಶಾಲೆ ನಿರ್ಮಿಸಲು ಶ್ರಮಿಸಿದ ಶಿಕ್ಷಕ ಟಿ ಡಿ ಲಮಾಣಿ ಮುಖ್ಯ ಶಿಕ್ಷಕ ಆಯ್ ಎಂ ಕಲ್ಲೂರ ಸೇರಿದಂತೆ ಎಲ್ಲ ಶಿಕ್ಷಕ ವರ್ಗದವರ ಸಾಮಾಜಿ ಕಳಕಳಿಗೆ ಶ್ಲಾಘನಿಯ ಎಂದರು. 

ಈ ವೇಳೆ ಗದಗದ ನಿವೃತ್ತ ಡಿಡಿಪಿಐ ಎಸ್ ಡಿ ಗಾಂಜಿ ಯವರು ಮಾತನಾಡಿ ಮಕ್ಕಳು ಮೊಬೈಲ್ ಗೀಳಿನಿಂದ ಹೊರಬಂದು ಶಿಕ್ಷಣದ ಕಡೆ ಗಮನ ಹರಿಸಬೇಕು ಎಲ್ಲರಂಗದಲ್ಲೂ ಪ್ರತಿನಿಧಿಸುವಂತೆ ಪಾಕಲರು ತಮ್ಮ ಮಕ್ಕಳಿಗೆ ಪ್ರೇರೆಪಿಸಬೇಕು ವಿದ್ಯೆ  ಜತೆಗೆ ದೇಶದ ಸಂಸ್ಕೃತಿ, ಪರಂಪರೆ ದೇಶಾಭಿಮಾನ, ಹಾಗೂ ಸಂಸ್ಕಾರ ನೀಡುವಲ್ಲಿ ಮುಂದಾಗಬೇಕು ಹಾಗೂ ನಾನು ಬಡವನಿದ್ದೇನೆ ಎಂದು ಮಕ್ಕಳಿಗೆ ಶಿಕ್ಷಣದಿಂದ ವಂಚಿತಗೊಳ್ಳುವಂತೆ ಮಾಡದೇ ಶಿಕ್ಷಣವಂತ ಸಮಾಜ ಕಟ್ಟುವಲ್ಲಿ ಪಾಲಕರ ಮತ್ತು ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ ಎಂದರು. 

ಈ ವೇಳೆ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎನ್ ಎಸ್ ಮಸಳಿ, ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಬ ಇ ಎಸ್ ಸಾವಳಗಿ, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಎಸ್ ಬಿ ಚಲವಾದಿ, ಬಿ ವಾಯ್ ಕವಡಿ, ಚಿರಚನಕಲ್ಲ ಸರಕಾರಿ ಪ್ರಾಥಮಿಕ ಶಾಲೆಯ ಐ ಎಂ ಕಲ್ಲೂರ, ಎಂ ಕೆ ಬಾಗವಾನ, ಎಸ್ ಕೆ ಗೌಡರ, ಗುರು ಇಬ್ರಾಹಿಂಪೂರ, ಎಸ್ ಎಸ್ ರಾಮತಾಳ,ಬಿ ಎಚ್ ಮುದ್ನೂರ, ಎನ್ ಎಸ್ ತುರಡಗಿ, ಪಿಡಿಓ ವಿಜಯಾ ಮುದುಗಲ್ಲ, ಮಲ್ಲಮ್ಮ ಗುರಿಕಾರ, ಸುಮಿತ್ರಾ ಪಾಟೀಲ, ಉಮಾಪತಿ ಚೌಧರಿ,  ಗ್ರಾಮದ ಪ್ರಮುಖರಾದ ಭೀಮಪ್ಪ ಸಂಗಪ್ಪ ಕುಂಬಾರ, ಭೀಮನಗೌಡ ಪಾಟೀಲ, ಚನಬಸಪ್ಪ ಚೌಧರಿ, ರಾಮನಗೌಡ ಪಾಟೀಲ, ವಿರೇಶ ಬಿರಾದಾರ, ಸುರೇಶ ಚೌಧರಿ, ಯಲ್ಲನಗೌಡ ಪಾಟೀಲ, ಭೀಮಪ್ಪ ಮೇಟಿ, ಯಲಗೂರದಪ್ಪ ಹುಲ್ಲಳ್ಳಿ, ಶಿವಪ್ಪ ಮೇಟಿ, ಮಲ್ಲಿಕಸಾ ನದಾಫ ಸೇರಿದಂತೆ ಹಲವರು ಇದ್ದರು ಶಿಕ್ಷಕ ಟಿ ಡಿ ಲಮಾಣಿ ನಿರೂಪಿಸಿದರು.