ದಾಂಡೇಲಿ ಸುಸ್ವರ ಸಂಗೀತ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಸಂಭ್ರಮ -2024 :ವಿದ್ಯಾರ್ಥಿಗಳು ಶೃದ್ಧೆಯಿಂದ ಆಲಿಸಿದಾಗ ಮಾತ್ರ ಸಂಗೀತ ಒಲಿಯುತ್ತದೆ : ಗಾಯಕ ಗಣಪತಿ ಹೆಗಡೆ
ಕಾರವಾರ 24: ಸಂಗೀತ ಕಲಿಯುವ ವಿದ್ಯಾರ್ಥಿಗಳು ಶೃದ್ಧೆಯಿಂದ ಆಲಿಸಿದಾಗ ಮಾತ್ರ ಸಂಗೀತವು ರೂಪ, ಸಾಮರಸ್ಯ, ಮಧುರ, ಲಯ ಸಂಯೋಜನೆಯನ್ನು ಅರ್ಥೈಸಲು ಸಾಧ್ಯ ಎಂದು ಹಿಂದೂಸ್ಥಾನಿ ಗಾಯಕ ಗಣಪತಿ ಹೆಗಡೆ ನುಡಿದರು. ಅವರು ದಾಂಡೇಲಿಯ ವೀರಭದ್ರೇಶ್ವರ ದೇವಸ್ಥಾನದ ಸಮೂದಾಯ ಭವನದಲ್ಲಿ ಸುಸ್ವರ ಸಂಗೀತ ವಿದ್ಯಾಸಂಸ್ಥೆ ಯ ವಾರ್ಷಿಕೋತ್ಸವ ನಿಮ್ಮಿತ್ತ ಸುಸ್ವರ ಸಂಭ್ರಮ -2024 ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅತಿಥಿಯಾಗಿದ್ದ ನಿವೃತ್ತ ನ್ಯಾಯಾಧೀಶ ನರಹರಿ ಮರಾಠೆ ಮಾತನಾಡಿ ಎಲ್ಲ ಹಾಡುಗಳ ಮೂಲ ಸಂಗೀತ. ಸಂಗೀತವು ಕಲೆಯ ಒಂದು ರೂಪವಾಗಿದ್ದು, ಕೇಳುಗರ ಮನಸ್ಸನ್ನು ಭಾವಪೂರ್ಣತೆಯಿಂದ ಆಕರ್ಷಿಸುತ್ತದೆ ಎಂದು ನುಸಿದರು. ಮತ್ತೋರ್ವ ಅತಿಥಿ ಆದ ವಕೀಲರಾದ ಶ್ರೀಮತಿ ಜಯಾ ಡಿ. ನಾಯ್ಕ ಮಾತನಾಡಿ ಸುಸ್ವರ ಸಂಗೀತ ವಿದ್ಯಾಲಯದ ಸೇವೆಯನ್ನು ಸ್ಮರಿಸಿ ಶುಭ ಕೋರಿದರು. ಇದೇ ಸಂದರ್ಭದಲ್ಲಿ ಸಂಗೀತ ವಿದ್ಯಾಯದ ಶಿಕ್ಷಕಿ ಶಶಿಕಲಾ ಗೋಪಿ ದಂಪತಿಗಳನ್ನು ಸನ್ಮಾನಿಸಲಾಯಿತು. ಪ್ರಾರಂಭದಲ್ಲಿ ಅಮೃತಾ ಭಟ್, ಸ್ವಾಗತಿಸಿದರೆ, ಕಾರ್ಯಕ್ರಮದ ನಿರೂಪಣೆಯನ್ನು ಸ್ಮಿತಾ ಗುರುರಾಜ್ , ಕವಿತಾ ಕಾಮತ ನಿರ್ವಹಿಸಿದರು. ಕೊನೆಯಲ್ಲಿ ನೇತ್ರಾ ಸಿರಿಗೆರೆ ವಂದಿಸಿದರು. ನಂತರ ಅತಿಥಿ ಕಲಾವಿದರಾದ ಗಣಪತಿ ಹೆಗಡೆ ಅವರ ಗಾಯನ, ಸಂವಾದಿನಿ ಸತೀಶ ಭಟ್ಟ ಹೆಗ್ಗಾರ್, ತಬಲಾ ಪ್ರದೀಪ ಕೋಟೆಮನೆ, ನಾಗೇಂದ್ರ ವೈದ್ಯ ಹಾಗು ಸುಸ್ವರ ಸಂಗೀತ ವಿದ್ಯಾಲಯದ ಶಿಕ್ಷಕಿ ಶಶಿಕಲಾ ಸಿ. ಗೋಪಿ ಹಾಗೂ ಸಂಗೀತ ವಿದ್ಯಾರ್ಥಿಗಳ ಗಾಯನ ನಡೆಯಿತು.