ಲೋಕದರ್ಶನ ವರದಿ
ಮಾಂಜರಿ 13 : ಕೃಷ್ಣಾ ನದಿಯ ಪ್ರವಾಹದಿಂದಾಗಿ ಜಲಗ್ಭಂದಕ್ಕೆ ಒಳಗಾದ ಯಡೂರ, ಮಾಂಜರಿ ಮತ್ತು ಇಂಗಳಿ ಗ್ರಾಮದಲ್ಲಿ ಅಪಾರ ಮನೆಗಳು ಕುಸಿದು ಬಿದ್ದಿದ್ದು, ಈ ಕುರಿತು ನೀರಾವರಿ ಇಲಾಖೆಯ ಅಧಿಕಾರಿಗಳು ಕಾಟಾಚಾರಕ್ಕೆ ಸಮೀಕ್ಷೆಮಾಡಿ ಸರಕಾರಕ್ಕೆ ಮತ್ತು ಮೇಲಾಧಿಕಾರಿಗಳಿಗೆ ಭೋಗಸ ಮಾಹಿತಿ ನೀಡಿರುವುದರಿಂದ ನಿಜವಾದ ಫಲಾನುಭವಿಗೆ ನ್ಯಾಯ ದೊರಕಿಲ್ಲಾ ಎಂದು ಕೃಷ್ಣಾ ನದಿ ತೀರದ ಯಡೂರ, ಮಾಂಜರಿ ಮತ್ತು ಇಂಗಳಿ ಗ್ರಾಮದ ಸಂತ್ರಸ್ಥರು ಅಕ್ರೋಶ ವ್ಯಕ್ತ ಪಡೆಸಿದ್ದಾರೆ.
ಕೃಷ್ಣಾ ನದಿ ಪ್ರವಾಹದಲ್ಲಿ ಕೋಚ್ಚಿ ಕೊಂಡು ಹೋಗಿರುವ ನೆರೆ ಸಂತ್ರಸ್ಥರಿಗೆ ಅತೀ ಶಿಘ್ರದಲ್ಲಿ ಸೂಕ್ತವಾದ ತಾತಕಾಲಿಕ ಸೆಡ್ ಹಾಗೂ ಮನೆಗಳು ನಿರ್ಮಾಣಕ್ಕೆ ಅನುದಾನವನ್ನು ನೀಡುವುದಾಗಿ ಸರಕಾರ ಹೇಳಿದರೂ ಸಹ ಪ್ರವಾಹದ ಪ್ರದೇಶದಲ್ಲಿ ಸಂಪೂರ್ಣವಾಗಿ ಮನೆಗಳು ನೆಲ ಸಮವಾಗಿರುವ ಮನೆಗಳಿಗೆ "ಎ" ವಿಭಾಗದಲ್ಲಿ ಸೇರಿಸಬೇಕಾದ ಅಧಿಕಾರಿಗಳು ಕಾಟಾಚಾರದ ಮನೆಗಳ ಸಮಿಕ್ಷೆ ಮಾಡಿ ಸರಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆಂದು ಸಂತ್ರಸ್ತರು ಆಕ್ರೋಶವನ್ನು ವ್ಯಕ್ತಪಡೆಸಿದ್ದಾರೆ.
ಚಿಕ್ಕೋಡಿ ತಾಲುಕಿನ ಕೃಷ್ಣಾ ನದಿತಿರದ ಯಡೂರ, ಮಾಂಜರಿ ಮತ್ತು ಇಂಗಳಿ ಗ್ರಾಮ ಪ್ರವಾಹದಿಂದ ಜಲದಿಗ್ಭಂದನಕ್ಕೆ ಒಳಗಾಗಿ ನೂರಾರು ಮನೆಗಳೂ ನೆಲಸಮವಾಗಿವೆ. ಸೂಕ್ತವಾದ ವರದಿಯನ್ನು ನೀರಾವರಿ ಇಲಾಖೆಯ ಸಹಾಯಕ ಅಭಿಯತರ ಅಧಿಕಾರಿಗಳಿಗೆ ಜಿಲ್ಲಾ ಮತ್ತು ತಾಲೂಕಾ ಆಡಳಿತವು ವಹಿಸಿತ್ತು. ಆದರೆ ಈ ಅಧಿಕಾರಿಗಳು ವಾರ್ಡನಲ್ಲಿ ಮನೆ ಕಳೆದುಕೊಂಡು ಹೋಗಿರುವ ಸಂತ್ರಸ್ಥಫಲಾನುಭವಿಗಳ ಹೆಸರು ಸೂಕ್ತವಾಗಿ ಎ.ಬಿ. ಸಿ ವಿಭಾಗದಲ್ಲಿ ಸೇರಿಸದೆ ಸರಕಾರಕ್ಕೆ ತಪ್ಪು ಮಾಹಿತಿ ಒದಗಿಸಿದ್ದಾರೆ ಎಂದು ಮಾಂಜರಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಮನೆಗಳ ಸಮೀಕ್ಷೇ ಮಾಡುವ ಅಧಿಕಾರಿಗಳು ಗ್ರಾಮದ ಪ್ರಭಾವಿ ರಾಜಕೀಯ ವ್ಯಕ್ತಿಗಳ ತಾಳಕ್ಕೆ ತಕ್ಕಂತೆ ಅಧಿಕಾರಿಗಳು ಕುಣಿದಿದ್ದರಿಂದ ಸಂತ್ರಸ್ತರ ಮನೆ ನೆಲಸಮವಾಗಿರುವ ಮನೆ ಮುಂದೆ ಫೋಟೋ ತಗೆಸಿಕೊಂಡು ಅಧಿಕಾರಿಗಳಿಗೆ ನೀಡಿದ್ದಾರೆ, ಇದರಿಂದ ನೈಜ ಫಲಾನುಭವಿಗಳು ಎಲ್ಲಿಗೆ ಹೋಗಬೇಕೆನ್ನುತ್ತಿದ್ದಾರೆ ಕೃಷ್ಣಾ ನದಿತೀರದ ಸಂತ್ರಸ್ಥರು. ಯಡೂರ ಗ್ರಾಮದ ಬಾಳಾಸಾಹೇಬ ಹಾಲಪ್ಪನವರ ಎಂಬುವರ ಮನೆ ಸಂಪೂರ್ಣವಾಗಿ ಕುಸಿದಿದ್ದರೂ ಸಿ ಶ್ರೇಣಿಗೆ ಸೇರಿಸಿದ್ದಾರೆ ಇದೆ ರೀತಿ ಗ್ರಾಮದಲ್ಲಿ 11 ಜನಗಿಗೆ ಅನ್ಯಾಯವಾಗಿದೆ ಎಂದು ತಿಳಿಸಿದ್ದಾರೆ, ಮಾಂಜರಿ ಗ್ರಾಮದ ಶಂಕರ ಕೋರೆಯವರ ಮನೆ ಸಂಪೂರ್ಣವಾಗಿ ಕುಸಿದಿದ್ದರೂ ಬಿ, ಶ್ರೇಣಿ ನೀಡಿದ್ದಾರೆ, ಇದರಂತೆ 22 ಜನರಿಗೆ ಅನ್ಯಾಯವಾಗಿದೆ ಎಂದು ತಿಳಿಸಿದ್ದಾರೆ, ಇಂಗಳಿ ಗ್ರಾಮದ ರಾಮಚಂದ್ರ ಧಾಬಡೆಯವರ ಮನೆ ಸಂಪೂರ್ಣವಾಗಿ ಕುಸಿದಿದ್ದರೂ ಬಿ, ಶ್ರೇಣಿ ನೀಡಿದ್ದಾರೆ, ಇದರಂತೆ 30 ಜನಿರಿಗೆ ಅನ್ಯಾಯವಾಗಿದೆ ಎಂದು ತಿಳಿಸಿದರಲ್ಲದೆ ನಾವು ಈ ಕುರಿತು ಉಪ ವಿಭಾಗಾಧಿಕಾರಿಗಳಾದ ರವೀಂದ್ರ ಕರಲಿಂಗನ್ನವರ ಇವರಿಗೆ ನಮಗೆ ಆಗಿರುವ ಅನ್ಯಾದ ಕುರಿತು ಮನವಿಯನ್ನು ಸಲ್ಲಿಸಲಾಗಿದೆ, ಸಂತ್ರಸ್ಥರಿಗೆ ಅನ್ಯಾಯವಾಗಿದೆ ಅರೋಪ ಕೇಳಿಬರುತ್ತಿದ್ದು, ನೈಜ ಸಂತ್ರಸ್ಥರಿಗೆ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆಂದು ತಿಳಿಸಿದ್ದಾರೆ.
ಒಂದು ಕಡೆ ನೀರಿನಲ್ಲಿ ತಮ್ಮ ಬದುಕು ಕೊಚ್ಚಿಕೊಂಡು ಹೋಗಿ, ಈ ಜೀವನ ಸಾಕು ಸಾಕಾಗಿ ಹೋಗಿದೆ. ಜನ ಪ್ರತಿನಿಧಿಗಳು ಗಂಜಿ ಕೇಂದ್ರಕ್ಕೆ ಬಂದು ಸಂತ್ರಸ್ತರ ನೆರುವಿನೊಂದಿಗೆ ಹೊಸ ಬದುಕು ಕಟ್ಟಿಕೊಂಡುವುದ್ದಾಗಿ ಎಲ್ಲ ರಾಜಕೀಯ ಬಣ್ಣದ ಮಾತುಗಳು ಹೇಳಿ ಹೋದವರು ಸಂತ್ರಸ್ತರ ಕಡೆಗೆ ತಿರುಗಿ ಇನ್ನೂವರೆಗೆ ನೋಡಿಲ್ಲಾ. ಸಂತ್ರಸ್ತರು ಎಲ್ಲಿ ಹೋಗಿ ಜೀವನ ನಡೆಸುತ್ತಿದ್ದಾರೆಯೂ ಅಥವಾ ಹೇಗೆ ಇದ್ದಾರೆ ಎಂಬುದನ್ನು ಕೇಳಲು ಯಾರು ಮರಳಿ ಬಾರದೆವಿರುವುದು ವಿಶಾದದ ಸಂಗತಿಯಾಗಿದೆ ಎಂದು ಯಡೂರ, ಮಾಂಜರಿ ಮತ್ತು ಇಂಗಳಿ ಗ್ರಾಮದ ಸಂತ್ರಸ್ತರ ಅಳಲಾಗಿದೆ.