ಬಡ ಕುಟುಂಬಗಳಿಗೆ ಉಚಿತ ಹಾಲು ವಿತರಣೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ

ಮಂಗಳೂರು, ಏ ೪, ಜಿಲ್ಲೆಯ ಅಧಿಸೂಚಿತ  ಪ್ರದೇಶದ ವಾಸಿಗಳು, ಅಧಿಸೂಚಿತವಲ್ಲದ ಕೊಳೆಗೇರಿ ನಿವಾಸಿಗಳು, ನಿರ್ಮಾಣ ಕಾರ್ಮಿಕರು  ಹಾಗೂ ವಲಸೆ ಕಾರ್ಮಿಕರು  ಹಾಗೂ ಅವರ ಕುಟುಂಬಗಳಿಗೆ  ನಿತ್ಯ  ೫,೦೦೦ ಲೀಟರ್ ಹಾಲ  ವಿತರಿಸಲು ದಕ್ಷಿಣ ಕನ್ನಡ ಜಿಲ್ಲಾ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಅವರು ಜಿಲ್ಲೆಯ ಹಾಲು ಉತ್ಪಾದಕ  ಸಂಘಗಳಿಗೆ ಆದೇಶಿಸಿದ್ದಾರೆ.ಅತ್ಯಂತ ಅಗತ್ಯವಿರುವ ಕುಟುಂಬಗಳಿಗೆ  ಉಚಿತವಾಗಿ ಹಾಲು  ವಿತರಿಸಬೇಕೆಂದು  ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ  ಅವರು ಏಪ್ರಿಲ್ ೧ರಂದು  ನಡೆಸಿದ್ದ ಸಭೆಯಲ್ಲಿ ಈ ಸಂಬಂಧ ನಿರ್ಧಾರ ಕೈಗೊಂಡಿದ್ದರು.ಏಪ್ರಿಲ್ ೪ ರಿಂದ  ೧೪ರವರೆಗೆ  ಬಡ ಕುಟುಂಬಗಳಿಗೆ  ಉಚಿತವಾಗಿ ಹಾಲು ವಿತರಿಸುವಂತೆ  ಜಿಲ್ಲಾ ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.