ಬೆಳಗಾವಿ 15: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿ ದಾದಾ ಅಶೋಕ ಮಾನಗಾಂವಿ ಅವರಿಗೆ ಇತ್ತೀಚೆಗೆ ಆರ್‌ಸಿಯು ಪಿಎಚ್.ಡಿ ಪದವಿ ನೀಡಿದೆ.
ದಾದಾ ಮಾನಗಾಂವಿ ಅವರು ಆರ್‌ಸಿಯು ಸಮಾಜ ಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕಿ ಪ್ರೊ. ಚಂದ್ರಿಕಾ. ಕೆ.ಬಿ ಅವರ ಮಾರ್ಗದರ್ಶನದಲ್ಲಿ ‘ಜೈನ ಸಮುದಾಯದ ಒಂದು ಸಮಾಜಶಾಸ್ತ್ರೀಯ ಅಧ್ಯಯನ’ ಕುರಿತಾಗಿ ಆರ್‌ಸಿಯುಗೆ ಮಹಾಪ್ರಬಂಧ ಮಂಡಿಸಿದ್ದರು. ದಾದಾ ಅವರ ತಂದೆ ಅಶೋಕ ಮಾನಗಾಂವಿ ಅವರು ಬಾಗಲಕೋಟೆ ಜಿಲ್ಲೆಯ ತೇರದಾಳ ತಾಲೂಕಿನ ಕೃಷಿಕ ಕುಟುಂಬದವರಾಗಿದ್ದಾರೆ.
ಇವರ ಈ ಸಾಧನೆಗೆ ಕುಟುಂಬ ಮತ್ತು ಪರಿವಾರದ ಸದಸ್ಯರು, ಆರ್‌ಸಿಯು ಸಮಾಜಶಾಸ್ತ್ರ ವಿಭಾಗದ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.