ಜೋಹನ್ಸ್ಬರ್ಗ್, ಫೆ 17, ದಕ್ಷಿಣ ಆಫ್ರಿಕಾ ಟಿ20 ಮತ್ತು ಟೆಸ್ಟ್ ತಂಡಗಳ ನಾಯಕತ್ವದಿಂದ ಫಾಫ್ ಡು ಪ್ಲೇಸಿಸ್ ಅವರು ಕೆಳಗಿಳಿದಿದ್ದಾರೆ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ ಸೋಮವಾರ ಸ್ಪಷ್ಟಪಡಿಸಿದೆ."ನಾನು ನಾಯಕತ್ವವನ್ನು ವಹಿಸಿಕೊಂಡಾಗ, ಮುನ್ನಡೆಸುವ, ನಿರ್ವಹಿಸುವ ಮತ್ತು ಮುಖ್ಯವಾಗಿ ಸೇವೆ ಸಲ್ಲಿಸುವ ಬದ್ಧತೆಯನ್ನು ತೋರಿದ್ದೇನೆ. ತಂಡವು ಹೊಸ ನಾಯಕರು ಮತ್ತು ಯುವ ಆಟಗಾರರೊಂದಿಗೆ ಹೊಸ ದಿಕ್ಕಿನಲ್ಲಿ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಸ್ವರೂಪದ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಲು ಇದು ಸಕಾಲ ಎಂದು ಭಾವಿಸುತ್ತೇನೆ ಹಾಗೂ ಇದು ದಕ್ಷಿಣ ಆಫ್ರಿಕಾ ಬೆಳವಣಿಗೆಗೆ ಸಕಾರವಾಗಲಿದೆ,''
ಎಂದು ಡು ಪ್ಲೇಸಿಸ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಕ್ವಿಂಟನ್ ಡಿ ಕಾಕ್ ನೇತೃತ್ವದಲ್ಲಿ ತಂಡದೊಳಗಿನ ಮುಂದಿನ ಪೀಳಿಗೆಯ ನಾಯಕರ ಹೊರಹೊಮ್ಮುವಿಕೆಗೆ ಅನುಕೂಲವಾಗಲು ನಾಯಕತ್ವದಿಂದ ಒಂದು ಹೆಜ್ಜೆ ಹಿಂದಕ್ಕೆ ತೆಗೆದುಕೊಳ್ಳಬೇಕಾದ ಅಗತ್ಯವನ್ನು 35 ವರ್ಷದ ಡುಪ್ಲೇಸಿಸ್ ಉಲ್ಲೇಖಿಸಿದ್ದಾರೆ." ಇದು ತೆಗೆದುಕೊಂಡ ಕಠಿಣ ನಿರ್ಧಾರಗಳಲ್ಲಿ ಒಂದಾಗಿದೆ. ಆದರೆ, ನಾವು ಕ್ವಿಂಟನ್, ಮಾರ್ಕ್ ಮತ್ತು ನನ್ನ ತಂಡದ ಆಟಗಾರರನ್ನು ಬೆಂಬಲಿಸಲು ಸಂಪೂರ್ಣವಾಗಿ ಬದ್ಧರಾಗಿದ್ದೇನೆ. ಏಕೆಂದರೆ, ನಾವು ಒಂದು ಗುಂಪಾಗಿ ಪುನರ್ನಿರ್ಮಾಣ ಮತ್ತು ಮರು ಜೋಡಣೆಯನ್ನು ಮುಂದುವರಿಸುತ್ತೇವೆ" ಎಂದು ಅವರು ಹೇಳಿದರು.ಬಲಗೈ ಬ್ಯಾಟ್ಸ್ಮನ್ ಕಳೆದ 2012 ಡಿಸೆಂಬರ್ ತಿಂಗಳಿನಿಂದ ದಕ್ಷಿಣ ಆಫ್ರಿಕಾ ತಂಡವನ್ನು ಎಲ್ಲ ಮೂರು ಮಾದರಿಯಲ್ಲಿ 112 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ.