ದುಬೈ ಓಪನ್: ಅಂತಿಮ 16ಕ್ಕೆ ಸಾನಿಯಾ ಮಿಜರ್ಾ- ಕರೋಲಿನ್ ಗಾಸರ್ಿಯಾ ಜೋಡಿ

 ದುಬೈ, ಫೆ 19, ಮೊದಲನೇ ಸೆಟ್ನ ಕಠಿಣ ಹೋರಾಟದ ಜಯದೊಂದಿಗೆ ಭಾರತದ ಹಿರಿಯ ಟೆನಿಸ್ ಆಟಗಾತರ್ಿ ಸಾನಿಯಾ ಮಿಜರ್ಾ ಇಲ್ಲಿ ನಡೆಯುತ್ತಿರುವ ದುಬೈ ಓಪನ್ ಟೂನರ್ಿಯ ಮಹಿಳಾ ಡಬಲ್ಸ್ ವಿಭಾಗದಲ್ಲಿ ಫ್ರೆಂಚ್ ಜತೆಗಾತರ್ಿ ಕರೋಲಿನ್ ಗಾಸರ್ಿಯಾ ಅವರೊಂದಿಗೆ ಪ್ರೀ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಸಾನಿಯಾ ಹಾಗೂ ಗಾಸರ್ಿಯಾ ಜೋಡಿಯು 6-4, 4-6, 10-8 ಅಂತರದಲ್ಲಿ ರಷ್ಯಾದ ಅಲ್ಲಾ ಕುದ್ರಿಯಾವತ್ಸವೆ ಮತ್ತು ಸ್ಲೊವೇನಿಯಾದ ಕಟಾರಿನಾ ಸ್ರೆಬೊಟ್ನಿಕ್ ಜೋಡಿಯನ್ನು ಮಣಿಸಿ ಅಂತಿಮ 16 ರ ಹಂತಕ್ಕೆ ಲಗ್ಗೆ ಇಟ್ಟಿದೆ. ಮುಂದಿನ ಸುತ್ತಿನಲ್ಲಿ ಚೀನಾದ ಸಾಯ್ಸಾಯ್ ಝೆಂಗ್ ಹಾಗೂ ಜೆಕ್ ಗಣರಾಜ್ಯದ ಬಾಬರ್ೊರಾ ಕ್ರೆಜ್ಕಿಕೋವಾ ವಿರುದ್ಧ ಸೆಣಸಲಿದ್ದಾರೆ. ಗಾಯದಿಂದಾಗಿ ಸಾನಿಯಾ ಮಿಜರ್ಾ ಕಳೆದ ಆಸ್ಟ್ರೇಲಿಯಾ ಓಪನ್ ಟೂನರ್ಿಯಿಮದ ಹೊರ ನಡೆದಿದ್ದರು.ಅದಾದ ಬಳಿಕ ದುಬೈ ಓಪನ್ ಅವರ ಮೊದಲ ಟೂನರ್ಿಯಾಗಿದೆ. ಮೊದಲ ಗ್ರ್ಯಾನ್ ಸ್ಲ್ಯಾಮ್ನಲ್ಲಿ ಮೊದಲು ರೋಹನ್ ಬೋಪಣ್ಣ ಅವರೊಂಂದಿಗೆ ಮಿಶ್ರ ಡಬಲ್ಸ್ ವಿಭಾಗದಲ್ಲಿ ವಿಥ್ ಡ್ರಾ ಮಾಡಿಕೊಂಡಿದ್ದರು. ತಡವಾಗಿ ಮಹಿಳಾ ಡಬಲ್ಸ್ನಿಂದಲೂ ಹೊರ ನಡೆದಿದ್ದರು. ಇದಕ್ಕೂ ಮುನ್ನ ಸಾನಿಯಾ ಮಿಜರ್ಾ ಅವರು ಹೊಬಾಟರ್್ ಇಂಟರ್ ನ್ಯಾಷನಲ್ ಮಹಿಳಾ ಡಬಲ್ಸ್ ವಿಬಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಎರಡು ವರ್ಷಗಳ ವಿಶ್ರಾಂತಿಯ ಬಳಿಕ ಇದು ಅವರ ಮೊದಲ ಪ್ರಶಸ್ತಿಯಾಗಿತ್ತು.