1348 ಪ್ರಯಾಣಿಕರ ಆಗಮನ ಮುನ್ನೆಚ್ಚರಿಕೆಯೊಂದಿಗೆ ಸ್ವಗ್ರಾಮಕ್ಕೆ ತೆರಳಲು ಡಿಸಿ ಕ್ರಮ

ವಿಜಯಪುರ ಮೇ.15: ಮಹಾರಾಷ್ಟ್ರ ರಾಜ್ಯದ ಸಿಂಧುದುರ್ಗ ಮೂಲಕ ಇಂದು ಒಟ್ಟು 1348 ಪ್ರಯಾಣಿಕರು ಜಿಲ್ಲೆಗೆ ಆಗಮಿಸಿದ್ದು, ವಿಜಯಪುರ ನಗರದ ರೈಲ್ವೆ ನಿಲ್ದಾಣದಲ್ಲಿ ಸಕಲ ಮುಂಜಾಗೃತೆಯೊಂದಿಗೆ ಜಿಲ್ಲೆಯ ವಿವಿಧ ಭಾಗಗಳಿಗೆ ತೆರಳಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.

ಈ ಎಲ್ಲ ಪ್ರಯಾಣಿಕರನ್ನು ಜಿಲ್ಲೆಯ ವಿಜಯಪುರ ನಗರ ಸೇರಿದಂತೆ 12 ತಾಲೂಕಾ ಕೇಂದ್ರಗಳಿಗೆ ಕರೆದೊಯ್ಯಲು 41 ಬಸ್ಗಳ ವ್ಯವಸ್ಥೆ ಮಾಡಲಾಗಿದ್ದು, ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಅಲ್ಪೋಪಹಾರ, ಕುಡಿಯುವ ನೀರು, ಬಿಸ್ಕೇಟ್ಗಳ ವ್ಯವಸ್ಥೆಯೊಂದಿಗೆ ಅಲ್ಪೋಪಹಾರ ಪಾರ್ಸಲ್ ಮೂಲಕ ಒಯ್ಯಲು ಪ್ಯಾಕೇಟ್ಗಳನ್ನು ಪ್ರಯಾಣಿಕರಿಗೆ ಜಿಲ್ಲಾಡಳಿತದ ವತಿಯಿಂದ ವ್ಯವಸ್ಥೆ ಮಾಡಲಾಗಿದೆ. 

ಈಎಲ್ಲ ಪ್ರಯಾಣೀಕರಿಗೆ ಆಯಾ ತಾಲೂಕಾ ಕೇಂದ್ರ್ರಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಸೇರಿದಂತೆ ಆರೋಗ್ಯ ತಪಾಸಣೆಗೆ ಕ್ರಮ ಕೈಗೊಳ್ಳಲಾಗಿದೆ. ಅದರಂತೆ ಜಿಲ್ಲಾಧ್ಯಂತ ಈ ಎಲ್ಲ ಪ್ರಯಾಣಿಕರ ಕ್ವಾರಂಟೈನ್ಗೂ ಜಿಲ್ಲಾಡಳಿತದ ವತಿಯಿಂದ ಸಕಲ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ತಹಶೀಲ್ದಾರರು, ಆಯಾ ನಗರ ಸ್ಥಳಿಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ತಾಲೂಕಾಪಂಚಾಯತ ಕಾರ್ಯನಿರ್ವಹಣಾಧಿಕಾರಿಗಳು, ತಾಲೂಕಾ ಆರೋಗ್ಯ ಅಧಿಕಾರಿಗಳು, ಪೊಲೀಸ್ ಇನ್ಸಪೇಕ್ಟರ್, ಪಿಡಿಓಗಳು, ಶಾಲಾ ಮುಖ್ಯೋಪಾಧ್ಯಾಯರು, ಬಿಆರ್ಸಿ,ಸಿಆರ್ಸಿ, ಗ್ರಾಮ ಲೆಕ್ಕಾಧಿಕಾರಿಗಳು ಸೇರಿದಂತೆ ಇತರ ಸಿಬ್ಬಂಧಿಗಳನ್ನು ಒಳಗೊಂಡ ವಿವಿಧ ಸಮಿತಿಗಳನ್ನು ರಚಿಸಿ ಜವಾಬ್ದಾರಿ ನೀಡಲಾಗಿದೆ. 

ಪ್ರಯಾಣಿಕರನ್ನು ಕರೆದೋಯ್ದ ಪ್ರತಿ ಬಸ್ಗೆ ಓರ್ವ ನೋಡೆಲ್ ಅಧಿಕಾರಿ, ಚಾಲಕ, ನಿವರ್ಾಹಕರನ್ನು ಪಿಪಿಇ ಕಿಟ್, ಮಾಸ್ಕ್, ಸ್ಯಾನಿಟೈಸರ್ಗಳೋಂದಿಗೆ ಅವಶ್ಯಕ ಮುನ್ನೆಚ್ಚರಿಕೆ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ,

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಸಿಂಧದುರ್ಗದಿಂದ 1348 ಜನರು ಶ್ರಮಿಕ್ ರೈಲ್ವೈ ಮೂಲಕ ಜಿಲ್ಲೆಗೆ ಆಗಮಿಸಲಿದ್ದಾರೆಂಬ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನೂ ಸಂಗ್ರಹಿಸಲಾಗಿತ್ತು. ಅದರಂತೆ ಇದಕ್ಕೆ ಸಂಬಂಧಪಟ್ಟಂತೆ ರೈಲ್ವೈ ನಿಲ್ದಾಣದಲ್ಲಿಯೇ ಆ 1348 ಜನರ ಆರೋಗ್ಯ ತಪಾಸಣೆ ಸೇರಿದಂತೆ ತಪಾಸಣೆಗೆ ಅನಾನುಕೂಲವಾಗಬಹುದೆಂಬ ದೃಷ್ಟಿಯಿಂದ 12 ನಿಗದಿತ ತಾಲೂಕುಗಳಲ್ಲಿ ಅವರ ಆರೋಗ್ಯ ತಪಾಸಣೆ ವ್ಯವಸ್ಥೆ ಮಾಡಲಾಗಿದೆ. 

ಪ್ರಯಾಣಿಕರು ಜಿಲ್ಲೆಗೆ ಬಂದಿಳಿದ ತಕ್ಷಣ ಅವರನ್ನು ಆಯ್ದ ತಾಲೂಕುಗಳಿಗೆ ಕಳುಹಿಸಲು ಕೆಎಸ್ಆರ್ಟಿಸಿ ವತಿಯಿಂದ ಸುಮಾರು 40 ಬಸ್ಗಳ ವ್ಯವಸ್ಥೆ ಮಾಡಿದ್ದು, ಅವರನ್ನು ಕ್ವಾರಂಟೈನ್ ಮಾಡಲು ವಿಶೇಷವಾಗಿ ಮೋರಾಜರ್ಿ ದೇಸಾಯಿ ಶಾಲೆ ಅಥವಾ ವಸತಿ ನಿಲಯಗಳನ್ನು ನಿಗದಿಪಡಿಸಲಾಗಿದೆ ಎಂದು ಹೇಳಿದರು.

        ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್      ಅಗರವಾಲ್ ಅವರು ಮಾತನಾಡಿ ಸಿಂಧದುರ್ಗದಿಂದ 1348 ಜನರು ಶ್ರಮಿಕ್ ರೈಲ್ವೈ ಮೂಲಕ ಜಿಲ್ಲೆಗೆ ಆಗಮಿಸುವ ಹಿನ್ನೆಲೆಯಲ್ಲಿ ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಲು ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಸಾಮಾಜಿಕ ಅಂತರ ನಿಯಮ ಉಲ್ಲಂಘನೆಯಾಗದಂತೆ ನಿಗಾ ಇಡಲಾಗಿದೆ. 

        ಇದಕ್ಕಾಗಿ ನೂರಕ್ಕೂ ಹೆಚ್ಚು ಅಧಿಕಾರಿ ಹಾಗೂ ಸಿಬ್ಬಂದಿಗಳಿದ್ದಾರೆ. ಅದರಂತೆ ಡಿಆರ್ ಮತ್ತು ಕೆಎಸ್ಆರ್ಪಿ ಸಿಬ್ಬಂದಿಗಳನ್ನು ಇಟ್ಟುಕೊಂಡಿದ್ದು, ಕಾನೂನು ಸುವ್ಯವಸ್ಥೆ ಹದಗೆಡದಂತೆ ಎಚ್ಚರ ವಹಿಸಲಾಗಿದೆ. ಕೆಲವು ರಾಜ್ಯ ಹಾಗೂ ಜಿಲ್ಲೆಗಳಲ್ಲಿ ಸಾಮಾಜಿಕ ಅಂತರ ನಿಯಮದಲ್ಲಿ ಸಮಸ್ಯೆಗಳಾಗಿದ್ದನ್ನು ಗಮನದಲ್ಲಿಟ್ಟುಕೊಂಡು ಎಲ್ಲವನ್ನು ವ್ಯವಸ್ಥಿತವಾಗಿ ನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದರು.

      ರೈಲ್ವೇ ನಿಲ್ದಾಣದಲ್ಲಿ ಅವಶ್ಯಕ ಪೊಲೀಸ್ ಬಂದೋಬಸ್ಥ ಮಾಡಲಾಗಿತ್ತು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಜಲ್ಲಾ ಪೊಲೀಸ್ವರಿಷ್ಠ್ಠಾಧಿಕಾರಿ ಅನುಪಮ ಅಗರವಾಲ್, ಅಪರ ಜಿಲ್ಲಾಧಿಕಾರಿ ಡಾ,ಔದ್ರಾಮ್, ಕೆಎಸ್ಆರ್ಟಿಸಿ ವಿಭಾಗಿಯ ನಿಯಂತ್ರಣಾಧಿಕಾರಿ ಗಂಗಾಧರ, ಮಹಾನಗರ ಪಾಲಿಕೆ ಆಯುಕ್ತ ಹಷರ್ಾ ಶಟ್ಟಿ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.