ಹಾವೇರಿ: ಮೇ 07: ಹೊರದೇಶ, ರಾಜ್ಯ ಹಾಗೂ ಜಿಲ್ಲೆಗಳಿಂದ ಹಾವೇರಿ ಜಿಲ್ಲೆಗೆ ಬರುವ ಪ್ರಯಾಣಿಕರು, ಯಾತ್ರಾಥರ್ಿಗಳು, ವಿದ್ಯಾಥರ್ಿಗಳ ಎಂಟ್ರಿ ಚೆಕ್ಪೋಸ್ಟ್ಗಳಲ್ಲಿ ಕಟ್ಟುನಿಟ್ಟಿನ ಆರೋಗ್ಯ ತಪಾಸಣೆ ನಡೆಸಬೇಕು. ವೈದ್ಯರ ಸಲಹೆ ಮೇರೆಗೆ ಇವರನ್ನು ಕ್ವಾರಂಟೈನ್ ಮಾಡಲು ಸಿದ್ಧತೆ ಮಾಡಿಕೊಳ್ಳುವಂತೆ ತಾಲೂಕಾ ತಹಶೀಲ್ದಾರಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಸೂಚನೆ ನೀಡಿದರು.
ಗುರುವಾರ ಸಂಜೆ ತಾಲೂಕಾ ತಹಶೀಲ್ದಾರಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು ಹಗಡು ಮತ್ತು ವಿಮಾನ ಮೂಲಕ ಬೆಂಗಳೂರು ಮತ್ತು ಮಂಗಳೂರ ಏರ್ಪೋಟರ್್ಗೆ ತಲುಪಲಿರುವ ವಿದೇಶಿಗರನ್ನು ಆಯಾ ಜಿಲ್ಲೆಗೆ ಕಳುಹಿಸಿಕೊಡುವ ಪ್ರಕ್ರಿಯೆ ಶುಕ್ರವಾರದಿಂದ ಆರಂಭಗೊಳ್ಳಲಿದೆ. ಹಾವೇರಿಗೆ ಪ್ರವೇಶ ಮಾಡಲು ಮಾಕನೂರು ಹಾಗೂ ತಡಸ ಚೆಕ್ಪೋಸ್ಟ್ಗಳನ್ನು ಪ್ರವೇಶ ಮತ್ತು ನಿರ್ಗಮನ ಚೆಕ್ಪೋಸ್ಟ್ಗಳಾಗಿ ಗುರುತಿಸಲಾಗಿದೆ. ಈ ಚೆಕ್ಪೋಸ್ಟ್ಗಳಲ್ಲಿ ಸಕರ್ಾರದ ಮಾರ್ಗಸೂಚಿಯಂತೆ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಅಗತ್ಯ ಸಿಬ್ಬಂದಿಯೊಂದಿಗೆ ಸಿದ್ಧವಾಗಿರುವಂತೆ ಸೂಚನೆ ನೀಡಿದರು.
ಈಗಾಗಲೇ ವಿದೇಶದಿಂದ ಬಂದವರು, ಹೊರ ರಾಜ್ಯದಿಂದ ಬಂದವರು ಹಾಗೂ ಹೊರ ಜಿಲ್ಲೆಯಿಂದ ಬರುವವರನ್ನು ಎ,ಬಿ ಮತ್ತು ಸಿ ಎಂದು ವಗರ್ೀಕರಿಸಿ ಕೈಗೊಳ್ಳಬೇಕಾದ ಮಾರ್ಗಸೂಚಿಯನ್ನು ಸಕರ್ಾರ ಪ್ರಕಟಿಸಿದೆ. ಚುನಾವಣಾ ಸಂದರ್ಭದಲ್ಲಿ ಚೆಕ್ಪೋಸ್ಟ್ಗಳಲ್ಲಿ ಮಾಡಿಕೊಳ್ಳುವ ಸಿದ್ಧತೆಯಂತೆ ಸಕರ್ಾರದ ಮಾರ್ಗಸೂಚಿಯಂತೆ ವೈದ್ಯಾಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಅಗತ್ಯ ಸಿದ್ಧತೆಮಾಡಿಕೊಂಡು ನಿಯಮಗಳನ್ನು ಕಠಿಣವಾಗಿ ಪಾಲಿಸಬೇಕು ಎಂದು ಸೂಚನೆ ನೀಡಿದರು.
ಆರೋಗ್ಯ ತಪಾಸಣೆಗಾಗಿ ಮಾಕನೂರ ಹಾಗೂ ತಡಸ ಚೆಕ್ಪೋಸ್ಟ್ಬಳಿ ಹತ್ತಿರದ ಶಾಲಾ ಕಟ್ಟಡ ಗುರುತಿಸಿ ಪ್ರವಾಸಿಗರ ಆರೋಗ್ಯ ತಪಾಸಣೆ, ಆರೋಗ್ಯ ಸೇತು, ಕರೋನಾ ವಾಚ್ ಹಾಗೂ ಸೇವಾ ಸಿಂಧು ಆ್ಯಪ್ಗಳ ಕುರಿತು ಪರಿಶೀಲನೆ, ಸ್ವಯಂ ದೃಢೀಕರಣ ಪತ್ರಗಳ ಪರಿಶೀಲನೆ, ಎಡಮುಂಗೈಗೆ ಕ್ವಾರಂಟೈನ್ ಸೀಲ್ ಹಾಕುವ ಕುರಿತಂತೆ ಕ್ರಮ, ಪೊಲೀಸ್ ವ್ಯವಸ್ಥೆಗಳ ಕುರಿತಂತೆ ನಿಯಮಗಳನ್ನು ಪಾಲನೆ ಮಾಡಬೇಕು. ವಿದೇಶಿ ಹಾಗೂ ಹೊರ ರಾಜ್ಯದಿಂದ ಬರುವವರ ಆರೋಗ್ಯ ತಪಾಸಣೆ ಅತ್ಯಂತ ಕಟ್ಟುನಿಟ್ಟಾಗಿ ನಡೆಸಬೇಕು. ಯಾವುದೇ ನಿರ್ಲಕ್ಷ್ಯ ಮಾಡಬಾರದು, ಆತುರಮಾಡಬಾರದು. ಜಿಲ್ಲೆಗೆ ಪ್ರವೇಶಿಸುವ ಎಲ್ಲರನ್ನೂ ಕಡ್ಡಾಯವಾಗಿ ತಪಾಸಣೆ ನಡೆಸಿ ವೈದ್ಯರ ಸಲಹೆ ಮೇರೆಗೆ ಸಾಂಸ್ಥಿಕ ಅಥವಾ ಗೃಹ ಕ್ವಾರಂಟೈನ್ಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.
ವಿಡಿಯೋ ಸಂವಾದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾಜರ್ುನ ಬಾಲದಂಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಮನಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೆಶಕ ಅಂದಾನೆಪ್ಪ ವಡಗೇರಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಮಖಾನೆ, ಸಮಾಜ ಕಲ್ಯಾಣ ಇಲಾಖೆ ಉಪನಿದರ್ೆಶಕಿ ಶ್ರೀಮತಿ ಚೈತ್ರಾ, ಜಿಲ್ಲೆಯ ಎಲ ತಹಶೀಲ್ದಾರಗಳು ಇತರರು ಉಪಸ್ಥಿತರಿದ್ದರು.