ಹಾವೇರಿ:ಎ. 03: ಜಿಲ್ಲೆಗೆ ಪ್ರತಿ ನಿತ್ಯ ಐದು ಸಾವಿರ ಲೀಟರ್ ಹಾಲು ಕೆ.ಎಂ.ಎಫ್ನಿಂದ ಪೂರೈಕೆಯಾಗುತ್ತಿದೆ. ಜಿಲ್ಲೆಯ ಕಾಮರ್ಿಕರಿಗೆ ನಗರ ಸ್ಥಳೀಯ ಸಂಸ್ಥೆ, ಕೆ.ಎಂ.ಎಫ್ ಹಾಗೂ ಪಶು ವೈದ್ಯಕೀಯ ಇಲಾಖೆ ಮೂಲಕ ಉಚಿತವಾಗಿ ವಿತರಣೆಗೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಸೂಚನೆ ನೀಡಿದರು.
ಗುರುವಾರ ಸಂಜೆ ತಾಲೂಕಾ ಆಡಳಿತದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಕರೋನಾ ಸಾಂಕ್ರಾಮಿಕ ರೋಗ ತಡೆಗಟ್ಟಲು ರಾಜ್ಯ ಸಹ ಲಾಕ್ಡೌನ್ ಆಗಿರುವುದರಿಂದ ಹಾವೇರಿ ಜಿಲ್ಲೆಯ ಹಾಲು ಒಕ್ಕೂಟ ವ್ಯಾಪ್ತಿಯ ಅಧಿಸೂಚಿತ ಕೊಳಗೇರಿಗಳು, ಅಧಿಸೂಚಿತವಲ್ಲದ ಗುರುತಿಸಲ್ಪಟ್ಟ ಕೊಳಗೇರಿಗಳು, ಕಟ್ಟಡ ಕಾಮರ್ಿಕರ ವಸತಿ ತಾಣಗಳು ಮತ್ತು ವಲಸಿಗ ಕಾಮರ್ಿಕರಿಗಾಗಿ ಆರಂಭಿಸಿರುವ ಪುನರ್ ವಸತಿ ಶಿಬಿರಗಳಲ್ಲಿ ಕುಟುಂಬವೊಂದಕ್ಕೆ ದಿನ ಒಂದು ಲೀಟರ್ನಂತೆ ಹಾಲು ವಿತರಿಸಲು ಸಕರ್ಾರ ನಿದರ್ೆಶನ ನೀಡಿದೆ. ಇಂದಿನಿಂದ ಎಪ್ರಿಲ್ 14ರವರೆಗೆ ಉಚಿತವಾಗಿ ಸಕರ್ಾರ ಕೆ.ಎಂ.ಎಫ್. ಮೂಲಕ ಹಾಲು ವಿತರಣೆ ಮಾಡಲಿದೆ. ಜಿಲ್ಲೆಗೆ ನಿತ್ಯ ಐದು ಸಾವಿರ ಲೀಟರ್ ಹಾಲು ಪೂರೈಕೆಯಾಗಲಿದೆ ಎಂದು ತಿಳಿಸಿದರು.
ಜಿಲ್ಲೆಯ ಆಯಾ ತಹಶೀಲ್ದಾರಗಳಿಂದ ಹಾಗೂ ನಗರಸಭೆ, ಪುರಸಭೆಗಳಿಂದ ಕಾಮರ್ಿಕರ ವಿವರ ಪಡೆದು ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಕೆ.ಎಂ.ಎಫ್. ಸಹಯೋಗದಲ್ಲಿ ಹಾಲು ವಿತರಣೆಗೆ ಕ್ರಮವಹಿಸಲು ಸೂಚನೆ ನೀಡಿದರು.
ವಲಸಿಗ ಕಾರ್ಮಿಕರಿಗೆ ವಸತಿ: ಜಿಲ್ಲೆಯಲ್ಲಿ ಹೊರ ರಾಜ್ಯದ 486 ವಲಸಿಗರಿದ್ದು, 153 ಜನರಿಗೆ ಹಾವೇರಿ ತಾಲೂಕಿನ ಹೊಸರಿತ್ತಿ ಗುತ್ತಲ ವಸತಿ ನಿಲಯಗಳು, ಸವಣೂರಿನ ಸಮುದಾಯ ಭವನ ಮತ್ತು ಶಿಗ್ಗಾಂವ ತಾಲೂಕಿನ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದು ಕಾಮರ್ಿಕ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಟ್ಟಡ ಕಾಮರ್ಿಕರು ಮತ್ತು ಅಸಂಘಟಿತ ಕಾಮರ್ಿಕರಿಗೆ ಜಾಗೃತಿ ಪತ್ರ, ಸೋಪು, ಮಾಸ್ಕ್, ಸ್ಯಾನಿಟರಿ ಬಾಟಲ್ ಒಳಗೊಂಡ ಕಿಟ್ಗಳನ್ನು ರೆಡ್ಕ್ರಾಸ್ ಸಂಸ್ಥೆಯ ಮೂಲಕ ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಮಕ್ಕಳಿಗೆ ಪಡಿತರ: ಜಿಲ್ಲೆಯ 1 ರಿಂದ 10ನೇ ತರಗತಿಯ 1,36,590 ಮಕ್ಕಳಿಗೆ 21 ದಿನಗಳ ಮಧ್ಯಾಹ್ನ ಬಿಸಿಯೂಟದ ಬದಲು ಆಹಾರ ಧಾನ್ಯ ವಿತರಿಸಲು 3530.16 ಕ್ವಿಂಟಾಲ್ ಅಕ್ಕಿ ಹಾಗೂ 1765.08 ಕ್ವಿಂಟಾಲ್ ತೊಗರಿ ಬೆಳೆಯನ್ನು ವಿತರಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೆಶಕರು ತಿಳಿಸಿದ್ದಾರೆ.
ಫೀವರ್ ಕ್ಲಿನಿಕ್: ಜಿಲ್ಲಾ ಆಸ್ಪತ್ರೆ, ರಾಣೇಬೆನ್ನೂರು, ಬ್ಯಾಡಗಿ, ಹಿರೇಕೆರೂರು, ಹಾನಗಲ್, ಸವಣೂರು ಮತ್ತು ಶಿಗ್ಗಾಂವ ತಾಲೂಕು ಆಸ್ಪತ್ರೆಗಳಲ್ಲಿ ಫೀವರ್ ಕ್ಲಿನಿಕ್ ಆರಂಭಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ಎಪ್ರಿಲ್ 1 ರವರೆಗೆ ಜಿಲ್ಲಾ ಆಸ್ಪತ್ರೆಯಲ್ಲಿ 1684, ರಾಣೇಬೆನ್ನೂರು-561, ಬ್ಯಾಡಗಿ-939, ಹಿರೇಕೆರೂರು-859, ಹಾನಗಲ್-1330, ಸವಣೂರು-448 ಮತ್ತು ಶಿಗ್ಗಾಂವ ತಾಲೂಕು ಆಸ್ಪತ್ರೆಯಲ್ಲಿ 134 ಜನರಿಗೆ ಸ್ಕ್ರೀನಿಂಗ್ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.