ಸಾಂಸ್ಥಿಕ ಕ್ವಾರಂಟೈನ್ ವ್ಯಕ್ತಿಗಳ ನಿತ್ಯ ಮೂರು ಬಾರಿ ಆರೋಗ್ಯ ತಪಾಸಣೆಗೆ ಡಿಸಿ ಸೂಚನೆ

ಹಾವೇರಿ: ಮೇ 18 ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿ ಸಾಂಸ್ಥಿಕ ಕ್ವಾರಂಟೈನ್ನಲ್ಲಿ ನಿಗಾವಹಿಸಿರುವ ಪ್ರಯಾಣಿಕರನ್ನು ಪ್ರತಿನಿತ್ಯ ಮೂರುಬಾರಿ ಆರೋಗ್ಯ ತಪಾಸಣೆಗೆ ಒಳಪಡಿಸುವಂತೆ ವೈದ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಸೂಚನೆ ನೀಡಿದ್ದಾರೆ.

ಕ್ವಾರಂಟೈನ್ ಸೆಂಟರ್ನಲ್ಲಿರುವ ವ್ಯಕ್ತಿಗಳ ಮೇಲೆ ತೀವ್ರ ನಿಗಾವಹಿಸಬೇಕು. ದಿನದ 24 ತಾಸು ಆರೋಗ್ಯ ಸೇವೆ ದೊರಕಬೇಕು. ಅಗತ್ಯಬಿದ್ದರೆ ಅಂಬ್ಯುಲೆನ್ಸ್ ಸೇವೆ ಪಡೆಯಲು ಅನುಕೂಲವಾಗುವಂತೆ ಪ್ರತಿ ಕ್ವಾರಂಟೈನ್ ಸೆಂಟರ್ನಲ್ಲಿ ಕರ್ತವ್ಯ ನಿರತ ಪಾಳೆಯ ಪ್ರಕಾರ ವೈದ್ಯರ ಹೆಸರು, ಮೊಬೈಲ್ ಸಂಖ್ಯೆ ಹಾಗೂ ಅಂಬ್ಯುಲೆನ್ಸ್ ಚಾಲಕರ ಮೊಬೈಲ್ ಸಂಖ್ಯೆಯನ್ನು ಪ್ರದಶರ್ಿಸುವಂತೆ ಸೂಚನೆ ನೀಡಿದ್ದಾರೆ.

ಕ್ವಾರಂಟೈನ್ ಸೆಂಟರ್ನಲ್ಲಿ ಯಾವುದೇ ಕಾರಣಕ್ಕೂ ಔಷಧಿಗಳ ಕೊರತೆ ಉಂಟಾಗಬಾರದು. ಅಗತ್ಯ ಔಷಧಿಗಳನ್ನು ಆರೋಗ್ಯ ರಕ್ಷಾ ಸಮಿತಿಯಿಂದ ಭರಿಸಬೇಕು. ಪ್ರತಿನಿತ್ಯ ಉಪವಿಭಾಗಾಧಿಕಾರಿಗಳು ತಮ್ಮ ವ್ಯಾಪ್ತಿಯ ಕ್ವಾರಂಟೈನ್ ಸೆಂಟರ್ಗಳಿಗೆ ಭೇಟಿ ನೀಡಬೇಕು. ಇಲ್ಲಿನ ಆರೋಗ್ಯ ತಪಾಸಣೆಯ ಮಾಹಿತಿ ಕ್ವಾರಂಟೈನ್ ಸೆಂಟರ್ನ ಸ್ವಚ್ಛತೆ, ವಿದ್ಯುತ್ ಪೂರೈಕೆ, ಫ್ಯಾನ್ ವ್ಯವಸ್ಥೆ ಹಾಗೂ ಕ್ವಾರಂಟೈನ್ಗೆ ಒಳಗಾದವರಿಗೆ ನಿತ್ಯ ಪೂರೈಸುತ್ತಿರುವ ಆಹಾರ, ಕುಡಿಯುವ ನೀರು, ಕುರಿತಂತೆ ಪರಿಶೀಲನೆ ನಡೆಸಬೇಕು. ಯಾವುದೇ ವ್ಯತ್ಯಯವಾದರೂ ತಕ್ಷಣವೇ ಸರಿಪಡಿಸಲು ಅಗತ್ಯ ಕ್ರಮ ವಹಿಸುವಂತೆ ಸೂಚನೆ ನೀಡಿದ್ದಾರೆ.

ಕ್ವಾರಂಟೈನ್ ಸೆಂಟರ್ನಲ್ಲಿ ಉಳಿದುಕೊಂಡಿರುವ ತಮಿಳುನಾಡು ಹಾಗೂ ಮಹಾರಾಷ್ಟ್ರದ ನಾಗರಿಕರಿಗೆ ಆದ್ಯತೆ ಮೇಲೆ ಸ್ವಾಬ್ ತಪಾಸಣೆ ನಡೆಸಿ ವರದಿ ತರಿಸಿಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ. 

ಪೋಸ್ಟ್ ಅಂಟಿಸಿ: ಕ್ವಾರಂಟೈನ್ ಕುರಿತಂತೆ ತಹಶೀಲ್ದಾರಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಅವರು ಸಾಂಸ್ಥಿಕ ಕ್ವಾರಂಟೈನ್ನಲ್ಲಿರುವ  ಹೈರಿಸ್ಕ್ ಜನರ ಮೇಲೆ ಹೆಚ್ಚಿನ ಆರೋಗ್ಯ ನಿಗಾ ವಹಿಸಬೇಕು. 10 ವರ್ಷದೊಳಗಿನ ಮಕ್ಕಳು, 60 ವರ್ಷ ಮೇಲ್ಪಟ್ಟ ವೃದ್ಧರು, ಶಸ್ತ್ರ ಚಿಕಿತ್ಸೆಗೆ ಒಳಗಾದವರು. ಹೃದ್ರೋಗ, ಬಿಪಿ ಶುಗರ್, ಗಭರ್ಿಣಿಯರು ಒಳಗೊಂಡಂತೆ ತೀವ್ರ ಆರೋಗ್ಯದ ಸಮಸ್ಯೆ ಇರುವ ವ್ಯಕ್ತಿಗಳಿಗೆ ದಿನದ 24 ತಾಸು ನಿಗಾವಹಿಸಿ ಮೂರುಬಾರಿ ಖುದ್ದಾಗಿ ವೈದ್ಯರು ತಪಾಸಣೆ ನಡೆಸಿ ಎಂದು ಸೂಚನೆ ನೀಡಿದರು.

ಕ್ವಾರಂಟೈನ್ ಒಳಗಾದವರ ಸ್ವಾಬ್ ವರದಿ ನೆಗಟಿವ್ ಬಂದರೂ 14 ದಿನ ಅವಧಿವರೆಗೆ  ಕ್ವಾರಂಟೈನ್ನಲ್ಲಿರುವುದು ಕಡ್ಡಾಯ. ವೈದ್ಯರ ಕೊರತೆ ಇರುವುದಿಲ್ಲ. ಸ್ವಯಂ ಪ್ರೇರಣೆಯಿಂದ ಕಾರ್ಯನಿರ್ವಹಿಸಲು ಖಾಸಗಿ ವೈದ್ಯರು, ಆಯುವರ್ೇದ ವೈದ್ಯರು ಮುಂದೆ ಬಂದಿದ್ದಾರೆ. ಇವರನ್ನು ಬಳಸಿಕೊಳ್ಳಬೇಕು. ಕ್ವಾರಂಟೈನ್ ಕೇಂದ್ರಗಳಲ್ಲಿ ಇರುವ ವ್ಯಕ್ತಿಗಳಿಗೆ ತುತರ್ು ವೈದ್ಯಕೀಯ ಸೇವೆಗೆ ಅಂಬ್ಯುಲೆನ್ಸ್ ವೈದ್ಯರು ಸಕಾಲಕ್ಕೆ ದೊರೆಯುವಂತೆ ಅವರ ಮೊಬೈಲ್ ನಂಬರಗಳನ್ನು ಸೆಂಟರ್ಗಳಲ್ಲಿ ಪ್ರದಶರ್ಿಸಬೇಕು. 

 ಕರೆಮಾಡಿದ ಐದು ನಿಮಿಷದೊಳಗೆ ಕ್ವಾರಂಟೈನ್ ವ್ಯಕ್ತಿಗಳಿಗೆ ಅಂಬ್ಯುಲೆನ್ಸ್ ಸೇವೆ ಹಾಘೂ ವೈದ್ಯರ ಸೇವೆ ದೊರಕಬೇಕು. ತಕ್ಷಣವೇ ತಾಲೂಕಾ ಆಸ್ಪತ್ರೆ, ಅಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಜಿಲ್ಲಾ ಆಸ್ಪತ್ರೆ, ಗಂಭೀರವಾಗಿದ್ದರೆ ಹುಬ್ಬಳ್ಳಿ ಕಿಮ್ಸ್ಗೆ ಕರೆದೊಯ್ಯುವ ವ್ಯವಸ್ಥೆ ಮಾಡಬೇಕು. ಈ ಕುರಿತಂತೆ ತಹಶೀಲ್ದಾರ ಹಾಗೂ ಉಪವಿಭಾಗಾಧಿಕಾರಿಳಿಗೆ ಸೂಚನೆ ನೀಡಿದರು.

ವಲಸೆ ಕಾಮರ್ಿಕರು ಸಾರಿಗೆ ವ್ಯವಸ್ಥೆ ಇಲ್ಲದೆ ರಸ್ತೆ, ರೈಲು ಹಳಿಗಳ ಮೇಲೆ ನಡೆದು ಹೋಗಬಾರದು. ಇವರನ್ನು ತಕ್ಷಣವೇ ಕ್ವಾರಂಟೈನ್ಗೆ ಒಳಪಡಿಸಬೇಕು. ಪ್ರಯಾಣ ವೆಚ್ಚ ಭರಿಸಿ ಸ್ವಂತ ಊರಿಗೆ ಹೋಗಲು ಇಚ್ಛಿಸಿದಲ್ಲಿ ಸೇವಾ ಸಿಂಧುವಿನಲ್ಲಿ ನೊಂದಣಿಮಾಡಿ ತಮ್ಮ ತಮ್ಮ ಊರಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಬೇಕು. ಈ ವ್ಯಕ್ತಿಗಳು ಕ್ವಾರಂಟೈನ್ಗೆ ಒಳಪಡಲು ವಿರೋಧ ವ್ಯಕ್ತಪಡಿಸಿದರೆ ಕೋವಿಡ್ -19 ಆ್ಯಕ್ಟ ಪ್ರಕಾರ ದೂರು ದಾಖಲಿಸಿ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು. 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ರಮೇಶ ದೇಸಾಯಿ ಅವರು ಮಾತನಾಡಿ, ಜಿಲ್ಲೆಗೆ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯಿಂದ ಆಗಮಿಸಿದವರು ಈ ಪೈಕಿ ಗೃಹ ಪ್ರತ್ಯೇಕತೆ ಮತ್ತು ಸಾಂಸ್ಥಿಕ ಪ್ರತ್ಯೇಕತೆಯಲ್ಲಿ ಉಳಿದವರು 14 ದಿನ ಕ್ವಾರಂಟೈನ್ ಮುಗಿಸಿ ಬಿಡಗಡೆಯಾದವರು ಮತ್ತು ಯಾವ ಜಿಲ್ಲೆ, ರಾಜ್ಯದಿಂದ ಬಂದಿದ್ದಾರೆ ಎನ್ನುವ ಪರಿಷ್ಕೃತ ಮಾಹಿತಿಯನ್ನು ಒದಗಿಸುವಂತೆ ಸೂಚನೆ ನೀಡಿದರು. ಹಾಗೂ ಹಾನಗಲ್ ತಾಲೂಕಿನಲ್ಲಿ ವೈದ್ಯಾಧಿಕಾರಿಗಳ ಉಪಸ್ಥಿತಿಯಲ್ಲಿ ಮನೆ ಮನೆ ಆರೋಗ್ಯ ತಪಾಸಣೆಯನ್ನು ಆರಂಭಿಸುವಂತೆ ಸೂಚನೆ ನೀಡಿದರು.

ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ,  ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾಜರ್ುನ ಬಾಲದಂಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಮನಿ, ಸಮಾಜ ಕಲ್ಯಾಣ ಇಲಾಖೆ ಉಪನಿದರ್ೆಶಕಿ ಶ್ರೀಮತಿ ಚೈತ್ರಾ, ಹಾವೇರಿ ತಹಶೀಲ್ದಾರ ಶಂಕರ್, ರಾಣೇಬೆನ್ನೂರು ತಹಶೀಲ್ದಾರ ಬಸವನಗೌಡ ಕೋಟೂರ,  ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಮಖಾನೆ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ವೀರೇಂದ್ರ ಕುಂದಗೋಳ, ಪಶು ಸಂಗೋಪನಾ ಇಲಾಖೆ ಉಪನಿದರ್ೆಶಕ  ಸುಧಾಕರ,  ತೋಟಗಾರಿಕೆ ಇಲಾಖೆ ಉಪನಿದರ್ೆಶಕ ಡಾ.ಪ್ರದೀಪ, ಕೃಷಿ ಇಲಾಖೆ ಜಂಟಿ ನಿದರ್ೆಶಕ ಮಂಜುನಾಥ್,  ಕಾಮರ್ಿಕ ಇಲಾಖೆ ಅಧಿಕಾರಿ ಶ್ರೀಮತಿ ಲಲಿತಾ ಸಾತೇನಹಳ್ಳಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಲಕ್ಷ್ಮೀಕಾಂತ,  ವಾಯವ್ಯ ರಸ್ತೆ ಸಾರಿಗೆ  ಡಿಟಿಓ ಮುಜಂದಾರ,  ಲೋಕೋಪಯೋಗಿ, ಪಂಚಾಯತ್ ರಾಜ್ ಹಾಗೂ ಹೆಸ್ಕಾಂ ಅಭಿಯಂತರರು ಉಪಸ್ಥಿತರಿದ್ದರು.