ಜಾಗರೇಬ್, ಮಾ.7, ಮೊದಲ ಸೆಟ್ ನಲ್ಲಿ ಭಾರತದ ಸ್ಟಾರ್ ಆಟಗಾರ ಪ್ರಜ್ನೇಶ್ ಗುಣೇಶ್ವರನ್ ಅವರು ಕ್ರೊಯೇಷಿಯಾದ ಬೊರ್ನಾ ಗೊಜೊ ವಿರುದ್ಧ ಶುಕ್ರವಾರ ಸೋತು, ಡೇವಿಸ್ ಕಪ್ ವರ್ಲ್ಡ್ ಗ್ರೂಪ್ ಕ್ವಾಲಿಫೈಯರ್ ಪಂದ್ಯದಲ್ಲಿ ಭಾರತ 0–1ರಲ್ಲಿ ಹಿನ್ನಡೆ ಕಂಡಿದೆ.ಗುಣೇಶ್ವರನ್ ಒಂದು ಗಂಟೆ 57 ನಿಮಿಷಗಳಲ್ಲಿ 6-4, 4-6, 2-6ರಿಂದ ಪಂದ್ಯವನ್ನು ಕಳೆದುಕೊಂಡರು. 132 ನೇ ಶ್ರೇಯಾಂಕದ ಗುಣೇಶ್ವರನ್ ಮೊದಲ ಸೆಟ್ ಅನ್ನು ಸುಲಭವಾಗಿ ಗೆದ್ದರು, ಆದರೆ ವಿಶ್ವ ರಾಂಕಿಂಗ್ನಲ್ಲಿ 277 ನೇ ಸ್ಥಾನದಲ್ಲಿರುವ ಗೊಜೊ ಮುಂದಿನ ಎರಡು ಸೆಟ್ಗಳನ್ನು ಗೆಲ್ಲುವ ಮೂಲಕ ಕ್ರೊಯೇಷಿಯಾ ಪರ ಸೊಗಸಾದ ಆಟವಾಡಿ ಗಮನ ಸೆಳೆದರು. ಗೊಜೊ ಈ ಪಂದ್ಯದಲ್ಲಿ ಗುಣೇಶ್ವರನ್ ಅವರ ಸರ್ವ್ ಅನ್ನು ನಾಲ್ಕು ಬಾರಿ ಮುರಿದರು. ಡೇವಿಸ್ ಕಪ್ನಲ್ಲಿ ಗೊಜೊ ದಾಖಲಿಸಿದ ಮೊದಲ ಗೆಲುವು ಇದಾಗಿದೆ.ಎರಡನೇ ಸಿಂಗಲ್ಸ್ ಪಂದ್ಯದಲ್ಲಿ, 182 ನೇ ಶ್ರೇಯಾಂಕಿತ ರಾಮ್ಕುಮಾರ್ ರಾಮನಾಥನ್ 7-6 (8), 7-6 (8) ರಿಂದ 2014 ರ ಯುಎಸ್ ಚಾಂಪಿಯನ್ ಮರಿನ್ ಸಿಲಿಕ್ ವಿರುದ್ಧ ಸೋಲು ಕಂಡರು. ಒಂದು ಗಂಟೆ 12 ನಿಮಿಷ ನಡೆದ ಕಾದಾಟದಲ್ಲಿ ರಾಮಕುಮಾರ್ ಸೋಲು ಕಂಡರು.