ಬಾಗಲಕೋಟೆ: ಸಿಂಡಿಕೇಟ್ ಬ್ಯಾಂಕಿನ ಕ್ಷೇತ್ರೀಯ ಕಾಯರ್ಾಲಯ ಮತ್ತು ಜಿಲ್ಲಾ ಅಗ್ರಣೀಯ ಬ್ಯಾಂಕ್ ಸಹಯೋಗದಲ್ಲಿ ನಗರದ ಬಿವಿವಿ ಸಂಘದ ಆವರಣದಲ್ಲಿ ಅ. 21 ಮತ್ತು 22 ರಂದು ಗ್ರಾಹಕರ ತಲುಪುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಿಂಡಿಕೇಟ್ ಬ್ಯಾಂಕಿನ ಜಿಲ್ಲಾ ಪ್ರಾದೇಶಿಕ ವ್ಯವಸ್ಥಾಪಕ ವೈ. ಸತೀಶಬಾಬು ಹೇಳಿದರು.
ವಿದ್ಯಾಗಿರಿಯಲ್ಲಿರುವ ಬಿವಿವಿ ಸಂಘದ ಕೋಟೆಕ್ ಮಹೇಂದ್ರ ಆರ್ಸೆಟ್ ಸಂಸ್ಥೆಯ ಸಭಾಭವನದಲ್ಲಿಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಬ್ಯಾಂಕ್ ಗ್ರಾಹಕರಿಗೆ ಮಾಹಿತಿ ಹಾಗೂ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಈ ಕಾರ್ಯಕ್ರಮದಲ್ಲಿ 31 ವಿವಿಧ ಬ್ಯಾಂಕ್ಗಳು ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ವಿವಿಧ ಬ್ಯಾಂಕ್ ಮತ್ತು ಸರಕಾರದ ಕೆಲವು ಇಲಾಖೆಗಳು ಸೇರಿ ಒಟ್ಟು 30 ಪ್ರದರ್ಶನ ಮಳಿಗೆಗಳನ್ನು ಸಹ ಹಾಕಲಾಗುತ್ತಿದೆ. ಈ ಪ್ರದರ್ಶನ ಮಳಿಗೆಯಲ್ಲಿ ಬ್ಯಾಂಕ್ಗೆ ಸಂಬಂಧಿಸಿದ ವಿವಿಧ ಸೌಲಭ್ಯಗಳ ಮಾಹಿತಿ ಪಡೆಯಬಹುದಾಗಿದೆ. ಇದರ ಜೊತೆಗೆ ಕೃಷಿ, ಆರ್.ಸೆಟ್, ಕೆಎಫ್ಆರ್ಸಿ ವತಿಯಿಂದ ಪ್ರದರ್ಶನ ಮಳಿಗೆ ಹಾಕಲಾಗುತ್ತಿದೆ. ಆಧಾರ ಸೆಂಟರ್ ಸ್ಟಾಲ್, ತಮ್ಮ ಗ್ರಾಮ, ಪಟ್ಟಣ ಹಾಗೂ ನಗರದಲ್ಲಿರುವ ಆಯಾ ಬ್ಯಾಂಕ್ಗಳಲ್ಲಿ ಹೊಸದಾಗಿ ಖಾತೆ ತೆರೆಯಲು ಅಜರ್ಿಗಳನ್ನು ಪಡೆಯಲಾಗುತ್ತಿದೆ ಎಂದು ತಿಳಿಸಿದರು.
ಗ್ರಾಹಕರ ತಲುಪುವ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸಾಲಕ್ಕೆ ಅಜರ್ಿಗಳನ್ನು ಸಹ ಕೊಡಬಹುದಾಗಿದೆ. ಕೆಲವೊಂದು ಸಾಲದ ಅಜರ್ಿಗಳಿಗೆ ಸ್ಥಳದಲ್ಲಿಯೇ ಮಂಜೂರಾತಿ ನೀಡಲಾಗುತ್ತದೆ ಎಂದು ತಿಳಿಸಿದರು.
ಆದ್ದರಿಂದ ಸಾರ್ವಜನಿಕರು ಸದರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು. ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ನ ಪ್ರಾದೇಶಿಕ ವ್ಯವಸ್ಥಾಪಕ ಕೆ.ಶಂಕರರಾವ, ಕಾಪರ್ೋರೇಶನ್ ಬ್ಯಾಂಕಿನ ಸಹಾಯಕ ಮಹಾಪ್ರಬಂಧಕ ಮಹಾಲಿಂಗಪ್ಪ, ಜಿಲ್ಲಾ ಅಗ್ರಣೀಯ ಬ್ಯಾಂಕ್ನ ವ್ಯವಸ್ಥಾಪಕ ಗೋಪಾಲರೆಡ್ಡಿ ಉಪಸ್ಥಿತರಿದ್ದರು.