ಅಲ್ಜೀರಿಯಾ ರಾಜಧಾನಿಯಲ್ಲಿ ಕರ್ಫ್ಯೂ

ಮಾಸ್ಕೋ, ಮಾರ್ಚ್ 24 ,ಅಲ್ಜೇರಿಯಾದಲ್ಲಿ ಎಲ್ಲಾ ಕೆಫೆ ಮತ್ತು ರೆಸ್ಟೋರೆಂಟ್ ಗಳನ್ನು ಮುಚ್ಚುವಂತೆ ಅಲ್ಲಿನ ಆಡಳಿತ ಆದೇಶ ನೀಡಿದೆ. ರಾಜಧಾನಿಯಲ್ಲಿ ಕೊವಿಡ್ 19 ಹಿನ್ನೆಲೆಯಲ್ಲಿ ಕರ್ಫ್ಯೂ ವಿಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಪರಮೋಚ್ಛ ಭದ್ರತಾ ಮಂಡಳಿ ಸಭೆಯ ನಂತರ ಕೊರೊನಾ ವೈರಾಣು ನಿಗ್ರಹ ಸಂಬಂಧ ಹೊಸ ನಿರ್ಬಂಧಗಳನ್ನು ವಿಧಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ ಮಾರ್ಚ್ 11 ರಂದು ಕೊರೊನಾ ವೈರಾಣು ಸೋಂಕು ಸಾಂಕ್ರಾಮಿಕ ಎಂದು ಘೋಷಿಸಿತ್ತು. ಇತ್ತೀಚಿನ ಮಾಹಿತಿ ಪ್ರಕಾರ ಜಗತ್ತಿನಾದ್ಯಂತ 3,78,000 ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಸುಮಾರು 16 ಸಾವಿರ ಜನ  ಈ ಸೋಂಕಿಗೆ ಬಲಿಯಾಗಿದ್ದಾರೆ.