ಡಾ. ಅಲ್ಲಮಪ್ರಭು ಅಭಿಮತ | ಭವಿಷ್ಯದ ಜವಾಬ್ದಾರಿಗೆ ಪಿಯು ಅಂತಿಮ ಘಟ್ಟ ಕಲಿಕೆ ಜೊತೆಯಲ್ಲಿ ಸಂಸ್ಕೃತಿ ಅಗತ್ಯ

 ಬೆಳಗಾವಿ: ಜ್ಞಾನ ವೃದ್ಧಿಗಾಗಿ ವಿದ್ಯಾಥರ್ಿಗಳು ಕಲಿಕೆಯಲ್ಲಿ ಸತತವಾಗಿ ಶ್ರಮಿಸಬೇಕಾಗಿದೆ. ಮಕ್ಕಳು ಮೊಬೈಲ್ ಮಗ್ನರಾಗಿ ಇರುವ ಜ್ಞಾನವನ್ನು ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಪಾಲಕರು ಹೊಣೆಗಾರರು, ಕಲಿಕೆ ಜತೆಯಲ್ಲಿ ಸಂಸ್ಕೃತಿ ಅಗತ್ಯವಿದೆ ಪ್ಯಾಷನ್ ಲೋಕಕ್ಕೆ ಅಂಟಿಕೊಂಡು ತಮ್ಮ ಅಮೂಲ್ಯವಾದ ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ನಾಗನೂರು ಶ್ರೀ ರುದ್ರಾಕ್ಷಿಮಠದ ಪರಮಪೂಜ್ಯಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಹೇಳಿದರು.

ಇಲ್ಲಿನ ಶಿವಬಸವ ನಗರದ ಶ್ರೀ ಸಿದ್ಧರಾಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಭುದೇವ ಸಭಾಂಗಣದಲ್ಲಿ ಗುರುವಾರ 30 ರಂದು ಆಯೋಜಿಸಿದ ವಾಷರ್ಿಕೋತ್ಸವ ಹಾಗೂ ಬಹುಮಾನ ವಿತರಣಾ ದಿವ್ಯ ಸಾನಿದ್ಯ ವಹಿಸಿ ಅವರು ಮಾತನಾಡಿ, 

ದೃಢ ಮನಸ್ಸಿನಿಂದ ಅಧ್ಯಯನ ಮಾಡಿ ಬದುಕನ್ನು ರೂಪಿಸಿಕೊಳ್ಳಬೇಕು. ವಿದ್ಯಾಥರ್ಿಗಳ ಯಶ್ವಸಿಗೆ ಪಿಯು ಅಂತಿಮ ಘಟವಾಗಿದ್ದು  ಭವಿಷ್ಯದ ಜವಾಬ್ದಾರಿಗೆ ಈ ತಿರುವು ಬಲು ರೋಚಕ ಎಂದರು. 

ಸರಕು ಮತ್ತು ಸೇವಾ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಚಂದ್ರಕಾಂತ ಲೋಕರೆ ಮಾತನಾಡಿ, ಗ್ರಾಮೀಣ ಗ್ರಾಮೀಣ ಪ್ರದೇಶದ ವಿದ್ಯಾಥರ್ಿಗಳು ಕೀಳುಮಟ್ಟದವರೆಂಬ ಭ್ರಮೆಯಿಂದ ಹೊರಬಂದು, ಕಾಲೇಜಿನಲ್ಲಿ ನಡೆಯುವ ಪಾಠ_ಪ್ರವಚನಗಳಿಗೆ ಮೈಗೂಡಿಸಿಕೊಂಡು. ಶಿಕ್ಷಣದೆಡೆಗೆ ಸಾಗಬೇಕು ಮನೆಯನ್ನು ಗ್ರಂಥಾಲಯ ಮಾಡಿಕೊಂಡು ಓದಿನಲ್ಲಿ ಮಗ್ನರಾದರೇ ಶಿಕ್ಷಣ, ಯಶಸ್ವಿಗೆ  ಅರ್ಹತೆ ಪಡೆದಕೊಳ್ಳುವಲ್ಲಿ ಸಂಶಯವಿಲ್ಲ, ಇವುಗಳಿಂದ ಉನ್ನತ ಹುದ್ದೆ ಗಿಟ್ಟಸಿಕೊಳ್ಳಲು ಸ್ಪೂತರ್ಿ ಎಂದರು.

  ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ.ಎಮ್.ಆರ್. ಉಳ್ಳೇಗಡ್ಡಿ, ಪ್ರಾಚಾರ್ಯ ಎ. ಕೆ. ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾಡನಾಡಿದರು.  ಉಪನ್ಯಾಸಕರಾದ ಶಶಿಕಲಾ ಹುಬ್ಬಳ್ಳಿಯವರು ವರದಿ ವಾಚಿಸಿದರು.

ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದಶರ್ಿ ಪ್ರೊ. ಬಿ. ಎಫ್. ಕಲ್ಲಣ್ಣವರ, ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಪ್ರೊ. ಬಿ. ಎಮ್. ಬೆಳಗಲಿ, ಆರ್. ಬಿ. ಪಾಟೀಲ, ಆರ್. ಎಸ್. ಚಾಪಗಾವಿ, ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ನಾಗಮನಿ ಹೂಲಿಯವರು ನಿರೂಪಿಸಿದರು. ಆಕಾಶ ಢವಳೆ ವಂದಿಸಿದರು.