ಲೋಕದರ್ಶನ
ವರದಿ
ಮುಧೋಳ 19:
ಅಳಿಸಿ ಹೋಗುವ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಡಿ ವರ್ಷದಲ್ಲಿ ಆಚರಣೆಯಾಗುವ
ಎಲ್ಲ ಹಬ್ಬಗಳನ್ನು ಒಂದೇ ವೇದಿಕೆಯಲ್ಲಿ ಆಚರಣೆ
ಮಾಡುವ ಸಂಸ್ಕೃತಿ-ಸಂಭ್ರಮ ಕಾರ್ಯಕ್ರಮ-2018 ಅಕ್ಟೋಬರ 21ರಂದು ನಗರದ ದಾನಮ್ಮದೇವಿ ದೇವಾಲಯದ ವೀರಶೈವ ಕಲ್ಯಾಣದಲ್ಲಿ ಜರುಗುವದು ಎಂದು ಸಪ್ತಸ್ವರ ಸಂಗೀತ,
ನೃತ್ಯ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಜ್ಯೋತಿ ಪಾಟೀಲ ಹೇಳಿದರು.
ಕಾನಿಪ ಕಾಯರ್ಾಲಯದಲ್ಲಿ ಸಂಸ್ಕೃತಿ ಸಂಭ್ರಮ ಕಾರ್ಯಕ್ರಮದ ಪ್ರಚಾರ ಸಾಮಾಗ್ರಿ ಬಿಡುಗಡೆ ಮಾಡಿ ಮಾತನಾಡಿದರು ಈ
ಕಾರ್ಯಕ್ರಮದಲ್ಲಿ ಮುಧೋಳ ನಗರ ಹಾಗೂ ಸುತ್ತಮುತ್ತಲಿನ
ಗ್ರಾಮೀಣ ಪ್ರದೇಶದಿಂದ ಒಟ್ಟು 19 ಸಮುದಾಯದ ಎಲ್ಲ ದೇವರ ಪೂಜೆಯೊಂದಿಗೆ
ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ ಶ್ರಾವಣ,
ಗುಳ್ಳವ್ವ, ಗಣೇಶ ಚತುಥರ್ಿ, ರಕ್ಷಾ
ಬಂದನ,ಸರಸ್ವತಿ ಪೂಜೆ,ನಾಗರ ಪಂಚಮಿ
ಆಚರಣೆ, ಶುಕ್ರಗೌರಿ ಪೂಜೆ, ಗೌರವ್ವ, ಶಿಗವ್ವ ಆಚರಣೆ, ನವರಾತ್ರಿ, ಆಯುದ ಪೂಜೆ, ವಿಜಯದಶಮಿ,
ದೀಪಾವಳಿ, ಬಲಿಪಾಡ್ಯ, ಯುಗಾದಿ, ಸಂಕ್ರಾಂತಿ ಹೀಗೆ ವರ್ಷದಲ್ಲಿ ಬರುವ
ಎಲ್ಲ ಸಂಪ್ರದಾಯಗಳ ಆಚರಣೆಗಳನ್ನು ಒಂದೇ ವೇದಿಕೆಯಲ್ಲಿ ಎಲ್ಲ
ಸಮುದಾಯದ ಮಹಿಳೆಯರಿಂದ ಆಚರಣೆ ಮಾಡುವದಲ್ಲದೆ, ಗ್ರಾಮೀಣ ಕ್ರೀಡಗಳಾದ ಜೋಕಾಲಿ, ಬುಗುರಿ, ಕೊಬ್ಬರಿ ಚಕ್ರ,ಸಕ್ಕ ಸರಗಿ
ಸೇರಿದಂತೆ ಇತರ ಗ್ರಾಮೀಣ ಆಟಗಳು,ಹಾಗೂ ಗೀಗಿ ಪದ,
ಶೋಭಾನೆ ಪದ, ಜೋಗುಳ ಪದ,ಚೌಡಕಿ ಪದ, ಹಂತಿ ಪದ,
ಕರ್ಬಲ್ ಸೇರಿದಂತೆ ವಿವಿದ ಗ್ರಾಮೀಣ ಜಾನಪದ ಕಳೆಗಳ ಪ್ರದರ್ಶನ ನಡೆಯುತ್ತಿದೆ ಎಂದು ಹೇಳಿದರು
ಭಾರತಿ ಕತ್ತಿ ಮಾತನಾಡಿ ಈ ಕಾರ್ಯಕ್ರಮಕ್ಕೆ ಆಶಾ
ಎಂ.ಪಾಟೀಲ ವಿಜಯಪುರ, ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಚಂದನ ಟಿವಿಯ ನಿರ್ಮಲಾ
ಎಲಿಗಾರ, ಉಮರ್ಿಳಾ ಕಳಸದ, ಚಿತ್ರನಟಿ ಮಾಳವಿಕಾ, ದ್ರಾಕ್ಷಾಯಣಿ ನಿರಾಣಿ, ಶಾಂತಾಬಾಯಿ, ಕಾರಜೋಳ ಶಶಿಕಾಲ ಹುಡೇದ, ಶಶಕಲಾ ತಿಮ್ಮಪೂರ, ವೀಣಾ ಕಾಶಪ್ಪನವರ ಗಂಗೂಬಾಯಿ
ಮಾನಕರ, ಸೇರಿದಂತೆ ನಾಡಿನ ವಿವಿಧ ಗಣ್ಯರು
ಆಗಮಿಸುವರು.
ಸಂಸ್ಥೆಯ ನಿದರ್ೇಶಕಿ ನಿರ್ಮಲಾ ಮಲಘಾಣ ಮಾತನಾಡಿ ಗ್ರಾಮೀಣ ಪ್ರದೇಶದ ಕುಟ್ಟುವ, ಬೀಸುವ, ಜೋಗುಳು ಹಾಡುವ ಪದ್ಧತಿಯಲ್ಲಿ,ಉತ್ತರ ಕನರ್ಾಟಕದ ದೇಶಿ ಉಡುಗೆಯಲ್ಲಿ ಬರುವ
ಮಹಿಳೆರಿಗೆ ಮಾತ್ರವಾಗಿದ್ದು ನಮ್ಮ ಉದ್ದೇಶ ನಗರದಲ್ಲಿ
ಕ್ರಮೇಣವಾಗಿ ನಸಿಸಿ ಹೋಗುವ ಸಂಪ್ರದಾಯ ಪದ್ದತಿ ಆಚರಣೆಗಳನ್ನು ಉಳಿಸಿ ಬೆಳೆಸುವದಾಗಿದೆ ಈ ನಿಟ್ಟಿನಲ್ಲಿ ಹೆಚ್ಚಿನ
ಪ್ರಮಾಣದಲ್ಲಿ ಗ್ರಾಮದ ಸುತ್ತಮುತ್ತಲಿನ ಮಹಿಳೆಯರು ಇಲಕಲ್ ಸೀರೆಯ ಉಡುಗೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಬೇಕು ಮತ್ತು ಸಹಕಾರ ನೀಡಬೇಕು ಇದಕ್ಕೂ ಮುಂಚೆ ರನ್ನ ಸರ್ಕಲ್ ದಿಂಧ
ದಾನಮ್ಮದೇವಿ ದೇವಾಲಯದವರೆಗೆ ಮಹಿಳೆಯರ ಕುಂಭಾರತಿ ಮೆರವಣಿಗೆ ನಡೆಯುವದು ಎಂದು ಹೇಳಿದರು. ಪತ್ರಿಕಾ
ಗೋಷ್ಠಿಯಲ್ಲಿ ಸಪ್ತಸ್ವರ ಸಂಗೀತ, ನೃತ್ಯ ಸಂಸ್ಥೆಯ ಭಾರತಿ ಮಲಘಾಣ, ಶ್ರೀದೇವಿ ಅಂಗಡಿ, ಸವಿತಾ ಅಂಗಡಿ, ಭಾರತಿ ಕತ್ತಿ ಇದ್ದರು.