ಲೋಕದರ್ಶನ ವರದಿ
ತಾಳಿಕೋಟೆ 13:ಧರ್ಮದ ಭಾವೈಕ್ಯತೆ ಎಂಬುದು ಸುಕ್ಷೇತ್ರವಾದ ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಮಠದಲ್ಲಿ ಹಾಗೂ ಗುಂಡಕನಾಳ ಹಿರೇಮಠದಲ್ಲಿ ಅಲ್ಲದೇ ಮೂಕೀಹಾಳ ಗ್ರಾಮದ ಲಾಡ್ಲೇಮಶಾಕ ದಗರ್ಾದಲ್ಲಿ ಈ ಹಿಂದಿನಿಂದಲೂ ಕಂಡುಬರುತ್ತಲಿದೆ ಎಂದು ಗುಂಡಕನಾಳ ಸಂಸ್ಥಾನ ಬೃಹನ್ ಮಠದ ಪೂಜ್ಯ ಶ್ರೀ ಗುರುಲಿಂಗ ಶಿವಾಚಾರ್ಯರು ನುಡಿದರು. ಶನಿವಾರರಂದು ಸಮಿಪದ ಮೂಕೀಹಾಳ ಗ್ರಾಮದಲ್ಲಿ ಹಜರತ್ ಲಾಡ್ಲೇಮಶಾಕ ದಗರ್ಾ ಜಾತ್ರೋತ್ಸವ ಅಂಗವಾಗಿ 3 ನೇ ದಿನದಂದು ಜರುಗಿದ ತಾಲೂಕಾ ಮಟ್ಟದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯವಹಿಸಿ ಮಾತನಾಡುತ್ತಿದ್ದ ಶ್ರೀಗಳು ದೇಶದಲ್ಲಿ ವಿವಿಧ ನದಿಗಳು ವಿವಿಧ ಹೆಸರಿನಿಂದ ಹರಿಯುತ್ತಾ ಕೊನೆಗೆ ಒಗ್ಗೂಡಿ ಸಮುದ್ರವನ್ನು ಹೇಗೆ ಕೂಡುತ್ತವೆಯೋ ಅದೇ ರೀತಿ ಮೂಕೀಹಾಳ ಗ್ರಾಮದ ದಗರ್ಾದ ಜಾತ್ರೋತ್ಸವದಲ್ಲಿ ವಿವಿಧ ಜಾತಿ ಜನಾಂಗದವರು ಪಾಲ್ಗೊಂಡು ಒಂದು ಗೂಡುತ್ತಾ ಸಾಗಿರುವದು ಸಂತಸ ತಂದಿದೆ ಎಂದರು. ಧರ್ಮವೆಂಬುದು ಸೂಜಿಯಂತೆ ಹೊಲಿದು ಒಂದು ಗೂಡಿಸುವ ಕಾರ್ಯ ಮಾಡುತ್ತದೆ ಆದರೆ ಜಾತಿ ಜಾತಿ ಎನ್ನುವ ವ್ಯವಸ್ಥೆ ಕತ್ತರಿಯಂತೆ ಕತ್ತರಿಸುವ ಕಾರ್ಯ ಮಾಡುತ್ತದೆ ಕಾರಣ ಎಲ್ಲರೂ ಧರ್ಮದ ಹಾದಿಯಲ್ಲಿ ನಡೆಯಬೇಕೆಂದರು. ಪರೋಪಕಾರ ಮಾಡುತ್ತಾ ಸಾಗಬೇಕು ಅಂತಹ ಪರೋಪಕಾರ ಮಾಡುವಂತಹ ಕಾರ್ಯ ಲಾಡ್ಲೇಮಶಾಕ ಜಾತ್ರೋತ್ಸವದಲ್ಲಿ ನಡೆಯುತ್ತದೆ ಎಂದರು. ಲಾಡ್ಲೇಮಶಾಕ ಶರಣರು ಪರೋಪಕಾರದ ಕೆಲಸ ಮಾಡಿದವರಾಗಿದ್ದಾರೆ ಅವರ ಹೆಸರೂ ಇನ್ನೂ ಉಳಿದರೂ ಅವರು ಮಾಡಿದ ತಪಸ್ಸು ಶಕ್ತಿ ಎಂಬುದು ಇನ್ನೂ ಭಕ್ತರಿಗೆ ಉದ್ದರಿಸುತ್ತಾ ಸಾಗಿದೆ ಎಂದು ಹೇಳಿದ ಶ್ರೀಗಳು ಪಾಲಕರಾದವರು ಮಕ್ಕಳ ಬೆಳವಣಿಗೆ ಕುರಿತು ಲಕ್ಷವಹಿಸಬೇಕು ಅವರ ಶಿಕ್ಷಣ ವಿದ್ಯಾಭ್ಯಾಸ ಕುರಿತು ಲಕ್ಷವಹಿಸಬೇಕು ಹಾಗೆಯೇ ಪ್ರತಿಯೊಂದು ಮನೆಯ ಮುಂದೆ ಗಿಡಮರಗಳನ್ನು ಬೆಳೆಸುವ ಕಾರ್ಯ ಮಾಡಬೇಕು ರೈರರಾದವರು ಸಕರ್ಾರಕ್ಕೆ ಸಾಲ ಕೊಡುವಂತಹ ಕಾರ್ಯ ಮಾಡಬೇಕು ಆದರೆ ಸಕರ್ಾರದಿಂದ ಸಾಲ ಅಪೇಕ್ಷೆಸುವದು ಬೇಡಾ ಎಂದ ಶ್ರೀಗಳು ಭಾರತ ದಏಶದಲ್ಲಿ ಒಳ್ಳೆಯ ಸಂಸ್ಕಾರವಿದೆ ಇದರಿಂದ ಎಲ್ಲ ವಿದೇಶಿಗರು ಭಾರತ ದೇಶಕ್ಕೆ ಗೌರವಿಸುತ್ತಾ ಸಾಗಿದ್ದಾರೆಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮುದ್ದೇಬಿಹಾಳ ತಾಲೂಕಾ ತಹಶಿಲ್ದಾರ ಎಂ.ಎಸ್.ಭಾಗವಾನ ಮಾತನಾಡಿ ಮೂಕೀಹಾಳ ಗ್ರಾಮ ಭಾವೈಕ್ಯತೆ ಸಂಕೇತವಾಗಿದೆ ಪ್ರತಿವರ್ಷ ಈ ಗ್ರಾಮದಲ್ಲಿ ಸಾಮಾಜಿಕ ಕಳಕಳಿಯೊಂದಿಗೆ ಶಿಕ್ಷಣದಲ್ಲಿ ಅಭಿವೃದ್ದಿ ಎಂಬುದು ಇಲ್ಲಿ ಹೆಚ್ಚು ಒತ್ತುಕೊಟ್ಟು ನಡೆಸಲಾಗುತ್ತದೆ ಸಂತರ ದಾರ್ಶನಿಕರ ಪ್ರವಚನಗಳು ಭಾಷಣಗಳು ಅಲ್ಲದೇ ವಿಚಾರದಾರೆಗಳು ಈ ಲಾಡ್ಲೇಮಶಾಸಕ ಜಾತ್ರಾ ಉತ್ಸವದ ವೇದಿಕೆಯ ಮೇಲೆ ಪ್ರತಿವರ್ಷ ನಡೆಯುತ್ತಾ ಸಾಗಿವೆ ಇದರಿಂದ ನೈತಿಕತೆ ಸಮಾಜ ನಿಮರ್ಾಣಕ್ಕೆ ಅನುಕೂಲವಾಗುತ್ತಾ ಸಾಗಿದೆ ಈ ಮೂಕೀಹಾಳ ದಗರ್ಾ ಕಮಿಟಿಯ ಅಧ್ಯಕ್ಷ ಕೆ.ಎಚ್.ಪಾಟೀಲ ಅವರ ಸೇವಾ ಕಾರ್ಯವೂ ಮೆಚ್ಚುವಂತಹದ್ದಾಗಿದೆ ಎಂದು ದಗರ್ಾ ಕಮಿಟಿಯ ಸದಸ್ಯರ ಕುರಿತು ಹಾಗೂ ಗ್ರಾಮದ ಗಣ್ಯರು ಹಾಗೂ ಸುತ್ತಮುತ್ತಲಿನ ಭಕ್ತ ಸಮೂಹದವರ ಕಾರ್ಯವೈಖರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಸಾಪ ವಲಯ ಅಧ್ಯಕ್ಷೆ ಸುಮಂಗಲಾ ಕೊಳೂರ ಮಾತನಾಡಿ ತುತ್ತಿನ ಚೀಲ ತುಂಬಲಿಲ್ಲಾವಣ್ಣಾ, ಈ ಭೂಮಿಗೆ ಬಂದು ತುತ್ತಿನ ಚೀಲ ತುಂಬಲಿಲ್ಲಾವಣ್ಣಾ ಎಂಬ ಅರಿತು ಬಾಳುವಂತಹ ಹಾಡನ್ನು ಹಾಡಿ ನೆರದ ಭಕ್ತಸಮೂಹಕ್ಕೆ ಅಥರ್ೈಸಿದರಲ್ಲದೇ ಧಾಮರ್ಿಕ ಚಿಂತನೆ ಕಾರ್ಯ ಮೂಕೀಹಾಳ ಗ್ರಾಮದಲ್ಲಿ ನಡೆಯುತ್ತಿರುವದು ಹಷರ್ೋದಾಯಕ ಸಂಗತಿಯಾಗಿದೆ ಎಂದರು.
ಅತಿಥಿ ಜಿಲ್ಲಾ ಅರಣ್ಯ ಅಧಿಕಾರಿಗಳಾದ ಸರಿನಾ ಮಾತನಾಡಿ ಸಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳನ್ನು ಸೇರಿಸಿರುವದು ಸಂತಸದಾಯಕ ಸಂಗತಿಯಾಗಿದೆ ಎಂದು ಅರಣ್ಯವನ್ನು ಉಳಿಸಿ ಬೆಳೆಸುವಲ್ಲಿ ಮುಂದಾಗಬೇಕೆಂದು ಮಕ್ಕಳಿಗೆ ಗಿಡ ಒಂದರಿಂದ ಯಾವ ರೀತಿ ಲಾಭವಾಗುತ್ತದೆ ಎಂಬುದರ ಕುರಿತು ಜಿಲ್ಲೆಯಲ್ಲಿ ಶೇ.2 ರಷ್ಟು ಅರಣ್ಯಹೊಂದಿದೆ ಆದರೆ ಶೇ.33 ಬೇಕಾಗಿದೆ ಕನರ್ಾಟಕದಲ್ಲಿ ಶೇ.20 ರಷ್ಟಿದೆ ಕಾರಣ ಅರಣ್ಯ ಸಂಪತ್ತನ್ನು ಇನ್ನೂ ಬೆಳೆಸಬೇಕಾಗಿದೆ ಎಂದು ಮಕ್ಕಳನ್ನು ಉದ್ದೇಶಿಸಿ ಮರದ ಕಥೆಯೊಂದನ್ನು ಹೇಳಿ ಗಮನ ಸೇಳೆದರು.
ಅತಿಥಿ ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ಎಸ್.ಬಿ.ಚಲವಾದಿ ಮಾತನಾಡಿ ಧರ್ಮ ಜಾತಿ ಬೇದದಿಂದ ಜಗತ್ತು ಹಾಳುಗೆಡುತ್ತದೆ ಆದರೆ ನಮ್ಮಲ್ಲಿ ಏಕತೆ ಸಹೋದರತ್ವ ಮಾನವ ಜಾತಿ ಒಂದೇ ಎಂಬುದನ್ನು ಅರೀತು ನಡೆಯುವ ಕಾರ್ಯ ನಮ್ಮದಾಗಬೇಕೆಂದರು.
ಸಿಆರ್ಸಿ ಟಿ.ಡಿ.ಲಮಾಣೆ, ಎಸ್.ಎಂ.ಕಾಶಿನಕುಂಟಿ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಈ ಕಾರ್ಯಕ್ರಮದಲ್ಲಿ ಉಪಸ್ಥಿತ ಶ್ರೀಗಳಿಗೆ ಅತಿಥಿ ಮಹೋದಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯ ಮೇಲೆ ಮುದ್ದೇಬಿಹಾಳ ಕ್ಷೇತ್ರಶಿಕ್ಷಣಾಧಿಕಾರಿ ಎಸ್.ಡಿ.ಗಾಂಜಿ, ಎಸ್.ಎಸ್.ವಿದ್ಯಾಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ, ಲಿಂಗಸೂರ ತಾಪಂ ಸದಸ್ಯ ವಾಯಿದ್ ಜಾಗೀರದಾರ, ಬಿಜೆಪಿ ಮುಖಂಡ ನಿಂಗನಗೌಡ ಬಿರಾದಾರ, ಗೋವಾ ಉದ್ಯಮಿದಾರ ನಿಂಗನಗೌಡ ಬಿರಾದಾರ, ಡಾ.ನಜೀರ ಕೋಳ್ಯಾಳ, ದೈಹಿಕ ಶಿಕ್ಷಕ ಆರ್.ಎಲ್.ಕೊಪ್ಪದ, ಲಿಂಗಸೂರ ತಾಪಂ ಮಾಜಿ ಉಪಾಧ್ಯಕ್ಷ ಡಿ.ಜಿ.ಗುರಿಕಾರ, ತಾಳಿಕೋಟೆ ಮುಸ್ಲಿಂ ಬ್ಯಾಂಕ್ ಸದಸ್ಯ ಫಯಾಜ್ ಉತ್ನಾಳ, ಶಿಕ್ಷಣ ಸಂಯೋಜಕ ಶಿಕಳವಾಡಿ, ಪಿ.ಎ.ಮುಲ್ಲಾ, ಎಂ.ಎಸ್.ಹುಲ್ಲೂರ, ಸೈಯದ ಅಹ್ಮದ, ಮಂಜುನಾಥ ಸೊಂಡೂರ, ಬಿ.ಎಚ್.ಮಾಗಿ, ಪರನಗೌಡ ಪಾಟೀಲ, ಜಾತ್ರಾ ಕಮಿಟಿಯ ಅಧ್ಯಕ್ಷ ಕೆ.ಎಚ್.ಪಾಟೀಲ, ಮಹ್ಮದಲಿ ಜಮಾದಾರ, ಬಾಬು ಗುಡ್ನಾಳ, ಬಿ.ಎಸ್.ಇಸಾಂಪೂರ, ಗ್ರಾಂಪಂ ಅಧ್ಯಕ್ಷ ಮಹ್ಮದಪಟೇಲ ಬಿರಾದಾರ, ಬಾಬು ಮೋಕಾಶಿ, ಮಲ್ಲಯ್ಯ ಹಿರೇಮಠ, ರಜಾಕ ಕೂಚಬಾಳ, ಮೊದಲಾದವರು ಉಪಸ್ಥಿತರಿದ್ದರು.