ಆರ್ಸಿಯುದಲ್ಲಿ ವಾರ್ಷಿ ಕ ಸಾಂಸ್ಕೃತಿಕ ಕಾರ್ಯಕ್ರಮ

ಬೆಳಗಾವಿ,3: ಭಾರತ ಸಂಸ್ಕೃತಿ ಮತ್ತು ಕಲೆಗಳಲ್ಲಿ ವಿವಿಧತೆಯನ್ನು ಸಾರುವ ರಾಷ್ಟ್ರವಾಗಿದ್ದು, ಪ್ರಸ್ತುತ ಸಾಂಸ್ಕೃತಿಕ ಕಲೆಗಳು ಅಳಿವಿನತ್ತ ಸಾಗುತ್ತಿವೆ. ವಿದ್ಯಾಥರ್ಿಗಳು ಈ ದೇಶಿ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕೆಂದು ವಿವಿಯ ಕುಲಸಚಿವರಾದ ಸಿದ್ದು ಆಲಗೂರ ಡೊಳ್ಳನ್ನು ಭಾರಿಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ನಡೆದ ವಾಷರ್ಿಕ ಸಾಂಸ್ಕೃತಿ ಸ್ಪಧರ್ಾ ಕಾರ್ಯಕ್ರಮದಲ್ಲಿ ವಿದ್ಯಾಥರ್ಿಗಳು ನಾಟಕದ ಮೂಲಕ ಪ್ರಸ್ತುತ ದಿನಮಾನಗಳಲ್ಲಿ ಯುವಸಮೂಹ ಅವಶ್ಯಕ್ಕೂ ಮೀರಿ ಸಾಮಾಜಿಕ ಜಾಲತಾಣಗಳಲ್ಲಿ ತಲ್ಲಿನರಾಗಿರುವುದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿ ನಿತ್ಯ ಜೀವನದ ನೆಮ್ಮದಿಯನ್ನು ಕಳೆದುಕೋಳ್ಳುತಿರುವುದರ ಕುರಿತಂತೆ ನಾಟಕದ ಮೂಲಕ ಸಾಧರಪಡಿಸಿದರು. 

ಮೊಬೈಲ್ ಅನ್ನು ನಾವು ಅಫ್ಡೆಟ್ ಮಾಡ್ಬೇಕು ಹೋರತು ನಮ್ಮನ್ನು ಮೋಬೈಲ್ ಅಫ್ಡೆಟ್ ಮಾಡಬಾರದು, ಎಂಬ ಸಂದೇಶದ ಮೂಲಕ ವಿದ್ಯಾಥರ್ಿಗಳಿಗೆ ಹಾಸ್ಯದ ರಸದೌತಣ ಉಣಬಡಿಸಿದರು. ಉತ್ತರ ಕನರ್ಾಟಕ ಭಾಷಾ ಶೈಲಿಯ ಡೈಲಾಗ್ ಗಳ ಮೂಲಕ ನೇರೆದ ವಿದ್ಯಾಥರ್ಿಗಳನ್ನ ನಗೆಯಲ್ಲಿ ತೇಲಿಸಿದರು. ಸಾಮಾಜಿಕ ಜಾಲತಾಣಗಳು ಅಭಿವೃದ್ಧಿ ಹೊಂದುತ್ತಿದ್ದಂತೆ, ಯುವಜನತೆ ಹೆಚ್ಚಾಗಿ ದೇಶಿ ಸಂಸ್ಕೃತಿಯು ಎಲೆ ಮರೆಯ ಕಾಯಿಯಂತಾಗಿದೆ. ಎಂಬ ಸಂದೇಶ ಸಾರಿದರು. 

ವಿಶ್ವವಿದ್ಯಾಲಯದಲ್ಲಿ ಎಲ್ಲ ವಿಭಾಗದ ವಿದ್ಯಾಥರ್ಿಗಳಿಂದ ನಾಟಕ, ಸಂಗಿತ, ನೃತ್ಯ, ರಸಪ್ರಶ್ನೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಎರಡು ದಿನಗಳಕಾಲ ಜರುಗಲಿವೆ.