ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಿ: ಡಾ ಎಂ ಧರ್ಮಣ್ಣ
ಹೂವಿನ ಹಡಗಲಿ 28: ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ ಎಂದು ತುಂಗಭದ್ರಾ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಡಾ. ಧರ್ಮಣ್ಣ ಹೇಳಿದರು .ಪಟ್ಟಣದ ತುಂಗಭದ್ರಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪ್ರಶ್ನೆ ಮಾಡುವುದರ ಮೂಲಕ ತಾರ್ಕಿಕತೆ ಮತ್ತು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಂಡು, ಮೌಡ್ಯತೆ ಮತ್ತು ಅಂಧಕಾರದಿಂದ ದೂರ ಉಳಿಯಬೇಕು. ಸಿ ವಿ ರಾಮನ್, ಮೇಡಂ ಕ್ಯೂರಿ, ಐಸಾಕ್ ನ್ಯೂಟನ್, ಅಬ್ದುಲ್ ಕಲಾಂ ರವರ ಜೀವನ ನಿಮಗೆ ಆದರ್ಶ ಆಗಲಿ ಎಂದು ತಿಳಿಸಿದರು.ಮುಖ್ಯ ಗುರು ಎಸ್ ಮಂಜುನಾಥ್ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳು ವೈಜ್ಞಾನಿಕ ತಳಹದಿಯ ಮೇಲೆ ಬದುಕನ್ನು ಕಟ್ಟಿಕೊಳ್ಳುಬೇಕು ಎಂದು ಹೇಳಿದರು. ಶಿಕ್ಷಕರಾದ ಕೆ. ಮೊಹಿದ್ದೀನ್ ರವರು ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ಪ್ರತಿಜ್ಞಾವಿಧಿಯನ್ನು ಬೋಧಿಸಿದರುಶಿಕ್ಷಕರಾದ ಜೆ. ಸುವರ್ಣ, ಕೆ.ಎಮ್. ಉಮಾ, ಚಾಂದಿನಿ, ಕಲ್ಲನ ಗೌಡ ನಿಸ್ಸಾರ್ ಅಹಮದ್ ಇತರರು ಉಪಸ್ಥಿತರಿದ್ದರು. ಶಿಕ್ಷಕಿಯರಾದ ನಗ್ಮಾ ಮತ್ತು ಹೆಚ್. ಪವಿತ್ರ ನಿರ್ವಹಿಸಿದರು. ಆಯ್ದ ವಿದ್ಯಾರ್ಥಿಗಳು ರಾಷ್ಟ್ರೀಯ ವಿಜ್ಞಾನ ದಿನದ ಬಗ್ಗೆ ಭಾಷಣ ಮಾಡಿದರು.