ಶತಕದ ಸನಿಹದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ

 ಲಿಸ್ಬನ್, ಅ 12:   ವಿಶ್ವ ಫುಟ್ಬಾಲ್ ಕ್ರೀಡೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಪೋರ್ಚುಗಲ್ ತಂಡದ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಅಂತಾರಾಷ್ಟ್ರೀಯ 100 ಗೋಲುಗಳ ಸನಿಹದಲಿದ್ದಾರೆ. ಶುಕ್ರವಾರ ತಡರಾತ್ರಿ  ನಡೆದಿದ್ದ 2020ರ ಯುರೋ ಪಂದ್ಯದಲ್ಲಿ ರೊನಾಲ್ಡೊ ಅವರ ಗೋಲು ನೆರವಿನಿಂದ ಪೋರ್ಚುಗಲ್ ತಂಡ 3-0 ಅಂತರದಲ್ಲಿ  ಲುಕ್ಸೆಮ್ಬಗರ್್ ವಿರುದ್ಧ ಗೆದ್ದು ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವ ಹಾದಿ ಜೀವಂತವಾಗಿರಿಸಿಕೊಂಡಿತು. ಕಳೆದ ರಾತ್ರಿ ನಡೆದಿದ್ದ ಪಂದ್ಯದಲ್ಲಿ ರೊನಾಲ್ಡೊ ಅವರು ವೃತ್ತಿ ಜೀವನದ 94ನೇ ಅಂತಾರಾಷ್ಟ್ರೀಯ ಗೋಲುಗಳನ್ನು ಪೂರ್ಣಗೊಳಿಸಿದರು. ಒಟ್ಟಾರೆ, ಎಲ್ಲ ಮಾದರಿಯಲ್ಲಿ ಜುವೆಂಟಾಸ್ ಮುಂಚೂಣಿ ಆಟಗಾರ 699 ಗೋಲುಗಳನ್ನು ಸಿಡಿಸಿದ್ದಾರೆ. ಪಂದ್ಯದ ಗೆಲುವಿನೊಂದಿಗೆ ಮೂರು ಅಂಕ ಕಲೆ ಹಾಕಿರುವ ಪೋರ್ಚುಗಲ್ ತಂಡ ಬಿ ಗುಂಪಿನಲ್ಲಿ ಎರಡನೇ ಸ್ಥಾನ ಅಲಂಕರಿಸಿದೆ. ಉಕ್ರೈನ್ ತಂಡ ಲಿಥೂನಿಯಾ ವಿರುದ್ಧ 2-0 ಅಂತರದಲ್ಲಿ ಗೆದ್ದು ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ. ಪೋರ್ಚುಗಲ್ ತಂಡ ಕೇವಲ ಐದು ತಂಡಗಳ ಅಂತರದಲ್ಲಿ ಎರಡನೇ ಸ್ಥಾನದಲ್ಲಿದೆ. ಪಂದ್ಯದ ಎರಡನೇ ಅವಧಿಯ 65ನೇ ನಿಮಿಷದಲ್ಲಿ 34ರ ಪ್ರಾಯದ ರೊನಾಲ್ಡೊ ಗೋಲು ಗಳಿಸುವ ಮೂಲಕ ಅಂತಾರಾಷ್ಟ್ರೀಯ 94 ಗೋಲುಗಳನ್ನು ಪೂರ್ಣಗೊಳಿಸಿದರು. ಅತಿ ಹೆಚ್ಚು ಅಂತಾರಾಷ್ಟ್ರೀಯ ಗೋಲುಗಳನ್ನು ಸಿಡಿಸಿ ಅಗ್ರ ಸ್ಥಾನದಲ್ಲಿರುವ ಇರಾನ್ನ ಮಾಜಿ ಸ್ಟ್ರೈಕರ್ ಅಲಿ ದಹಿ(109 ಗೋಲು) ಅವರನ್ನು ಸರಿದೂಗಿಸಲು ರೊನಾಲ್ಡೊಗೆ ಇನ್ನೂ, 15 ಗೋಲು ಅಗತ್ಯವಿದೆ.