ಲಿಸ್ಬನ್, ಏ 5,ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ವೃತ್ತಿ ಜೀವನದ ಆದಾಯ ಗಳಿಕೆಯಲ್ಲಿ 1 ಬಿಲಿಯನ್ ದಾಟಿದ ಮೊದಲ ಫುಟ್ಬಾಲ್ ಆಟಗಾರ ಹಾಗೂ ಒಟ್ಟಾರೆ ಮೂರನೇ ಕ್ರೀಡಾಪಟು ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.ಕೊರೊನಾ ವೈರಸ್ ಸಾಂಕ್ರಮಿಕ ರೋಗದ ವಿರುದ್ಧ ಹೋರಾಟ ನಡೆಸಲು ರೊನಾಲ್ಡೊ, ತನ್ನ ಕ್ಲಬ್ ಜುವೆಂಟಸ್ ಜತೆ ಸುಮಾರು 4 ಮಿಲಿಯನ್ ಯುರೋಗಳಷ್ಟು ವೇತನ ಕಡಿತಕ್ಕೆ ಸಮ್ಮತಿ ಸೂಚಿಸಿದ ಹೊರತಾಗಿಯೂ ಆದಾಯ ಗಳಿಕೆಯಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ.
ಪೋರ್ಬ್ಸ್ ಪ್ರಕಾರ, ಈ ವೇತನ ಕಡಿತವು ಪೋರ್ಚುಗೀಸ್ ನಾಯಕರ ವಾರ್ಷಿಕ ಆದಾಯ ಗಳಿಕೆಗೆ ಹೆಚ್ಚೇನೂ ಪರಿಣಾಮ ಬೀರುವುದಿಲ್ಲ. ಕಳೆದ ವರ್ಷ ರೊನಾಲ್ಡೊ 109 ಮಿಲಿಯನ್ ಆದಾಯ ಗಳಿಸಿದ್ದರು. ಕೋವಿಡ್-19 ಸಾಂಕ್ರಮಿಕ ರೋಗದಿಂದ ಸದ್ಯ ಸ್ಥಗಿತಗೊಂಡಿರುವ ಸೆರೀ ಎ (ಫುಟ್ಬಾಲ್ ಟೂರ್ನಿ) ಕಾರ್ಡ್ ಗಳಲ್ಲಿ ಇನ್ನೂ 30 ಪ್ರತಿಶತದಷ್ಟು ವೇತನ ಕಡಿತವಿದೆ. ಆದರೆ ಸ್ಟಾರ್ ಆಟಗಾರ ರೊನಾಲ್ಡೊ ಇನ್ನೂ ಅಂದಾಜು 46 ಮಿಲಿಯನ್ ವಾರ್ಷಿಕ ವೇತವನ್ನು ಗಳಿಸಬಹುದಾಗಿದೆ.