ಮುಂಬೈ, ಏ 12,ಇಡೀ ದೇಶ ಕೊರೊನಾ ವೈರಸ್ ಸೋಂಕಿನ ಬಿಕ್ಕಟ್ಟಿನಲ್ಲಿರುವ ಈ ಹೊತ್ತಿನಲ್ಲಿ ಜನರನ್ನು ಸುರಕ್ಷಿತಗೊಳಿಸಲು ಮುಂಬೈ ಪೊಲೀಸರು ನಡೆಸುತ್ತಿರುವ ಪ್ರಯತ್ನವನ್ನು ಭಾರತ ಕ್ರಿಕೆಟ್ ತಂಡದ ಸದಸ್ಯ ರೋಹಿತ್ ಶರ್ಮ ಶ್ಲಾಘಿಸುವ ಮೂಲಕ ನುಡಿ ನಮನ ಸಲ್ಲಿಸಿದ್ದಾರೆ.ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಡಿಯೊ ಒಂದನ್ನು ಹಂಚಿಕೊಂಡಿರುವ ಅವರು, "ಗಡಿಯಾರದ 24 ಗಂಟೆಯೂ ಕೆಲಸ ಮಾಡಲು ಮತ್ತು ಮುಂಬೈನ ಪ್ರತಿಯೊಂದು ಭಾಗವನ್ನು ಆವರಿಸಿದೆ ಎಂದು ಖಚಿತಪಡಿಸಿಕೊಳ್ಳಲು ಮುಂಬೈ ಪೊಲೀಸರಿಗೆ ದೊಡ್ಡ ಚಪ್ಪಾಳೆ ಹಾಕೋಣ. ನಮ್ಮಿಂದಾಗುವ ಅಲ್ಪ ಸಹಾಯ ಮಾಡುವ ಮೂಲಕ ಅವರಿಗೆ ನೆರವಾಗುವುದು ನಮ್ಮ ಕರ್ತವ್ಯವಾಗಿದೆ. ಹೀಗಾಗಿ ಎಲ್ಲರೂ ಮನೆಯಲ್ಲಿ ಉಳಿಯಿರಿ," ಎಂದಿದ್ದಾರೆಮಹಾರಾಷ್ಟ್ರದಲ್ಲಿ ಈವರೆಗೆ 1761 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದ್ದು, 208 ರೋಗಿಗಳು ಗುಣಮುಖರಾಗಿದ್ದಾರೆ. ಒಟ್ಟು ಪ್ರಕರಣಗಳಲ್ಲಿ 127 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸಂಗ್ರಹಿಸಿದ ಅಂಕಿ ಅಂಶಗಳು ತಿಳಿಸಿವೆ.ದೇಶದಲ್ಲಿಕೋವಿಡ್-19 ಪ್ರಕರಣಗಳ ಸಂಖ್ಯೆ ಭಾನುವಾರ 8356ಕ್ಕೆ ಏರಿದೆ. ಈ ಪೈಕಿ 716 ಗುಣಮುಖರಾಗಿ ಬಿಡುಗಡೆಯಾಗಿದ್ದು, 273 ಮಂದಿ ವೈರಸ್‌ಗೆ ತುತ್ತಾಗಿದ್ದಾರೆ.