ಕಾಮನ್ವೆಲ್ತ್ ರಾಷ್ಟ್ರಗಳಿಗೆ ಕ್ರಿಕೆಟ್ ತರಬೇತಿ ಶಿಬಿರ

 ನವದೆಹಲಿ, ಅ 15:     ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ವತಿಯಿಂದ 16 ವಯೋಮಿತಿ ಬಾಲಕರಿಗೆ  ಕ್ರಿಕೆಟ್ ತರಬೇತಿ ಶಿಬಿರವನ್ನು ಕಾಮನ್ವೆಲ್ತ್ ರಾಷ್ಟ್ರಗಳ 16 ವಯೋಮಿತಿ ಬಾಲಕರಿಗಾಗಿ ಆಯೋಜಿಸಲಾಗಿದೆ.  ಕರ್ನಾಟಕ ರಾಜಧಾನಿ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅ. 1 ರಿಂದಲೇ ಶಿಬಿರ ಆರಂಭವಾಗಿದ್ದು, ಅ. 30 ರಂದು ಅಂತ್ಯವಾಗಲಿದೆ. 16 ಕಾಮನ್ವೆಲ್ತ್ ರಾಷ್ಟ್ರಗಳಿಂದ 18 ಬಾಲಕರು ಹಾಗೂ 17 ಬಾಲಕಿಯರು ಸೇರಿ ಒಟ್ಟು 35 ಮಂದಿ ಶಿಬಿರದಲ್ಲಿ ಭಾಗವಹಿಸಿದ್ದಾರೆ.  2018 ರ ಏಪ್ರಿಲ್ನಲ್ಲಿ ಲಂಡನ್ನಲ್ಲಿ ನಡೆದ ಕಾಮನ್ವೆಲ್ತ್ ಮುಖ್ಯಸ್ಥರ ಸರ್ಕಾರದ ಸಭೆಯಲ್ಲಿ (ಸಿಎಚ್ಒಜಿಎಂ) ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಪ್ರಕಟಣೆಗೆ ಅನುಸಾರವಾಗಿ ಈ ರೀತಿಯ ಕೋಚಿಂಗ್ ಕ್ಯಾಂಪ್ ನಡೆಸಲಾಗುತ್ತಿದೆ. ಇದನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಪ್ರಾಯೋಜಿಸುತ್ತಿದೆ. ಅನುಭವಿ ಕೋಚ್ಗಳಿಂದ ಬಾಲಕರು ಹಾಗೂ ಬಾಲಕಿಯಿರಿಗೆ ಕ್ರಿಕೆಟ್ ಕೌಶಲಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಶಿಬಿರದಲ್ಲಿ ವೈದ್ಯಕೀಯ ಮೌಲ್ಯಮಾಪನ, ಸ್ಕ್ರೀನಿಂಗ್, ವಿಡಿಯೋ ವಿಶ್ಲೇಷಣೆ, ಕೌಶಲ್ಯ ಮೌಲ್ಯಮಾಪನ ಮತ್ತು ಇತರ ಯೋಜನೆಗಳನ್ನು ಒಳಗೊಂಡಿವೆ. ಸಣ್ಣ ರಾಷ್ಟ್ರಗಳು ಮತ್ತು ಸಣ್ಣ ದ್ವೀಪ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ತೊಡಗಿಸಿಕೊಂಡ 53 ಸದಸ್ಯರು  ಕಾಮನ್ವೆಲ್ತ್ನಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿದೆ. ಈ ಕ್ರಿಕೆಟ್ ಕೋಚಿಂಗ್ ಶಿಬಿರವು ಕ್ರೀಡಾ ಮಾಧ್ಯಮದ ಮೂಲಕ ಕಾಮನ್ವೆಲ್ತ್ ದೇಶಗಳ ಯುವಕರಲ್ಲಿ ಬಾಂಧವ್ಯವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ ಎಂದು  ಎಂಇಎ ಪ್ರಕಟಣೆ ತಿಳಿಸಿದೆ.