ಕ್ರಿಕೆಟ್ ತಾರೆ ರಿಷಭ್ ಪಂತ್ ಜೆಎಸ್‍ಡಬ್ಲ್ಯೂ ಸ್ಟೀಲ್ ಬ್ರಾಂಡ್ ರಾಯಭಾರಿ

ಬಳ್ಳಾರಿ, ಫೆ.7,ಭಾರತ ಕ್ರಿಕೆಟ್ ತಂಡದ ಯುವ ತಾರೆ ರಿಷಭ್ ಪಂತ್ ಅವರು ಜೆಎಸ್‍ಡಬ್ಲ್ಯೂ ಸ್ಟೀಲ್‍ನ ಬ್ರಾಂಡ್ ರಾಯಭಾರಿಯಾಗಿದ್ದಾರೆ.ಈ ಸಂಬಂಧ ರಿಷಭ್ ಪಂತ್ ಅವರು ಜೆಎಸ್‍ಡಬ್ಲ್ಯೂ ಸ್ಟೀಲ್ ಜೊತೆ ಒಪ್ಪಂದ ಮಾಡಿಕೊಂಡಿದ್ದು ಅದರ ಪ್ರಕಾರ ಇವರು 3 ವರ್ಷಗಳ ಕಾಲ ರಾಯಭಾರಿಯಾಗಿರುತ್ತಾರೆ. ಕಲರೌನ್+ ಬಣ್ಣ ಲೇಪಿತ ಶೀಟ್ ಮತ್ತು ನಿಯೋಸ್ಟೀಲ್ ಟಿಎಂಟಿ ಬಾರ್ಸ್ ಜೆಎಸ್‍ಡಬ್ಲ್ಯೂ ಸ್ಟೀಲ್ ಸಂಸ್ಥೆಯ ಉತ್ಪನ್ನಗಳು. ಇವುಗಳನ್ನು ಪ್ರಮೋಟ್ ಮಾಡುವಲ್ಲಿ ರಿಷಭ್ ಪಂತ್ ಶ್ರಮಿಸಲಿದ್ದಾರೆ.

ಭಾರತವು ಪ್ರಚಂಚದಲ್ಲೇ ಎರಡನೆ ಅತಿದೊಡ್ಡ ಸ್ಟೀಲ್ ಉತ್ಪದಕಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. 2030ರ ಹೊತ್ತಿಗೆ ಇಂಡಿಯಲ್ ನ್ಯಾಷನಲ್ ಸ್ಟೀಲ್ ಪಾಲಿಸಿ ಮೂಲಕ ಭಾರತವು ವಾರ್ಷಿಕ 142 ಮಿಲಿಯನ್ ಟನ್ ಉತ್ಪಾದನೆಯಿಂದ ವಾರ್ಷಿಕ 300 ಮಿಲಿಯನ್ ಟನ್ ಉತ್ಪಾದಿಸುವ ಗುರಿ ಹೊಂದಿದೆ. ಪ್ರಸ್ತುತ ಭಾರತದಲ್ಲಿ ಪ್ರತಿ ವ್ಯಕ್ತಿ 74 ಕೆಜಿ ಸ್ಟೀಲ್ ಬಳಸುತ್ತಾನೆ. 2030 ರ ಹೊತ್ತಿಗೆ ಇದು 160 ಕೆಜಿಗೆ ತಲುಪುವ ಸಾಧ್ಯತೆ ಇದೆ. ಪ್ರಪಂಚದ ಸರಾಸರಿ ತಗೆದುಕೊಂಡರೆ ಪ್ರತಿ ವ್ಯಕ್ತಿ 212 ಕೆಜಿ ಸ್ಟೀಲ್ ಬಳಸುತ್ತಾನೆ. ಈ ಬೆಳವಣಿಗೆಗೆ ಸಹಕಾರಿಯಾಗಿ ಜೆಎಸ್‍ಡಬ್ಲ್ಯೂ ಸ್ಟೀಲ್ ತನ್ನ ಉತ್ಪಾದನೆಯನ್ನು 2030ರ ಹೊತ್ತಿಗೆ ವಾರ್ಷಿಕ 45 ಮಿಲಿಯನ್ ಟನ್ ತಲುಪುವ ಗುರಿ ಹೊಂದಿದೆ.

"ಜೆಎಸ್‍ಡಬ್ಲ್ಯೂ ಸ್ಟೀಲ್‍ನೊಂದಿದೆ ಜೊತೆಗೂಡಲು ನನಗೆ ಅತೀವ ಸಂತಸವಾಗುತ್ತಿದೆ. ಧೀರ್ಘ ಕಾಲದ ಪಯಣಕ್ಕೆ ಇದು ಆರಂಭದ ಹೆಜ್ಜೆ ಎನ್ನುವ ನಂಬಿಕೆ ನನ್ನದು. ಜೆಎಸ್‍ಡಬ್ಲ್ಯೂ ಸ್ಟೀಲ್ ನಂತಹ ಸಂಸ್ಥೆಯೊಂದಿದೆ ಜೊತೆಗೂಡಲು ನನಗೆ ಹೆಮ್ಮೆ ಎನಿಸುತ್ತಿದೆ" ಎಂದು ರಿಷಭ್ ಪಂತ್ ಹೇಳಿದರು. "ಬೆಟರ್ ಎವರಿಡೇ ಎನ್ನುವುದು ಜೆಎಸ್‍ಡಬ್ಲ್ಯೂ ಗ್ರೂಪ್‍ನ ಫಿಲಾಸಫಿ. ಇದು ಗ್ರಾಹಕರ ಮನದಲ್ಲಿ ನಮಗೊಂದು ವಿಶೇಷ ಸ್ಥಾನವನ್ನು ಕಲ್ಪಿಸಿಕೊಡುತ್ತದೆ. ಉತ್ತಮ ಗುಣಮಟ್ಟದ ಉತ್ಪನ್ನಗಳ ತಯಾರಿಕೆಗೆ ಹೆಚ್ಚು ಒತ್ತು ನೀಡಿ ಗ್ರಾಹಕರಿಗೆ ಸಿಗುವಂತೆ ಮಾಡುವುದು ನಮ್ಮ ಉದ್ದೇಶ. ರಿಷಭ್ ಪಂತ್ ಅವರನ್ನು ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿರುವುದು ನಮಗೆ ಸಂತಸವಾಗಿದೆ" ಎಂದು ಜೆಎಸ್‍ಡಬ್ಲ್ಯೂ ಗ್ರೂಪ್‍ನ ಪಾರ್ಥ್ ಜಿಂದಾಲ್ ಹೇಳಿದರು.