ಹಳೆಯ ವಿದ್ಯಾರ್ಥಿಗಳ ವತಿಯಿಂದ ಕ್ರಿಕೆಟ್ ಟೂರ್ನಮೆಂಟ
ಹೊಸಪೇಟೆ 25: ಇಂದು ಬಳ್ಳಾರಿ ರಸ್ತೆಯಲ್ಲಿರುವ ಮುನೀರ್ ಶೋರೂಮ್ ಎದುರುಗಡೆ ಇರುವ ಮೈದಾನದಲ್ಲಿ ಖಿದ್ಮತೆ - ಉಲ್- ಮುಸ್ಲಮೀನ್ ಸಮಿತಿಯ ಫೋಲ್ ಬನ್ ಶಿಕ್ಷಣ ಸಂಸ್ಥೆಯ ನೇತೃತ್ವದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳ ವತಿಯಿಂದ ಕ್ರಿಕೆಟ್ ಟೂರ್ನಮೆಂಟನ್ನು ಹಮ್ಮಿಕೊಳ್ಳಲಾಯಿತು.
ಈ ಒಂದು ಕ್ರಿಕೆಟ್ ಟೂರ್ನಮೆಂಟ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಂಜುಮನ್ ಕಿದ್ಮತೆ ಇಸ್ಲಾಂ ಕಮಿಟಿಯ ಅಧ್ಯಕ್ಷರು ಹಾಗೂ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್. ಎನ್ ಮೊಹಮ್ಮದ್ ಇಮಾಮ್ ನಿಯಾಜಿ ರವರು ಮಾತನಾಡಿ ಕ್ರಿಕೆಟ್ ಟೂರ್ನಮೆಂಟ್ ಅನ್ನು ಹಮ್ಮಿಕೊಂಡಿರುವ ಖಿದ್ಮತೆ - ಉಲ್ - ಮುಸ್ಲಿಮೀನ್ ಸಂಸ್ಥೆಯ ಮೂಲಕ ಶಾಲೆಯ ಶಿಕ್ಷಣ ಸಂಸ್ಥೆಗೆ ಅಭಿನಂದನೆಗಳನ್ನು ತಿಳಿಸಿದರು. ಹಾಗೂ ಯಾವುದೇ ಆಟಗಳನ್ನು ಕೇವಲ ಆಟವಾಗಿ ನೋಡಬೇಕೆ ಹೊರತು ಪ್ರತಿಷ್ಠೆಯಾಗಿ ತೆಗೆದುಕೊಳ್ಳಬಾರದು. ತೀರ್ುಗಾರರ ನಿರ್ಧಾರಗಳನ್ನು ಅಥವಾ ಆದೇಶಗಳನ್ನು ಗೌರವಿಸಬೇಕು. ಹಾಗೂ ಈ ಒಂದು ಟೂರ್ನಮೆಂಟ್ ನಲ್ಲಿ ಭಾಗವಹಿಸಿರುವ ಎಲ್ಲಾ ಆಟಗಾರರು ಇನ್ನು ಹೆಚ್ಚಿನ ಮಟ್ಟದಲ್ಲಿ ಸಾಧನೆ ಮಾಡಿ ಜಿಲ್ಲೆ ಹಾಗೂ ರಾಜ್ಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕೆಂದು ಶುಭ ಹಾರೈಸಿದರು.
ಈ ಒಂದು ಟೂರ್ನಮೆಂಟ್ ನಲ್ಲಿ ಖಿದ್ಮತೆ -ಉಲ್ - ಮುಸ್ಲಿಮೀನ್ ಸಂಸ್ಥೆಯ ಅಧ್ಯಕ್ಷರಾದ ಸೈಯದ್ ನಿಜಾಮುದ್ದೀನ್ ರವರು ಹಾಗೂ ಕಾರ್ಯದರ್ಶಿಗಳಾದ ಶಕ್ಷವಲಿ ರವರು, ಖಜಾಂಚಿಗಳಾದ ಬಿ. ಮಹಮ್ಮದ್ ಅನೀಫ್ ರವರು, ಹಾಗೂ ಎಂ. ಎಂ ಫೈರೋಜ್ ಖಾನ್, ಕೆ. ಮುಸ್ತಾಕ್ ಅಹಮದ್, ಆಸಿಫ್, ಕೆ ಮೊಹಮ್ಮದ್ ಸಲೀಂ, ಹಾಗೂ ಆಡಳಿತ ಅಧಿಕಾರಿಗಳಾದ ಎಂ. ನಸೀಮಾ ಬೇಗಂ ಹಾಗೂ ಸಿಬ್ಬಂದಿ ವರ್ಗದವರು, ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು.