ಮಕ್ಕಳಲ್ಲಿ ಸೃಜನಾತ್ಮಕ ಚಟುವಟಿಕಾ ಕೌಶಲ್ಯ ಬೆಳೆಸಬೇಕಿದೆ: ಶಂಕ್ರಯ್ಯಾ.ಟಿ.ಎಸ್‌.

Creative and imaginative skills need to be developed in children: Shankrayya.T.S.

ಕೊಪ್ಪಳ 28 : ಪ್ರತಿಯೊಂದು ಮಗವಿನಲ್ಲಿ ಸೃಜನಾತ್ಮಕ ಚಟುವಟಿಕೆಯನ್ನು ಮಾಡುವಂತಾ ಕೌಶಲ್ಯವನ್ನು ಬೆಳೆಸಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಯ್ಯಾ. ಟಿ.ಎಸ್‌. ಹೇಳಿದರು. 

ಗುರುವಾರ ತಾಲೂಕಿನ ಬಹದ್ದೂರಬಂಡಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳಿಗೆ ಬೋಧನಾ ಸಮಯದಲ್ಲಿ ಕೇವಲ ವಿಷಯವನ್ನು ಕಂಠಪಾಠ ಮಾಡಿಸುವುದರಿಂದ ಆ ವಿದ್ಯಾರ್ಥಿಯು ಕೇವಲ ಪರೀಕ್ಷೆಯಲ್ಲಿ ಮಾತ್ರ ಮುಂದೆ ಬರಬಹುದು ಆದರೆ ಜೀವನ ರಂಗದಲ್ಲಿ ಮುಂದೆ ಬರಲು ಸಾಧ್ಯವಾಗುವುದಿಲ್ಲ. ಜೀವನದಲ್ಲಿ ಕೂಡಾ ವಿದ್ಯಾರ್ಥಿಯು ಯಶಸ್ವಿಯನ್ನು ಪಡೆಯಬೇಕಾದರೆ ಆ ವಿದ್ಯಾರ್ಥಿಗೆ ಸೃಜನಾತ್ಮಕ ಚಟುವಟಿಕೆಯ ಮೂಲಕ ಪಾಠ ಮಾಡುವುದರ ಜೊತೆಯಲ್ಲಿ ಅವನಲ್ಲಿ ಸೃಜನಾತ್ಮಕ ಕೌಶಲ್ಯವನ್ನು ಬೆಳೆಸುವ ಕಾರ್ಯವನ್ನು ಶಿಕ್ಷಕರು ಮಾಡಬೇಕಿದೆ ಎಂದು ಹೇಳಿದರು. ಮಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಹದ್ದೂರಬಂಡಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಯೋಗಾನಂದ ಲೇಬಗೇರಿ ಮಾತನಾಡುತ್ತಾ ಸರಕಾರವು ಪ್ರಸ್ತುತ ದಿನಮಾನಗಳಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಎಲ್ಲಾ ಸೌಲಭ್ಯವನ್ನು ನೀಡುವುದರ ಜೊತೆಯಲ್ಲಿ ಇರುವಂತ ಪ್ರತಿಯನ್ನು ಗುರುತಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ.ಕಲಿಕಾ ಹಬ್ಬವು ಕೂಡಾ ಒಂದು ವಿಭಿನ್ನವಾದ ಕಾರ್ಯಕ್ರಮವಾಗಿದ್ದು ಮಕ್ಕಳು ಇದನ್ನು ಸರಿಯಾದ ರೀತಿಯಲ್ಲಿ ಬಳಿಸಿಕೊಂಡು ತಮ್ಮ ಪ್ರತಿಭೆಯನ್ನು ಹೊರಹಾಕುವ ಕಾಯಕ ಮಾಡಬೇಕಿದೆ ಎಂದು ಹೇಳಿದರು. 

ಬಹದ್ದೂರಬಂಡಿ ಕ್ಲಸ್ಟರ್ ಸಿ.ಆರ್‌.ಪಿ.ಹನುಮಂತಪ್ಪ ಕುರಿ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಶಾಲೆಯ ಮುಖ್ಯೋಪಾಧ್ಯಾಯರಾದ ಬೀರ​‍್ಪ ಅಂಡಗಿ ಹಾಗೂ ಸರಕಾರಿ ನೌಕರರ ಸಂಘದ ನಿರ್ದೇಶಕರಾದ ಬಾಲನಾಗಮ್ಮ ಕಾರ್ಯಕ್ರಮವನ್ನು ಕುರಿತು ಮಾತನಾಡಿದರು. 

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌.ಡಿ.ಎಂ.ಸಿ.ಯ ಅಧ್ಯಕ್ಷರಾದ ಮಂಜುನಾಥ ಕುರಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾ.ಪಂ.ಸದಸ್ಯರಾದ ಮಹ್ಮದರಫಿ ಉರ್ದು ಶಾಲೆಯ ಎಸ್‌.ಡಿ.ಎಂ.ಸಿ.ಯ ಅಧ್ಯಕ್ಷರಾದ ಮೌಲಾಸಾಬ ಕಮ್ಮಾರ ಸರಕಾರಿ ನೌಕರರ ಕ್ರೀಡಾ ಕಾರ್ಯದರ್ಶಿ ಶರಣಪ್ಪ ರಡ್ಡೇರ ನಿದೇಶಕರಾದ ಭಾರತಿ ಹವಳೆ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ವಿರೇಶ ಅರಳಿಕಟ್ಟಿ ನಿರ್ದೇಶಕರಾದ ಲಷ್ಕರ ನಾಯಕ ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪೂರ್ಣಿಮಾ ತುಪ್ಪದ ಶಿಕ್ಷಣ ಸಂಯೋಜಕರಾದ ಬೀಮಪ್ಪ ಹೂಗಾರ ಬರಹಗಾರರ ಸಂಘದ ಜಿಲ್ಲಾಧ್ಯಕ್ಷರಾದ ವಿರೇಶ ಮೇಟಿ ಶಿಕ್ಷಕರಾದ ಬಸವರಾಜ ನಾಗರಡ್ಡಿ  ಮುಂತಾದವರು ಹಾಜರಿದ್ದರು. 

ಶಿಕ್ಷಕಿ ಮಮತಾ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿ ಭಾರತಿ ಉಪಾಧ್ಯಾ ಸ್ವಾಗತಿಸಿ ದೈಹಿಕ ಶಿಕ್ಷಕರಾದ ಮೀರಾಜುನ್ನಿಸಾ ವಂದಿಸಿದರು.