ಸೃಜನಶೀಲ ಸಾಹಿತಿ: ಡಾ. ಬರಗೂರು ರಾಮಚಂದ್ರಪ್ಪ

'ನುಡಿದಂತೆ ನಡೆಯಬೇಕು, ಬರೆದಂತೆ ಬದುಕಬೇಕು' ಎನ್ನುವ ಮಾತುಗಳು ಸಮಾಜದಲ್ಲಿ ಹೆಚ್ಚಾಗಿ ಕೇಳಿಬರುತ್ತಿವೆ. ಬರೆದಂತೆ ಬದುಕಬೇಕು ಎಂಬುದು ವಚನಕಾರರ ನುಡಿದಂತೆ ನಡೆಯಬೇಕು ಎಂಬ ಆಶಯವನ್ನು ನೆನಪಿಗೆ ತರುತ್ತವೆ. ಇಂತಹ ಮಾದರಿಗೆ ಡಾ.ಬರಗೂರ ರಾಮಚಂದ್ರಪ್ಪನವರೇ ಜೀವನ ಮತ್ತು ಸಾಹಿತ್ಯ ಒಂದು ಉತ್ತಮ ಉದಾಹರಣೆಯಾಗಿದೆ.  ನಾಡೋಜ ಬರಗೂರು ರಾಮಚಂದ್ರಪ್ಪನವರದು 'ಬದುಕೇ ಹೋರಾಟ, ಹೋರಾಟವೇ ಬದುಕು' ಎನ್ನುವ ಬದ್ಧತೆಯದು.

ಮೂಲತಃ ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ಬರಗೂರು ಗ್ರಾಮದವರಾದ ರಾಮಚಂದ್ರಪ್ಪನವರು 1947ರ ಅಕ್ಟೋಬರ್ 18 ರಂದು ಜನಿಸಿದರು. ತಂದೆ ರಂಗದಾಸಯ್ಯ, ತಾಯಿ ಕೆಂಚಮ್ಮ. ಶಿಕ್ಷಕರಾಗಿದ್ದ ರಂಗದಾಸಯ್ಯನವರು ಅಧ್ಯಾಪನ ವೃತ್ತಿಯಿಂದ ಬರುವ ಅಲ್ಪ ಸಂಬಳದಲ್ಲಿಯೇ ಎಂಟು ಮಕ್ಕಳ ಕ್ಷೇಮವನ್ನು ನೋಡಿಕೊಂಡವರು. ಇವರಲ್ಲಿ ರಾಮಚಂದ್ರಪ್ಪನವರೇ ಕೊನೆಯವರು. ರಾಮಚಂದ್ರಪ್ಪನವರು ಕಡುಬಡತನದಲ್ಲಿಯೇ ಬೆಳೆದರು. ಅವರು ಪ್ರಾಥಮಿಕ ಶಿಕ್ಷಣವನ್ನು ಬರಗೂರಿನ ಸರಕಾರಿ ಶಾಲೆಯಲ್ಲಿ ಪೂರೈಸಿ, ತುಮಕೂರಿನ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಯನ್ನು ಪ್ರಥಮ ದಜರ್ೆಯಲ್ಲಿ ಪಡೆಯುತ್ತಾರೆ. ನಂತರ ಅವರು ಉದ್ಯೋಗದ ನಿರೀಕ್ಷೆಯಿಂದ ತುಮಕೂರಿನ ಪಾಲಿಟೆಕ್ನಿಕ್ಗೆ ಅಜರ್ಿ ಸಲ್ಲಿಸಿದರು. ಅಲ್ಲಿ ಸೀಟು ಸಿಗದೇ ಇದ್ದಕಾರಣ ರಾಮಚಂದ್ರಪ್ಪನವರು ತುಮಕೂರಿನ ಸರಕಾರಿ ಪ.ಪೂ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಪ್ರವೇಶ ಪಡೆದು ಪಿಯುಸಿ ಪೂರೈಸುತ್ತಾರೆ. ಬಿ.ಎ ಪದವಿಯನ್ನು ತುಮಕೂರಿನಲ್ಲಿ ಹಾಗೂ ಸ್ನಾತಕೋತ್ತರ ಎಂ.ಎ ಪದವಿಯನ್ನು ಕನ್ನಡ ವಿಷಯದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದುಕೊಂಡರು. 

ಅವರು ಪಾವಗಡ ತಾಲೂಕಿನ ಗೊಂಡೇತಿಮ್ಮನಹಳ್ಳಿಯ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕೆಲಸಕ್ಕೆ ಸೇರಿಕೊಂಡರು. ಶಾಲೆಯನ್ನು ಪ್ರಗತಿಯತ್ತ ಕೊಂಡೊಯ್ಯುವಲ್ಲಿ ನಿರಂತರ ಶ್ರಮಿಸಿದರು. ಅವರು ವಿದ್ಯಾಥರ್ಿಗಳು ಬರೆದ ಕವನಗಳನ್ನೆಲ್ಲಾ ಸೇರಿಸಿ 'ಸುಧಾಸಿಂದು' ಎಂಬ ಕೈಹೊತ್ತಿಗೆಯನ್ನು ಹೊರತಂದರು. ಬರಗೂರರು ಎಂ.ಎ ವಿದ್ಯಾಭ್ಯಾಸ ಮಾಡಲು ಬೆಂಗಳೂರಿಗೆ ಹೊರಟಾಗ ವಿದ್ಯಾಥರ್ಿಗಳು ಧರಣಿಯನ್ನು ಹೂಡಿದರು. ಅವರೆಲ್ಲರ ಮನವೊಲಿಸಿ ರಾಮಚಂದ್ರಪ್ಪನವರು ಎಂ.ಎ ಅಧ್ಯಯನ ಮಾಡಲು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ತೆರಳಿದರು. ಅವರು ಎಂ.ಎ ಮುಗಿಸಿದ ನಂತರ ಬೆಂಗಳೂರಿನ ಕೆಂಗೇರಿಯಲ್ಲಿ ಹಾಗೂ ಸೆಂಟ್ರಲ್ ಕಾಲೇಜಿನಲ್ಲಿ ಪಾಠ ಮಾಡತೊಡಗಿದರು. ನಂತರ ಬರಗೂರರು ಬೆಂಗಳೂರಿನ ವಿಶ್ವವಿದ್ಯಾಲಯದಲ್ಲಿ 1975ರ ಜುಲೈ 25ರಿಂದ ಉಪನ್ಯಾಸಕರಾಗಿ ವೃತ್ತಿಯನ್ನು ಪ್ರಾರಂಭಿಸಿದರು. ಅವರಿಗೆ ಪಿ.ಎಚ್.ಡಿ ಮಾಡಲು ನಿರೀಕ್ಷಿಸಿದ ಆಸಕ್ತಿ ಅನ್ಯರಿಂದ ಸಿಗಲಿಲ್ಲ. ಪಿ.ಎಚ್.ಡಿ ಮಾಡಬೇಕೆಂಬ ರಾಮಂದ್ರಪ್ಪನವರ ಆಸೆ ಕಾರಾಣಾಂತರಗಳಿಂದ ಕೈಗೂಡಲೇ ಇಲ್ಲ. ಹೀಗಾಗಿ ಅವರು ಪಿ.ಎಚ್.ಡಿಗೆ ವಿದಾಯ ಹೇಳಿದರು. ಅಪಾರ ಸಾಮಾಜಿಕ ಕಳಕಳಿಯುಳ್ಳ ಬರಗೂರು ತಮ್ಮ ಉನ್ನತ ವಿಚಾರಗಳನ್ನು ಎಂ.ಎ ವಿದ್ಯಾಥರ್ಿಗಳಿಗೆ ಧಾರೆಯೆರೆದರು. ಅವರ ಗರಡಿಯಲ್ಲಿ ಪಳಗಿದ ವಿದ್ಯಾಥರ್ಿಗಳು ಪ್ರಗತಿಪರ ಧೋರಣೆಗಳನ್ನು ರೂಢಿಸಿಕೊಂಡು ಮುನ್ನಡೆದಿದ್ದಾರೆ. ಅವರು 2006ರಲ್ಲಿ ಪ್ರಾಧ್ಯಾಪಕ ಹುದ್ದೆಯಿಂದ ಸ್ವಯಂ ನಿವೃತ್ತಿಯನ್ನು ಪಡೆದುಕೊಂಡರು. 

ವಿದ್ಯಾಥರ್ಿ ದೆಸೆಯಲ್ಲಿಯೇ ಬರಗೂರರು ಎಳೆಯ ಗೆಳೆಯರನ್ನು ಕೂಡಿಸಿಕೊಂಡು ಕನ್ನಡದ ಸಂಘದ ಹೆಸರಿನಲ್ಲಿ ಬರಗೂರಲ್ಲಿ ಪತ್ರಿಕಾ ವಾಚನಾಲಯವನ್ನು ಆರಂಭಿಸಿ, ಕನ್ನಡದ ದಿಗ್ಗಜರಾದ ಅ.ನ ಕೃಷ್ಣರಾಯ ಮತ್ತು ನಾಡಿಗೇರ ಕೃಷ್ಣರಾಯ ಅವರಿಂದ ಮೆಚ್ಚುಗೆಯ ಪತ್ರವನ್ನು ಸ್ವೀಕರಿಸಿದ್ದರು. ಊರಿನ ಗೆಳೆಯರೆಲ್ಲ ಅವರಿಗೆ ಚಂದ್ರಣ್ಣ ಎಂದೇ ಕರೆಯುತ್ತಿದ್ದರು. ಗ್ರಾಮೀಣ ಪರಿಸರದ ಬಡಕುಟುಂಬದಿಂದ ಬಂದ ಬರಗೂರರು ತಮಗನಿಸಿದ್ದನ್ನು ನೇರವಾಗಿ ಹೇಳುವ ನಿಷ್ಠುರ ಸ್ವಭಾವದವರು. ಸಾಹಿತ್ಯ ರಚನೆಯ ಮೊದಲ ದಿನಗಳಲ್ಲಿ ನವ್ಯಕಾವ್ಯದ ಪ್ರಭಾವವನ್ನು ಕಾಣುತ್ತೇವೆ. ಅವರು 'ಕನಸಿನ ಕನ್ನಿಕೆ' ಯ ಮೂಲಕ ಕಾವ್ಯ ಪ್ರಪಂಚಕ್ಕೆ ಪ್ರವೇಶಿಸುತ್ತಾರೆ. ತದನಂತರ ಮರಕುಟಿಗ ಮತ್ತು ನೆತ್ತರಲ್ಲಿ ನೆಂದ ಹೂವು ಎಂಬ ಕವನಸಂಕಲನಗಳನ್ನು ಹೊರತಂದರು. ಬರಗೂರರ ಸಾಹಿತ್ಯ ಚಳುವಳಿಯ ಉಗಮಕ್ಕೆ ಕಾರಣವಾದ ಆಶಯಗಳನ್ನು ಈ ಕವನಸಂಕಲನವು ಒಳಗೊಂಡಿದ್ದ ಕಾರಣಕ್ಕಾಗಿಯೇ ಇದು ಬಂಡಾಯ ಕಾವ್ಯ ಎಂಬ ಕೀತರ್ಿಗೆ ಪಾತ್ರವಾಯಿತು. ನಂತರ ಗುಲಾಮಿ ಸಂಸ್ಕೃತಿಯನ್ನು ಧಿಕ್ಕರಿಸುವ ಹಿನ್ನಲೆಯುಳ್ಳ ಗುಲಾಮ ಗೀತೆ, ಮಗುವಿನ ಹಾಡು ಎಂಬ ಕವನಸಂಕಲನಗಳನ್ನು ಹೊರತಂದರು. ಅವರು ಹಲವು ಕವಿತೆಗಳನ್ನು ಸಂಕಲಿಸಿ 'ಕಾಂಟೆಸಾದಲ್ಲಿ ಕಾವ್ಯ ಎಂಬ ಕಾವ್ಯ ಸಂಕಲನವನ್ನು ಪ್ರಕಟಿಸಿದ್ದಾರೆ. ಒಟ್ಟಾರೆ ಬರಗೂರರ ಕಾವ್ಯಗಳು ಬಂಡಾಯ ಕಾವ್ಯ ಚಳುವಳಿಯಲ್ಲಿ ಅತ್ಯುತ್ತಮ ಸಮಾಜವಾದ ಬರಹಗಳಾಗಿವೆ. 

ಬರಗೂರು ರಾಮಚಂದ್ರಪ್ಪನವರ ಕಥೆಗಳು ಸಾತ್ವಿಕತೆಯ ಸತ್ವವನ್ನು ಹೊರಹಾಕುವಲ್ಲಿ ಯಶಸ್ಸನ್ನು ಸಾಧಿಸಿವೆ. ಅವರು ನಾಲ್ಕು ಕಥಾ ಸಂಕಲನಗಳನ್ನು ಹೊರತಂದಿದ್ದಾರೆ. ಅವುಗಳೆಂದರೆ ಸುಂಟರಗಾಳಿ, ಕಪ್ಪು ನೆಲದ ಕೆಂಪು ಕಾಲು, ಬಯಲಾದ ಭೀಮಣ್ಣ, ಒಂದು ಊರಿನ ಕಥೆಗಳು. ಅವರ ಕಥೆಗಳಲ್ಲಿ ಪ್ರಧಾನವಾಗಿ ಮಹಿಳಾ ಸಂವೇದನೆಯನ್ನು, ಬಂಡವಾಳಶಾಹಿ ವರ್ಗದವರ ರಾಜಕೀಯ ಕ್ರೂರತ್ವವನ್ನು, ಊರ ಸಾಹುಕಾರ ತೋರಿಸುವ ದರ್ಪವನ್ನು ಗ್ರಹಿಸಿ ಕಟ್ಟಿರುವ ಕಥೆಗಳು ಮಹತ್ವವನ್ನು ಪಡೆದುಕೊಂಡಿವೆ. ಬರಗೂರರು ಹದಿಮೂರು ಕಾದಂಬರಿಗಳನ್ನು ಬರೆದಿದ್ದಾರೆ. ಅವುಗಳೆಂದರೆ ಸೂತ್ರ, ಸೀಳು ನೆಲ, ಸಂಗಪ್ಪನ ಸಾಹಸಗಳು, ಬೆಂಕಿ, ಹುತ್ತ, ಉಕ್ಕಿನ ಕೋಟೆ, ಭರತನಗರಿ, ಒಂದು ಊರಿನ ಕಥೆ, ಸೂರ್ಯ, ಗಾಜಿನ ಮನೆ, ಸ್ವಪ್ನ ಮಂಟಪ, ಶಬರಿ, ಮರಣ ದಂಡನೆ, ಅಡಗೋಲಜ್ಜಿ. ಬರಗೂರರ ಕಾದಂಬರಿಗಳಲ್ಲಿ ಮಹಿಳಾ ಸಂವೇದನೆಗೆ ಹೆಚ್ಚು ಒತ್ತುಕೊಟ್ಟಿರುವುದು ಕಂಡುಬರುತ್ತದೆ. ಪುರುಷರಿಗಿಂತ ಮಹಿಳೆಯರಿಂದಲೇ ಬದಲಾವಣೆ ಅತೀ ಶೀಘ್ರವಾಗಿ ಜರುಗಬಲ್ಲದು ಎಂಬುದನ್ನು ಬರಗೂರರ ಕಾದಂಬರಿಗಳ ಪಾತ್ರಗಳು ದೃಢಿಪಡಿಸುತ್ತವೆ. ಬರಗೂರು ಮೂರು ನಾಟಕಗಳನ್ನು ರಚಿಸಿದ್ದಾರೆ. ಅವುಗಳೆಂದರೇ ಮುಳ್ಳುಹಾದಿ, ಕಪ್ಪು ಹಲಗೆ, ಕೋಟೆ . ಅವರು ಬರೆದ ನಾಟಕಗಳನ್ನು ಹಳ್ಳಿಗಳಲ್ಲಿ ನಟನೆಯೊಂದಿಗೆ ಪ್ರಯೋಗಕ್ಕೆ ತಂದಿರುವುದು ವಿಶೇಷ. 

ಬರಗೂರರು ಕಾವ್ಯ, ಕಥೆ, ಕಾದಂಬರಿ, ನಾಟಕಗಳಿಗೆ ಮಾತ್ರವೇ ತಮ್ಮನ್ನು ಸಮಪರ್ಿಸಿಕೊಳ್ಳದೇ ವಿಚಾರ-ವಿಮಶರ್ಾ ಕ್ಷೇತ್ರಕ್ಕೂ ಕೊಡುಗೆಯನ್ನು ನೀಡಿದ್ದಾರೆ. ಅವರ ವಿಚಾರ ಮತ್ತು ವಿಮಶರ್ಾ ಕೃತಿಗಳೆಂದರೆ ಸಾಹಿತ್ಯ ಮತ್ತು ರಾಜಕಾರಣ, ಸಂಸ್ಕೃತಿ ಮತ್ತು ಸೃಜನಶೀಲತೆ, ಬಂಡಾಯ ಸಾಹಿತ್ಯ ಮೀಮಾಂಸೆ, ರಾಜಕೀಯ ಚಿಂತನೆ, ಸಿನಿಮಾ ಮತ್ತು ಸಾಹಿತ್ಯ, ಪರಂಪರೆಯೊಂದಿಗೆ ಪಿಸುಮಾತು, ಕನ್ನಡಸಾಹಿತ್ಯವೆಂಬ ಸ್ವಾತಂತ್ರ್ಯ ಹೋರಾಟ, ಶಬ್ದವಿಲ್ಲದಯುದ್ಧ ಮಯರ್ಾದಸ್ಥ ಮನುಷ್ಯರಾಗೋಣ, ನಾಲಿಗೆಯನ್ನು ನಂಬದ ನಾಯಕ, ವರ್ತಮಾನ ಹೀಗೆ ವಿಚಾರ-ವಿಮಶರ್ೆಯ ಕೃಷಿ ಹುಲುಸಾಗಿ ಸಾಗಿದೆ. ಅವರು ಹಲವಾರು ಪತ್ರಿಕೆ ಹಾಗೂ ಕೃತಿಗಳನ್ನು ಸಂಪಾದಿಸಿದ್ದಾರೆ. ಕನರ್ಾಟಕ ಸಂಗಾತಿ, ಕನ್ನಡ ಭಾಷಾ ಕಲಿಕೆಯ ಪುಸ್ತಕಗಳು, ಕಂಪ್ಯೂಟರ್ ಪದವಿವರಣ ಕೋಶ, ವಿಶ್ವವಿದ್ಯಾಲಯ ಪದವಿವರಣ ಕೋಶ, ಸಾಧನೆ ಪತ್ರಿಕೆ, ಬಂಡಾಯ ಕಾವ್ಯ, ಕೋಮುವಾದ, ಕನಕ ಸಂಪುಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜನಪ್ರಿಯ ಪುಸ್ತಕ ಮಾಲೆ, ಕನರ್ಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ 250ಕ್ಕೂ ಹೆಚ್ಚು ಕೃತಿಗಳು, ವಚನ ಚಿಂತನ ಮಾಲೆಯ ಅಡಿಯಲ್ಲಿ 23 ವಚನಕಾರರ ಕೃತಿಗಳನ್ನು ಪ್ರಧಾನ ಸಂಪಾದಕರಾಗಿ ಹೊರತಂದಿರುವ ಅವರ ಕಾಯಕ ಅನ್ಯರಿಗೆ ಮಾದರಿ. 

ಬರಗೂರರ ನಾಟಕದ ಮೇಲಿನ ಪ್ರೀತಿಯೇ ಸಿನಿಮಾ ನಿಮರ್ಿಸುವುದಕ್ಕೆ ಕಾರಣವಾಯಿತು. ಅವರು ನಿಮರ್ಿಸಿದ ಚಿತ್ರಗಳಿಗೆ ಕನ್ನಡದ ಪ್ರಜ್ಞಾವಂತ ಪ್ರೇಕ್ಷಕ ತೋರಿಸಿದ ಪ್ರತಿಕ್ರಿಯೆ ಅಮೋಘವಾದುದು. ಜನುಮದ ಜೋಡಿ, ನಮ್ಮೂರ ಹುಡುಗ, ಜೋಡಿಹಕ್ಕಿ, ಕುರುಬನ ರಾಣಿ ಮುಂತಾದ ಚಲನಚಿತ್ರಗಳ ಸಂಭಾಷಣೆ ಕೇಳಿದ ಪ್ರೇಕ್ಷಕನ ಸಂಭ್ರಮ ಅಪಾರವಾದುದು. ಒಂದು ಊರಿನ ಕಥೆ, ಬೆಂಕಿ, ಸೂರ್ಯ, ಕೋಟೆ, ಕರಡಿಪುರ, ಹಗಲು ವೇಷ, ಕ್ಷಾಮ, ಶಾಂತಿ, ತಾಯಿ, ಜನಪದ, ಏಕಲವ್ಯ, ಉಗ್ರಗಾಮಿ, ಶಬರಿ, ಭೂಮಿತಾಯಿ, ಭಾಗೀರತಿ, ಅಂಗುಲಿಮಾಲ, ಮರಣದಂಡನೆ ಮತ್ತು ಬೆಕ್ಕು ಚಲನಚಿತ್ರಗಳು ಅವರ ನಿದರ್ೇಶನದಲ್ಲಿ ತೆರೆ ಕಂಡಿವೆ. ಅವರು ಒಂದು ಊರಿನ ಕಥೆ, ಚಿತ್ರಕ್ಕಾಗಿ ಅತ್ಯುತ್ತಮ ಸಂಭಾಷಣಕಾರ ಪ್ರಶಸ್ತಿ, ಬೆಂಕಿ ಚಿತ್ರಕ್ಕಾಗಿ ಅತ್ಯುತ್ತಮ ನಿದರ್ೇಶನ ಪ್ರಶಸ್ತಿ, ಸೂರ್ಯ ಚಿತ್ರಕ್ಕಾಗಿ ಅತ್ಯುತ್ತಮ ಪ್ರಶಸ್ತಿ, ಜನುಮದ ಜೋಡಿ ಚಿತ್ರಕ್ಕಾಗಿ ವೀಡಿಯೋಕಾನ್ ಪ್ರಶಸ್ತಿ, ಶಾಂತಿಗಾಗಿ ಗಿನ್ನಿಸ್, ಕರಡೀಪುರಕ್ಕ ಶ್ರೇಷ್ಠ ಸಾಮಾಜಿಕ ಕಳಕಳಿಯ ಪ್ರಶಸ್ತಿ, 'ಮೂಕ ನಾಯಕ' ಚಿತ್ರಕ್ಕೆ ನೋಯ್ಡಾದ ಅಂತರಾಷ್ಟ್ರೀಯ ಚಿತ್ರೋತ್ಸವದ ದಶಕದ ಅತ್ಯುತ್ತಮ ಚಿತ್ರ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿಗಳು ಬರಗೂರರನ್ನು ಬೆನ್ನಟ್ಟಿ ಬಂದಿವೆ. ಅಲ್ಲದೇ ಬರಗೂರ ರಾಮಚಂದ್ರಪ್ಪನವರು ಹಲವು ಸಾಕ್ಷ್ಯ ಚಿತ್ರಗಳನ್ನು ನಿಮರ್ಾಣ ಮಾಡಿದ್ದಾರೆ. ರೇಷ್ಮೆ ಲಂಗ, ಪಂಚಾಯತ್ರಾಜ್ ಮತ್ತು ಮಹಿಳೆ, ಬ್ರಿಟಿಷ್ ವಿರೋಧಿ ಬಂಡಾಯ, ಪೊಯೆಟ್ರಿ ಇನ್ಸ್ಟೋನ್, ತುಮಕೂರು ಜಿಲ್ಲೆ, ಕನರ್ಾಟಕದ ಸಾಮಾಜಿಕ ಚಳುವಳಿಗಳು ಮುಂತಾದವುಗಳು ಮುಖ್ಯವಾಗಿವೆ.

ಬರಗೂರರು ಜನಪರ ಕಾಳಜಿಯುಳ್ಳ ಆಡಳಿತಾಧಿಕಾರಿಯೆಂದು ಗುರುತಿಸಲ್ಪಟ್ಟಿದ್ದಾರೆ. ಒಂದು ಇಲಾಖೆ ಜನಮುಖಿಯಾಗಿ ಹೇಗೆ ಕಾರ್ಯನಿರ್ವಹಿಸಬೇಕೆಂಬುದನ್ನು ಅವರು ರೂಪಿಸಿಕೊಟ್ಟಿದ್ದಾರೆ. ಅವರು ಕನರ್ಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, ತುಮಕೂರು ಸ್ನಾತಕೋತ್ತರ ಕೇಂದ್ರದ ಮೊದಲ ನಿದರ್ೇಶಕರಾಗಿ, ಕನರ್ಾಟಕ ಸಕರ್ಾರದ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ, ಆಕಾಶವಾಣಿ ಮತ್ತು ದೂರದರ್ಶನಗಳ ಸಲಹಾ ಮಂಡಳಿಯ ಸದಸ್ಯರಾಗಿ, ಪಂಪ ಪ್ರಶಸ್ತಿಯ ಆಯ್ಕೆ ಸಮಿತಿಯ ಸದಸ್ಯರಾಗಿ, ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿ, ಕನರ್ಾಟಕ ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯ ಸ್ಥಾಪಕ ಸಂಚಾಲಕರಾಗಿ, ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ಅಧ್ಯಕ್ಷರಾಗಿ ಹೀಗೆ ಹತ್ತು ಹಲವು ಆಡಳಿತಾತ್ಮಕ ಹಾಗೂ ಆಯ್ಕೆ ಸಮಿತಿಯ ಹುದ್ದೆಗಳನ್ನು ಚ್ಯುತಿ ಬರದಂತೆ ನಿರ್ವಹಿಸಿದ್ದಾರೆ. ಅವರು ಅನುಷ್ಠಾನಕ್ಕೆ ತಂದ 2001ರ ಭಾಷಿಕ ಮತ್ತು ಶೈಕ್ಷಣಿಕ ವರದಿ ಇಂದು 'ಬರಗೂರರ ವರದಿ' ಎಂದೇ ಹೆಸರಾಗಿದೆ. ಇಂತಹ ಎಲ್ಲಾ ಕ್ರಿಯಾತ್ಮಕ ಯೋಜನೆಗಳ ಹಿಂದೆ ಬರಗೂರರ ಮಾನವೀಯತೆ, ಜನಪರ ಕಾಳಜಿಗಳು ಕಾರ್ಯನಿರ್ವಹಿಸುತ್ತಿವೆ. ಆ ಮೂಲಕ ಬರಗೂರರ ಕಾರ್ಯವಿಧಾನ, ಸಾಧನೆ, ಚಿಂತನೆಗಳು ಇಂದು ಕನ್ನಡಿಗರಾದ ನಮ್ಮೆಲ್ಲರಿಗೂ ಆದರ್ಶವಾಗಿವೆ.

ಬರಗೂರು ರಾಮಚಂದ್ರಪ್ಪನವರು ಅಧ್ಯಾಪಕ ವೃತ್ತಿಯಲ್ಲಿದ್ದಾಗ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಸಿದ್ದನಹಳ್ಳಿ ಗ್ರಾಮದ ರಾಜಲಕ್ಷ್ಮೀ ಅವರ ಪರಿಚಯವಾಯಿತು. ಅವರು ಜೀವನ ಸಂಗಾತಿಗಳಾಗಲು ಪರಸ್ಪರ ನಿರ್ಧರಿಸಿದರು. ಬರಗೂರರು ಹತ್ತು ಹಲವು ಸವಾಲುಗಳೊಂದಿಗೆ ಸ್ನೇಹಿತರ ಉಪಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ರಿಜಿಸ್ಟರ್ ಮದುವೆ ಮಾಡಿಕೊಂಡರು. ನಂತರ ಆರು ವರ್ಷಗಳ ಕಾಲ ರಾಜಲಕ್ಷ್ಮೀಯವರಿಗೆ ತವರುಮನೆಯ ಸಂಬಂಧಿಕರ ಸಂಪರ್ಕವೇ ಕಡಿದು ಹೋಗಿತ್ತು. ನಂತರದ ದಿನಗಳಲ್ಲಿ ರಾಜಲಕ್ಷ್ಮೀಯವರ ತವರುಮನೆಯವರು ಹೊಂದಿಕೊಂಡರು. ಬರಗೂರರು ತಮ್ಮ ಮನೆಯಿಂದ ಏಕಕಾಲಕ್ಕೆ ಎದುರಾದ ಸವಾಲುಗಳನ್ನು ಸಂಯಮದಿಂದ ನಿಭಾಯಿಸಿದ್ದಾರೆ. ಅವರಿಗೆ ಈರ್ವರೂ ಮಕ್ಕಳು. ಅವರೇ ಮೈತ್ರಿ ಮತ್ತು ಸ್ಪೂತರ್ಿ. ಈರ್ವರಿಗೂ ಉನ್ನತ ಶಿಕ್ಷಣ, ಉತ್ತಮ ಸಂಸ್ಕಾರ ನೀಡಿದ ಬರಗೂರರು ಪರಿಪೂರ್ಣ ವ್ಯಕ್ತಿತ್ವದ ಪ್ರಜೆಗಳನ್ನಾಗಿ ರೂಪಿಸಿದ್ದಾರೆ. ಬರಗೂರು ರಾಮಚಂದ್ರಪ್ಪನವರ ಬದುಕು, ಸಾಹಿತ್ಯ ಕುರಿತಾಗಿ ಆರು ಪಿ.ಎಚ್.ಡಿ ಮಹಾ ಪ್ರಬಂಧಗಳು ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸಲ್ಲಿಕೆಯಾಗಿ, ಸಂಶೋಧಕರು ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಅಲ್ಲದೇ ಕನರ್ಾಟಕದ ಎರಡು ವಿಶ್ವವಿದ್ಯಾಲಯಗಳಲ್ಲಿ ಬರಗೂರರ ಕುರಿತು ಎಂ.ಫಿಲ್ ಪದವಿಗಾಗಿ ಸಂಶೋಧನೆಗಳು ನಡೆದಿವೆ. ನಾಡಿನಾದ್ಯಂತ ಬರಗೂರರ ಕುರಿತಾಗಿ ಹಲವಾರು ಕೃತಿಗಳು ಪ್ರಕಟಗೊಂಡಿವೆ. ಅವುಗಳಲ್ಲಿ ಸತೀಶ ಕುಲಕಣರ್ಿ, ರಾಜಪ್ಪ ದಳವಾಯಿ, ಸತ್ಯಾನಂದ ಪಾತ್ರೋಟ, ಕೃಷ್ಣ ನಾಯಕ್, ಜಿ.ಆರ್ ತಿಪ್ಪೇಸ್ವಾಮಿ ಮತ್ತು ಆರ್.ಜಿ.ಹಳ್ಳಿ ನಾಗರಾಜ ಪ್ರಕಟಿಸಿದ ಕೃತಿಗಳು ಪ್ರಮುಖವಾಗಿವೆ. ಬರಗೂರ ರಾಮಚಂದ್ರಪ್ಪನವರ ಕುರಿತು ನಾಡಿನ ಹಲವು ವಿಶ್ವವಿದ್ಯಾಲಯಗಳಲ್ಲಿ ಅವರ ಕೃತಿಗಳು ಬಿ.ಎ ಹಾಗೂ ಎಂ.ಎ ಸ್ನಾತಕೋತ್ತರ ಪದವಿಗಳಿಗೆ ಪಠ್ಯಗಳಾಗಿವೆ.

ಬರಗೂರರ ಸಾಧನೆಗೆ ಹಲವು ಪ್ರಶಸ್ತಿ-ಪುರಸ್ಕಾರಗಳು ಅವರನ್ನರಸಿಕೊಂಡು ಬಂದಿವೆ. ಅವರು ಕನರ್ಾಟಕ ಸಾಹಿತ್ಯ ಅಕಾಡೆಮಿಯಿಂದ ಗೌರವ ಪ್ರಶಸ್ತಿ, ಡಾ.ಬಿ.ಆರ್ ಅಂಬೇಡ್ಕರ್ ಪ್ರಶಸ್ತಿ, ರಾಷ್ಟ್ರೀಯ ಭಾವೈಕ್ಯತಾ ಪ್ರಶಸ್ತಿ, ರಾಷ್ಟ್ರಕವಿ ಕುವೆಂಪು ಪ್ರಶಸ್ತಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪದವಿ, ಶಾಂತವೇರಿ ಗೋಪಾಲಗೌಡ ಪ್ರಶಸ್ತಿ, ಟಿಪ್ಪುಸುಲ್ತಾನ ಪ್ರಶಸ್ತಿ, ಪಂಪ ಪ್ರಶಸ್ತಿ. ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಪುಟ್ಟಣ್ಣ ಕಣಗಲ್ ಪ್ರಶಸ್ತಿ, ಬೆಳಗಾವಿ ರಾಣಿಚೆನ್ನಮ್ಮ ವಿಶ್ವವಿದ್ಯಾಲಯ ಹಾಗೂ ತುಮಕೂರ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪದವಿ, ಅಲ್ಲಮ ಪ್ರಶಸ್ತಿ, ಹೀಗೆ ಹತ್ತು ಹಲವು ಪ್ರಶಸ್ತಿ -ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಅಲ್ಲದೇ ರಾಯಚೂರಿನಲ್ಲಿ ನಡೆದ 82ನೇ ಅಖಿಲಭಾರತ ಕನ್ನಡಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠವನ್ನು ಡಾ.ಬರಗೂರು ರಾಮಚಂದ್ರಪ್ಪನವರಿಗೆ ಕನ್ನಡಸಾಹಿತ್ಯ ಪರಿಷತ್ತು ನೀಡಿ ಗೌರವಿಸಿದೆ. 

ಇಷ್ಟೆಲ್ಲಾ ಸಾಧನೆ ಮಾಡಿದ ಡಾ.ಬರಗೂರ ರಾಮಚಂದ್ರಪ್ಪನವರು ಖ್ಯಾತ ಭಾಷಣಕಾರರಾಗಿಯೂ ಹೆಸರುವಾಸಿಯಾಗಿದ್ದಾರೆ. ಅವರು ಸಾಹಿತ್ಯ ಮತ್ತು ಸಾಹಿತ್ಯ ಚಳುವಳಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿ, ಬಂಡಾಯ ಸಾಹಿತ್ಯ ಚಳುವಳಿಯಲ್ಲಿ ಸಂಘಟನಕಾರರಾಗಿ, ಸಾಹಿತಿಯಾಗಿಅವರು ನೀಡಿದ ಕೊಡುಗೆ ಅಪಾರ. ಬರಗೂರರು ತಾವು ನಂಬಿದ್ದನ್ನು, ಬರೆಯುತ್ತಾ, ಬರೆದಂತೆ ಬದುಕುತ್ತಿರುವ ಅಪರೂಪದ ಹೋರಾಟಗಾರರು. ಅವರು ಸದಾಕಾಲ 'ಕಾಯಕವೇ ಕೈಲಾಸ' ವೆಂಬ ಶರಣರ ಹಾದಿಯಲ್ಲಿ ಮುನ್ನಡೆದವರು. ಕನ್ನಡ ನಾಡುನುಡಿ ವಿಚಾರದಲ್ಲಿ ಅವರೊಂದು ಪ್ರಖರ ಜ್ಞಾನಪೀಠ.