ನಿಸ್ವಾರ್ಥ ಸೇವೆಯ ಸೇವಕರ ಸೃಷ್ಠಿ ಎನ್.ಎಸ್.ಎಸ್.ನಿಂದ ಸಾಧ್ಯ: ಡಾ. ಗಣನಾಥ ಶೆಟ್ಟಿ

ಲೋಕದರ್ಶನ ವರದಿ

ಬೆಳಗಾವಿ, 7:"ಭಾರತ ಸರಕಾರದಲ್ಲಿ ಕನರ್ಾಟಕದ ರಾಷ್ಟ್ರೀಯ ಸೇವಾ ಯೋಜನೆ ವ್ಯವಸ್ಥೆಯುಅತ್ಯಂತ ಕ್ರೀಯಾಶೀಲವೆಂದು ಗುರುತಿಸಿಕೊಂಡಿದೆ. ಪ್ರಸ್ತುತ ಸಮಾಜಕ್ಕೆ ಅವಶ್ಯವಾಗಿರುವ ನಿಸ್ವಾರ್ಥ ಸೇವಾ ಭಾವನೆಯ ಸ್ವಯಂ ಸೇವಕರನ್ನು ನಿರಂತರವಾಗಿ ಸೃಜಿಸುವ ಮಹಾನ್ವ್ಯವಸ್ಥೆಯಾಗಿದೆ. ಪಠ್ಯಅಧ್ಯಯನದ ಜೊತೆಗೆ ತಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸುತ್ತಾ ವಿದ್ಯಾಥರ್ಿಗಳು ಸಮಾಜಕ್ಕೆ ಆಸ್ತಿಗಳಾಗುತ್ತಿದ್ದಾರೆ. ತಮಗೆದೊರೆತಿರುವ ಅವಕಾಶಗಳನ್ನು ಎನ್.ಎಸ್.ಎಸ್. ದ ಮೂಲ ಉದ್ದೇಶಗಳನ್ನು ಸಮಾಜಕ್ಕೆ ನೀಡುವಲ್ಲಿ ಯುವಕರು ಅಪ್ರತಿಮ ಸಹಕಾರವನ್ನು ತೊರುತ್ತಿದ್ದಾರೆ. ಈ ವ್ಯವಸ್ಥೆ ನಿರಂತರವಾಗಿ ಮುಂದುವರೆಯುವುದರಿಂದರಾಷ್ಟ್ರಪಿತ ಮಹತ್ಮಾಗಾಂಧೀಜಿಅವರುಕಂಡಕನಸಾದಗ್ರಾಮ ಸ್ವರಾಜ್ಯ-ರಾಮರಾಜ್ಯ ನಿಮರ್ಿಸಲು ಸಾಧ್ಯವಾಗುತ್ತದೆ"ಎಂದುಎನ್.ಎಸ್.ಎಸ್. ಕೋಶದಕನರ್ಾಟಕ ಸರಕಾರದ ಪದನಿಮಿತ್ಯಜಂಟಿ ಕಾರ್ಯದಶರ್ಿ ರಾಜ್ಯ ಸಂಪಕರ್ಾಧಿಕಾರಿಗಳಾದ ಡಾ.ಗಣನಾಥ ಶೆಟ್ಟಿಅಭಿಪ್ರಾಯ ವ್ಯಕ್ತಪಡಿಸಿದರು. 

ಅವರು ರಾಣಿಚನ್ನಮ್ಮ ವಿಶ್ವವಿದ್ಯಾಲಯದಎನ್.ಎಸ್.ಎಸ್. ಕೋಶವು ಹಿಂಡಾಲ್ಕೋಕಂಪನಿಯ ಸಹಕಾರದೊಂದಿಗೆ ಆಯೋಜಿಸಿರುವ ರಾಷ್ಟ್ರೀಯ ಭಾವೈಕ್ಯತಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಜಾತಿ ಮತ ಪಂಥಗಳಿಂದ ದೂರ ಸರಿದು ವಿಶ್ವ ಭಾತೃತ್ವ ಮತ್ತು ಮಾನವತೆಯ ಸಂದೇಶ ಸಾರುವಲ್ಲಿರಾಷ್ಟ್ರೀಯ ಸೇವಾ ಯೋಜನೆ ಮುನ್ನಡಿಇಡುತ್ತಿದೆಎಂದು ಹೇಳುತ್ತಾ ಸ್ವಯಂ ಸೇವಕರನ್ನು ಪ್ರೇರೆಪಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿದ್ದ ಬೆಳಗಾವಿ ಮಹಾನಗರ ಪಾಲಿಕೆಯ ಪೂಜ್ಯ ಮಹಾ ಪೌರರಾದ ಬಸಪ್ಪ ಸಿ ಚಿಕ್ಕಲದಿನ್ನಿ ಮಾತನಾಡಿ ಬೆಳಗಾವಿ ಜಿಲ್ಲೆಯಾದ್ಯಂತರಾಷ್ಟ್ರೀಯ ಸೇವಾ ಯೋಜನೆ ಘಟಕಗಳು ಮತ್ತು ಸ್ವಯಂ ಸೇವಕರು ಸಮಾಜ ಸೇವೆಯಲ್ಲಿ ಸಮರ್ಪಣಾ ಭಾವದಿಂದಸಮಪರ್ಿಸಿಕೊಂಡಿರುವುದು ಶ್ಲಾಘನೀಯ. ವಿಶ್ವ ವಿದ್ಯಾಲಯದಎನ್,ಎಸ್.ಎಸ್. ಕೋಶವು ಎಲ್ಲ ಮಹಾವಿದ್ಯಾಲಯಗಳಿಗೆ ಪ್ರೇರಣೆ ನೀಡುತ್ತಿರುವುದು ಸಂತಸ ತಂದಿದೆ ಎಂದರು.

ಹಿಂಡಾಲ್ಕೋಕಂಪನಿಯಎಚ್. ಆರ್ ಮುಖ್ಯಸ್ಥರಾದ ವಿಶ್ವಾಸ್ ಶಿಂಧೆ ಅವರು ಎನ್.ಎಸ್.ಎಸ್. ಮತ್ತು ಕಂಪನಿಯ ಸಹಭಾಗಿತ್ವವನ್ನು ಪ್ರಶಂಸಿಸಿದರು. ಇಂತಹ ಸಮಾಜ ಸೇವಾ ಕಾರ್ಯಗಳಿಗೆ ಸಹಕಾರ ನೀಡಲುಕಂಪನಿಯು ಸದಾ ಸಿದ್ಧವಾಗಿದೆ ಎಂದರು. 

ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಿವಾನಂದ ಬಿ. ಹೊಸಮನಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ವ್ಯಕ್ತಿತ್ವ ವಿಕಸನದ ಹೆದ್ದಾರಿ ಆಗಿದೆ ಎಂದರು. ವಿಶ್ವವಿದ್ಯಾಲಯದ ಪ್ರತೀ ಕಾಲೇಜುಗಳಲ್ಲಿ ಎನ್.ಎಸ್.ಎಸ್. ಘಟಕಗಳನ್ನು ಸ್ಥಾಪಿಸುವ ಗುರಿ ಹೊಂದಿದೆ. ವಿಶ್ವವಿದ್ಯಾಲಯವು ಸಮಾಜ ಸೇವೆ ನಿರತ ಸ್ವಯಂ ಸೇವಕರಿಗೆ ಸರ್ವವಿಧಿತ ಸಹಕಾರವನ್ನು ನೀಡಲು ಸಿದ್ಧವಿದೆ ಎಂದರು.

 ಎನ್,ಎಸ್.ಎಸ್.ಸಂಯೋಜ ನಾಧಿಕಾರಿಗಳಾದ ಪ್ರೊ. ಎಸ್.ಓ.ಹಲಸಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಎಳು ದಿನಗಳವರೆಗೆ ಹಮ್ಮಿಕೊಂಡಿರುವ ವಿವಿಧ ಕಾರ್ಯಚಟುವಟಿಕೆಗಳಾದ ವನಮಹೋತ್ಸವ, ಮಳೆ ನೀರುಕೊಯ್ಲು ಪ್ರಾತ್ಯಕ್ಷಿತೆ, ಗಾಂಧೀಜಿ ಸ್ಮರಣೆ, ಯೋಗ ಮತ್ತು ಪ್ರಾರ್ಥನೆ, ಮಹಿಳಾ ಸಬಲೀಕರಣ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆಎಂದು ತಿಳಿಸಿದರು. 

 ಕಾರ್ಯಕ್ರಮದಲ್ಲಿ ನೋಡಲ್ ಅಧಿಕಾರಿ ಪ್ರೊ. ಎಸ್.ಎನ್. ಮೂಲಿಮನಿ, ಶಿಬಿರ ಸಂಘಟನಾ ಸಮಿತಿ ಸದಸ್ಯರಾದ ಪ್ರೊ. ಗಂಗಾಧರಅಗಸರ, ಪ್ರೊ. ಶಂಕರ ನಿಂಗನೂರ, ಪ್ರೊ. ಶೋಭಾಕೊಕಟನೂರ, ಸಂತೋಷ ಚಿಪ್ಪಾಡಿ, ಪ್ರವೀಣ ಶಹಾಪೂರ, ಕಾರ್ಯಕ್ರಮ ಅಧಿಕಾರಿಗಳು, ವಿವಿಧ ರಾಜ್ಯಗಳ ಸ್ವಯಂ ಸೇವಕರು ಮುಂತಾದವರು ಹಾಜರಿದ್ದರು.

ಮಹೇಶ ಹಿರೇಮಠ ಪ್ರಾಥರ್ಿಸಿದರು, ಸ್ವಯಂ ಸೇವಕರುಎನ್.ಎಸ್.ಎಸ್. ಗೀತೆ ಹಾಡಿದರು, ಡಾ. ನಂದಿನಿ ದೇವರಮನಿ ಸ್ವಾಗತಿಸಿದರು, ದಿವ್ಯಾ ನಿರೂಪಿಸಿದರು, ವಿಜಯಪೂರ ನೋಡಲ್ ಅಧಿಕಾರಿ ಪ್ರೊ.ಎಸ್.ಎಮ್. ಸಜ್ಜಾದೆ ವಂದಿಸಿದರು.