ಬೆಂಗಳೂರು, ಜೂ 10, ರಾಜ್ಯದಲ್ಲಿ ಉಸಿರಾಟದ ತೊಂದರೆ (ಸಾರಿ) ಮತ್ತು ಜ್ವರದ ಲಕ್ಷಣಗಳಿಂದ (ಐಎಲ್ಐ) ಮೃತಪಟ್ಟವರ ಕೋವಿಡ್-19 ಪರೀಕ್ಷೆ ನಡೆಸಲಾಗುತ್ತಿಲ್ಲ ಎಂಬ ಆರೋಪಗಳಿಗೆ ರಾಜ್ಯ ಆರೋಗ್ಯ ಇಲಾಖೆ ಸ್ಪಷ್ಟೀಕರಣ ನೀಡಿದೆ.ಉಸಿರಾಟದ ತೊಂದರೆ ಮತ್ತು ಜ್ವರದ ಲಕ್ಷಣಗಳಿಂದ ಮೃತಪಟ್ಟವರಿಗೆ ಕೂಡ 6 ಗಂಟೆಗಳೊಳಗೆ ಕೋವಿಡ್ ಚಿಕಿತ್ಸೆ ನಡೆಸಲಾಗುತ್ತಿದೆ. ಅವರಲ್ಲಿ ಸೋಂಕು ದೃಢಪಟ್ಟಲ್ಲಿ ಎಲ್ಲಾ ಹತ್ತಿರದ ಸಂಪರ್ಕಿತರನ್ನು ಕೂಡ ಪರೀಕ್ಷಿಸಲಾಗುತ್ತಿದೆ ಎಂದು ಇಲಾಖೆ ಸ್ಪಷ್ಟೀಕರಣ ನೀಡಿದೆ.ರಾಜ್ಯದಲ್ಲಿ ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ನಡೆಸಲು ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಸರ್ಕಾರ ಬದ್ಧವಾಗಿದೆ ಎಂದು ಇಲಾಖೆ ತಿಳಿಸಿದೆ.