ಕೋವಿಡ್ ಹಾವಳಿ: ನ್ಯೂಜಿಲೆಂಡ್ ನಲ್ಲಿ ತುರ್ತು ಪರಿಸ್ಥಿತಿ ವಿಸ್ತರಣೆ

ವೆಲ್ಲಿಂಗ್ಟನ್, ಎಪ್ರಿಲ್ 7, ಕೋವಿಡ್ ವಿರುದ್ಧ ಹೋರಾಡಲು ನ್ಯೂಜಿಲೆಂಡ್ ನಲ್ಲಿ  ಮಂಗಳವಾರ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಮತ್ತೆ 7 ದಿನಗಳ ಕಾಲ  ವಿಸ್ತರಿಸಲಾಗಿದೆ  ದೇಶದ ಜನರ ಸುರಕ್ಷತೆ , ಆರೋಗ್ಯದ ಕಾರಣ ಇದನ್ನು ಎರಡನೇ ಬಾರಿಗೆ ಎರಡನೇ ಭಾರಿಗೆ ವಿಸ್ತರಣೆ ಮಾಡಲಾಗಿದೆ. ಆರಂಭಿಕ ಘೋಷಣೆಯನ್ನು ಕಳದೆ 25 ರಂದು ಮಾಡಲಾಗಿತ್ತು ಮತ್ತು ಏಳು ದಿನಗಳ ಘೋಷಣೆಯನ್ನು ಅಗತ್ಯವಿರುವಷ್ಟು ಭಾರಿ ವಿಸ್ತರಿಸಬಹುದಾಗಿದೆ  ಕಳದೆ ತಿಂಗಳು  ನ್ಯೂಜಿಲೆಂಡ್ ರಾಷ್ಟ್ರೀಯ ಲಾಕ್‌ಡೌನ್‌ಗೆ ಪ್ರವೇಶಿಸಿತ್ತು  ಇದು ಕನಿಷ್ಠ ನಾಲ್ಕು ವಾರಗಳವರೆಗೆ ಇರುತ್ತದೆ.
ನಾಗರಿಕ ರಕ್ಷಣಾ ತುರ್ತುಸ್ಥಿತಿ ನಿರ್ವಹಣಾ ನಿರ್ದೇಶಕರ ಸಲಹೆಯ ಮೇರೆಗೆ ಮತ್ತು ಪ್ರಧಾನ ಮಂತ್ರಿಯೊಂದಿಗೆ ಸಮಾಲೋಚಿಸಿದ ನಂತರ, ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು  ನಂತರ  ರಕ್ಷಣಾ ಸಚಿವ ಪೀನಿ ಹೆನಾರೆ ಹೇಳಿಕೆಯಲ್ಲಿ ತಿಳಿಸಿದ್ದಾರೆ .ರಾಷ್ಟ್ರೀಯ ತುರ್ತು ಪರಿಸ್ಥಿತಿ ಸಕ್ರಿಯಗೊಳಿಸಿದ ಅಧಿಕಾರಗಳು ನಾಗರಿಕ ರಕ್ಷಣಾ ತುರ್ತುಸ್ಥಿತಿ ನಿರ್ವಹಣಾ ವೃತ್ತಿಪರರಿಗೆ ಈ ಸಮಯದಲ್ಲಿ ರಸ್ತೆಗಳು, ಸಂಚಾರ ಮತ್ತು ಸಾರ್ವಜನಿಕ ಸ್ಥಳಗಳನ್ನು ನಿರ್ವಹಿಸುವುದು ಸೇರಿದಂತೆ ನಿರ್ಣಾಯಕ ಕಾರ್ಯಗಳನ್ನು ನಿರ್ವಹಿಸಲು ಅನುವು ಮಾಡಿಕೊಡಲಿದೆ ಮೇಲಾಗಿ  ಪ್ರಥಮ ಚಿಕಿತ್ಸೆ, ಆಹಾರ, ಆಶ್ರಯ ಮತ್ತು ವಸತಿ ಸೌಕರ್ಯಗಳನ್ನೂ ಒದಗಿಸುತ್ತದೆ.