ಕೋವಿಡ್ ಬಿಕ್ಕಟ್ಟು : ಜನಗಣತಿಯನ್ನು 2021ಕ್ಕೆ ಮುಂದೂಡಿದ ರಷ್ಯಾ

ಮಾಸ್ಕೋ, ಜೂನ್ 30: ಮಾರಕ ಕೊರೋನಾ ವೈರಸ್ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಅನೇಕ ಕಾರ್ಯಕ್ರಮಗಳ ಮುಂದೂಡಿಕೆಗೆ, ಯೋಜನೆಗಳ ಜಾರಿಗೆ ಪ್ರಮುಖ ಅಡ್ಡಿಯಾಗಿ ಕಾಡುತ್ತಿದೆ.ರಷ್ಯಾ ದೇಶವು ಜನಗಣತಿಯನ್ನು ಮುಂದೂಡಿದ್ದು, 2021ರ ಏಪ್ರಿಲ್ ನಲ್ಲಿ ನಡೆಸಲು ನಿರ್ಧರಿಸಿದೆ. ಅಧಿಕೃತ ಕಾನೂನು ಮಾಹಿತಿ ಪೋರ್ಟಲ್‌ನಲ್ಲಿ ಪ್ರಕಟವಾದ ಸುಗ್ರೀವಾಜ್ಞೆಯಲ್ಲಿ ಈ ವಿಷಯ ತಿಳಿಸಲಾಗಿದೆ.ಜನಗಣತಿಯನ್ನು ಇದೇ ವರ್ಷದ ಅಕ್ಟೋಬರ್‌ನಲ್ಲಿ ಯೋಜಿಸಲಾಗಿತ್ತು ಆದರೆ ನಂತರ ಕೊರೋನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಏಪ್ರಿಲ್ 2021 ರವರೆಗೆ ಮುಂದೂಡಲಾಗಿದೆ. ವೈಯಕ್ತಿಕವಾಗಿ ಮಾಹಿತಿ ಸಂಗ್ರಹಿಸಲು ಸುಮಾರು 315,000 ಜನಗಣತಿ ಕಾರ್ಮಿಕರು ಮನೆ ಮನೆಗೆ ತೆರಳಲಿದ್ದಾರೆ. ನಿವಾಸಿಗಳು ಆನ್‌ಲೈನ್‌ನಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಲು, ಸರ್ಕಾರಿ ಸೇವಾ ಕೇಂದ್ರ ಅಥವಾ ಜನಗಣತಿ ಕೇಂದ್ರಕ್ಕೆ ಭೇಟಿ ನೀಡಬಹುದು ಎಂದು ತಿಳಿಸಲಾಗಿದೆ.