ಬಾಂಗ್ಲಾದೇಶದಲ್ಲಿ 1,30,000 ದಾಟಿದ ಕೊವಿಡ್‍-19 ಪ್ರಕರಣಗಳು, ಸಾವಿನ ಸಂಖ್ಯೆ 1,661ಕ್ಕೆ ಏರಿಕೆ

ಕೊಲ್ಕತಾ, ಜೂನ್ 26: (ಕ್ಸಿನ್ಹುವಾ) ಬಾಂಗ್ಲಾದೇಶದಲ್ಲಿ ದೃಢಪಟ್ಟ ಕೊವಿಡ್‍-19 ಸೋಂಕು ಪ್ರಕರಣಗಳ ಸಂಖ್ಯೆ ಶುಕ್ರವಾರ 1,30,000 ದಾಟಿದ್ದು, ಸಾವಿನ ಸಂಖ್ಯೆ 1,661ಕ್ಕೆ ತಲುಪಿದೆ. ‘ಬಾಂಗ್ಲಾದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 3,868 ಹೊಸ ಕೊವಿಡ್‍-19 ಪ್ರಕರಣಗಳು ದೃಢಪಟ್ಟಿದ್ದು, 31 ಪುರುಷರು ಮತ್ತು 9 ಮಹಿಳೆಯರು ಸೇರಿದಂತೆ 40 ಸಾವುಗಳು ವರದಿಯಾಗಿವೆ.’ ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿ ನಸಿಮಾ ಸುಲ್ತಾನಾ ಶುಕ್ರವಾರ ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ‘ದೇಶದಲ್ಲಿ ದೃಢಪಟ್ಟ ಸೋಂಕು ಪ್ರಕರಣಗಳ ಸಂಖ್ಯೆ 130,474ರಷ್ಟಿದ್ದರೆ, ಸಾವಿನ ಸಂಖ್ಯೆ 1,661 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ ದಾಖಲೆಯ ಗರಿಷ್ಠ 18,498 ಮಾದರಿಗಳನ್ನು ದೇಶಾದ್ಯಂತ ಇರುವ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾಗಿದೆ.’ ಎಂದು ಅವರು ಹೇಳಿದ್ದಾರೆ.ಶುಕ್ರವಾರ 1,638 ರೋಗಿಗಳು ಸೋಂಕಿನಿಂದ ಚೇತರಿಸಿಕೊಳ್ಳುವುದರೊಂದಿಗೆ ಗುಣಮುಖರಾದವರ ಒಟ್ಟು ಸಂಖ್ಯೆ  53,133 ರಷ್ಟಿದೆ ಎಂದು ಅವರು ಹೇಳಿದ್ದಾರೆ.