ಕೋಲ್ಕೊತಾ, ಮಾ 23, ಕೊರೊನಾ ವೈರಸ್ ಸೋಂಕಿನ ಬಿಕ್ಕಟ್ಟಿನ ನಡುವೆಯೂ ಬಂಗಾಳ ಕ್ರಿಕೆಟ್ ಸಂಸ್ಥೆ ತನ್ನ ಕ್ಲಬ್ ನ ಕ್ರಿಕೆಟಿಗರು ಮತ್ತು ಪಂದ್ಯದ ಅಧಿಕಾರಿಗಳಿಗೆ ವಿಮಾ ರಕ್ಷಣೆಯನ್ನು ಖಾತರಿಪಡಿಸಿದೆ.ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಸರಕಾರ ಕಳೆದ ಭಾನುವಾರ ಕೋಲ್ಕೊತಾವನ್ನು ಸಂಪೂರ್ಣ ಬಂದ್ ಮಾಡಲು ಆದೇಶಿಸಿದ ಹಿನ್ನೆಲೆಯಲ್ಲಿ ಈ ವಾರಂತ್ಯದವರೆಗೂ ಸಿಎಬಿ ಬಂದ್ ಆಗಿರಲಿದೆ. ಕೊರೊನಾ-19 ಅನ್ನು ಒಳಗೊಳ್ಳಲು ಸಂಸ್ಥೆಯಿಂದ ವಿಮಾ ಪಾಲಿಸಿಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವ ಸಂಬಂಧ ಸಿಎಬಿ ವೈದ್ಯಕೀಯ ಸಮಿತಿ ಅಧ್ಯಕ್ಷ ಪ್ರದೀಪ್ ಡೇ ಮತ್ತು ವೈದ್ಯಕೀಯ ಸಮಿತಿ ಸದಸ್ಯ ಸಂತನು ಮಿತ್ರ, ವಾರದ ಆರಂಭದಲ್ಲಿ ಎಸ್‌ಬಿಐ ಜನರಲ್ ಇನ್ಶೂರೆನ್ಸ್ ಕಂಪನಿಯ ಪ್ರತಿನಿಧಿಗಳನ್ನು ಭೇಟಿ ಮಾಡಿದ್ದರು.
ವಿಮಾ ಸೌಲಭ್ಯ ಒಳಪಡುವ ಕುರಿತು ಹೇಳಿಕೆ ನೀಡಿರುವ ಎಸ್ ಬಿಐ, ಕೊರೊನಾ ವೈರಸ್ ನಿಂದಾಗಿ ಸಂಸ್ಥೆಯಲ್ಲದೆ, ಅದರ ಕ್ರಿಕೆಟಿಗರು, ಅಂಪೈರ್ ಗಳು, ಸ್ಕೋರ್ ಗಳು ಸೇರಿದಂತೆ ಇತರರು ವಿಮಾ ರಕ್ಷಣಾ ವ್ಯಾಪ್ತಿಗೆ ಒಳಪಡಲಿದ್ದಾರೆ ಎಂದು ಹೇಳಿದೆ.